ಗೋಕಾಕ್

ನನ್ನ ಜೀವನ ನನ್ನ ಸ್ವಚ್ಚ ನಗರ ಕಾರ್ಯಕ್ರಮಕ್ಕೆ ಅಂಭಿರಾವ ಪಾಟೀಲ ಚಾಲನೆ

ನನ್ನ ಜೀವನ ನನ್ನ ಸ್ವಚ್ಚ ನಗರ ಕಾರ್ಯಕ್ರಮಕ್ಕೆ  ಅಂಭಿರಾವ ಪಾಟೀಲ ಚಾಲನೆ

ಘಟಪ್ರಭಾ 21: ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ ನಗರ 2.0 ಯೋಜನೆಯಡಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಚ ನಗರ” ಕಾರ್ಯಕ್ರಮಕ್ಕೆ ಕಾರ್ಮಿಕ ಮುಂಖಡರಾದ ಅಂಭಿರಾವ ಪಾಟೀಲ ಚಾಲನೆ ನೀಡಿದರು. 

ನಂತರ ಅವರು ಘಟಪ್ರಭಾ ಪುರಸಭೆ ಕಛೇರಿ ಹತ್ತಿರವ (ಖಠಡಿಛಿಜ ಖಜಛಿಠಜಡಿಥಿ ಚಿಟಿಜ ಖಜಜ) ಆರ್‌.ಆರ್‌.ಆರ್ ಅಭಿಯಾನದ ಕಛೇರಿಯನ್ನು ಉದ್ಘಾಟಿಸಿದರು.  

ಮುಖ್ಯಾಧಿಕಾರಿ ಎಮ್‌.ಎಸ್‌.ಪಾಟೀಲ ಮಾತನಾಡಿ ಸ್ವಚ್ಛ ಭಾರತ ಮಿಷನ ನಗರ 2.0 ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದ್ದು, ಜನರಿಗೆ ಹತ್ತಿರವಿರುವ ವಾಣಿಜ್ಯ ಮಳಿಗೆ ಮಲ್ಲಾಪೂರ ಪಿ.ಜಿ,ಯಲ್ಲಿ ಹಾಗೂ ಧೂಪದಾಳ ಗ್ರಾಮ ಪಂಚಾಯತಿಯ ಹಳೆಯ ಕಚೇರಿಯಲ್ಲಿ ಬಸವನಗರ ಧೂಪದಾಳ-ಘಟಪ್ರಭಾ ಭಾಗಗಳ ಜನರಿಗೆ ತಮ್ಮಲ್ಲಿ ಇರುವ ಬಳಕೆ ಆಗದ ನಿರುಪಯುಕ್ತ ಆಟಿಕೆ ವಸ್ತುಗಳು ಬಟ್ಟೆ - ಹಳೆಯ ಜಿನ್ಸ್‌, ಸಮವಸ್ತ್ರ, ಸೀರೆಗಳು ಮರುಬಳಕೆ ಮಾಡಬಹುದಾದ ಬಟ್ಟೆಗಳು ದಿನಪತ್ರಿಕೆ ಮಾಸಪತ್ರಿಕೆ ಹಳೆಯ ಪುಸ್ತಕಗಳು. ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳು ಎಲೆಕ್ಟ್ರಾನಿಕ್ ವಸ್ತುಗಳು ನೀಡಬಹುದು. 

 ಅಲ್ಲದೇ ಅಭಿಯಾನದಲ್ಲಿ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ನಾಗರಿಕರು 2023 ರ ಮೇ-20 ರಿಂದ 2023 ರ ಜೂನ-05 ರವರೆಗೆ ಜರುಗುವ “ನನ್ನ ಜೀವನ ನನ್ನ ಸ್ವಚ್ಛ ನಗರ” ಕಾರ್ಯಕ್ರಮದಡಿ 06 ವಿವಿಧ ಬಗೆಯ ಮರುಬಳಕೆ ವಸ್ತುಗಳನ್ನು ಮೇಲ್ಕಾಣಿಸಿದ ಆರ್‌.ಆರ್‌.ಆರ್‌. ಕೇಂದ್ರಗಳಿಗೆ ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಪಾಟೀಲ ತಿಳಿಸಿದರು. 

ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಡಿ.ಎಮ್‌.ದಳವಾಯಿ, ರಾಮಣ್ಣಾ ಹುಕ್ಕೇರಿ, ಸುರೇಶ ಪಾಟೀಲ, ಜಿ.ಎಸ್‌. ರಜಪೂತ, ಪ.ಪಂ ಮಾಜಿ ಉಪಾಧ್ಯಕ್ಷ ಈರಣ್ಣಾ ಕಲಕುಟಗಿ, ಪ.ಪಂ ಮಾಜಿ ಸದಸ್ಯರಾದ ಪ್ರವೀನ ಮಠಗಾರ, ಸಲೀಮ ಕಬ್ಬೂರ, ಇಬ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಮಲ್ಲು ಕೋಳಿ, ನಾಗರಾಜ ಚಚಡಿ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶೇಖರ ಕುಲಗೂಡ, ಸುನೀಲ ನಾಯಿಕ, ಲಕ್ಷ್ಮಣ ಮೇತ್ರಿ, ಕಾಡಪ್ಪ ಕರೋಶಿ, ಪ್ರತಾಪ ಬೆವಿನಗಡದ ಪ.ಪಂ ಸಿಬ್ಬಂದಿ ವರ್ಗದವರು ಇದ್ದರು.   



ಸುದ್ದಿ ಓದಿ