ಬೈಲಹೊಂಗಲ

‘ಅಂಬಿಗರ ಚೌಡಯ್ಯನವರ ಆದರ್ಶ ನಮಗೆಲ್ಲ ಸ್ಫೂರ್ತಿ’

‘ಅಂಬಿಗರ ಚೌಡಯ್ಯನವರ ಆದರ್ಶ ನಮಗೆಲ್ಲ ಸ್ಫೂರ್ತಿ’

ಬೈಲಹೊಂಗಲ 22: ತೀಕ್ಷ-್ಣ ವಚನಗಳ ಮೂಲಕ ತಮ್ಮದೆ ಆದ ಛಾಪು ಮೂಡಿಸಿ ಸಮಾಜದ ಅಂಕು ಡೊಂಕು ತಿದ್ದಲು ಮಾರ್ಗದರ್ಶನ ನೀಡಿದ ನಿಜಶರಣ ಅಂಬಿಗರ ಚೌಡಯ್ಯ ಅವರ ಆದರ್ಶ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ ಹೇಳಿದರು.  

ಅವರು ಪಟ್ಟಣದ ಪುರಸಭೆಯ ಆವರಣದಲ್ಲಿ ಚೌಡಯ್ಯನವರ 902 ನೇ ಜಯಂತಿ ಅಂಗವಾಗಿ  ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. 

ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ, ಸಮಾಜದ ಮುಖಂಡ ಮಲ್ಲಪ್ಪ ಮುರಗೋಡ ಮಾತನಾಡಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 7 ಶತಮಾನಗಳ ಮೊದಲೆ ಮುನ್ನುಡಿ ಬರೆದ ಶರಣರಲ್ಲಿ ಚೌಡಯ್ಯನವರು ಪ್ರಮುಖರು. ತಮ್ಮ ವಚನಗಳ ಮೂಲಕ ಸಮಾಜದ ಕಂದಾಚಾರ ಮತ್ತು ಮೂಢನಂಬಿಕೆಗಳನ್ನು ಖಂಡಿಸಿ, ಕಾಯಕದ ಮಹತ್ವವನ್ನು ಒತ್ತಿ ಹೇಳಿದ್ದು ಎಲ್ಲರಿಗೂ ಆದರ್ಶ ಎಂದರು. 

ನಿವೃತ್ತ ತಹಶೀಲ್ದಾರ ಆರ್‌.ಜಿ. ಶಿವಬಸನ್ನವರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ಸದಸ್ಯರಾದ ವಿಜಯ ಬೋಳಣ್ಣವರ, ಶಿವಾನಂದ ಕೋಲಕಾರ, ಜಗದೀಶ ಜಂಬಗಿ, ಮಲ್ಲೇಶ ಹೊಸಮನಿ, ಸುಧಿರ ವಾಲಿ, ಬಸವರಾಜ ಕಲಾದಗಿ, ಪ್ರಕಾಶ ಕೊಟಬಾಗಿ, ಫಕೀರ​‍್ಪ ಜಾಡರ, ಸಿದ್ದಣ್ಣ ಸುಣಗಾರ, ಬಿ.ವಾಯ್‌. ಪೂಜೇರ, ರಮೇಶ ನೀಲನ್ನವರ, ಬಸವರಾಜ ಪೂಜೇರ, ಬಸವರಾಜ ಜಂಬಗಿ, ಇಂಜನೀಯರ್ ವೀರಣ್ಣ ಕೊಂಗವಾಡ, ಮ್ಯಾನೇಜರ್ ಎಂ.ಆಯ್‌. ಕುಟ್ರಿ, ರಮೇಶ ಹಿಟ್ಟಣಗಿ, ಬಿ.ಐ.ಗುಡಮನಿ, ಸುರೇಶ ಪಾಟೀಲ, ಸೊಮನಿಂಗ ದೊಡಮನಿ, ಸಮಾಜ ಬಾಂಧವರು ಸಿಬ್ಬಂದಿ ವರ್ಗ ಹಾಗೂ ಸಮಾಜ ಬಾಂಧವರು ಇದ್ದರು. 

ತಹಶೀಲ್ದಾರ ಕಚೇರಿ-ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚೌಡಯ್ಯನವರ ಜಯಂತಿ ಆಚರಿಸಿದರು. ಸಮಾಜ ಬಾಂಧವರು, ಸಿಬ್ಬಂದಿ ಇದ್ದರು. 


ಸುದ್ದಿ ಓದಿ