ತಾಳಿಕೋಟಿ

ಅಂಬಿಗರ ಚೌಡಯ್ಯರ ಆದರ್ಶ ಪಾಲಿಸಿ: ಶಾಂತಗಂಗಾಧರ ಶ್ರೀ

ಅಂಬಿಗರ ಚೌಡಯ್ಯರ ಆದರ್ಶ ಪಾಲಿಸಿ: ಶಾಂತಗಂಗಾಧರ ಶ್ರೀ

ತಾಳಿಕೋಟಿ20:  ಈ ಜಗತ್ತಿನಲ್ಲಿ ಬಂದಿರುವ ಎಲ್ಲ ಮಹಾತ್ಮರು, ಶರಣರು ಹಾಗೂ ದಾರ್ಶನಿಕರು ನಮಗೆ ಸನ್ಮಾರ್ಗದರ್ಶನ ಮಾಡಿಸಲು ಬಂದಿದ್ದಾರೆ. ಕೇವಲ ಆ ಮಹಾತ್ಮರ ಜಯಂತಿಯನ್ನು ಆಚರಿಸದೆ ಅವರು ಬಿಟ್ಟು ಹೋದ ಅವರ ಬದುಕಿನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಎಂದು ಸಿಂದಗಿ ಗುರುದೇವ ಆಶ್ರಮದ ಪೀಠಾಧಿಪತಿ ಪರಮಪೂಜ್ಯ ಶಾಂತ ಗಂಗಾಧರ ಸ್ವಾಮಿಗಳು ತಿಳಿಸಿದರು. 

ಸಮೀಪದ ಬಿಳೇಭಾವಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಆಶಿರ್ವಚನ ನೀಡಿದರು. 

ಅಂಬಿಗರ ಚೌಡಯ್ಯನವರು 333 ಶ್ರೇಷ್ಠ ವಚನಗಳನ್ನು ರಚಿಸಿದ್ದಾರೆ ಅವರ ವಚನಗಳಲ್ಲಿ ದಿಟ್ಟತನವನ್ನು ನಾವು ಕಾಣುತ್ತೆವೆ. ಸಮಾಜದಲ್ಲಿರುವ ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದರು. ನಿಜವಾದ ದೇವನ ಪರಿಚಯ ಅವರು ಮಾಡಿಸಿದ್ದಾರೆ. ಇದನ್ನು ತಿಳಿಯುವ ಅಗತ್ಯ ಇದೆ. ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಇದು ಪಣ್ಯದಾಯಕ ಕಾರ್ಯವಾಗಿದೆ ಎಂದರು. 

ಜಿ. ಪಂ. ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ ಭಾರತದ ವೈವಿಧ್ಯತೆಯನ್ನು ನಾವು ಬಿಳೇಭಾವಿ ಗ್ರಾಮದಲ್ಲಿ ಕಾಣುತ್ತೆವೆ. ಇಲ್ಲಿ ಎಲ್ಲ ಸಮಾಜದವರು ಒಂದಾಗಿ ಜಾತ್ರಯನ್ನು ಆಚರಿಸುತ್ತಾರೆ. ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಏರಿ​‍್ಡಸುವೆ ಏಕೈಕ ಗ್ರಾಮ ಇದಾಗಿದೆ ಎಂದು ತಿಳಿಸಿದರು. 

ಕಾಂಗ್ರೆಸ್ ಮುಖಂಡ ಬಾಬುಗೌಡ ಪೀರಾಪೂರ ಅವರು ಈ ದೇವಸ್ಥಾನ ಶಾಸಕ ನಡಹಳ್ಳಿಯವರು ಈ ಭಾಗದ ಶಾಸಕರಾಗಿದ್ದಾಗ ನಿರ್ಮಾಣಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಜಾತ್ರೆ ಹಾಗೂ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 

ಶಾಸಕ ಪುತ್ರ ಸಂಗನಗೌಡ ಪಾಟೀಲ ಮಾತನಾಡಿ ನನ್ನ ತಂದೆಯವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಎಲ್ಲ ಗ್ರಾಮಗಳಿಗೂ ಅನುದಾನ ಬಿಡುಗಡೆಗೊಳಿಸಿದ್ದಾರೆ. ಬಿಳೇಭಾವಿ ಗ್ರಾಮದಲ್ಲಿ ಈಗಾಗಲೆ ಹಲವಾರು ಕಾಮಗಾರಿಗಳು ನಡೆಯುತ್ತಿವೆ. ಅಂಬಿಗರ ಚೌಡಯ್ಯ ಭವನಕ್ಕೆ 4ಲಕ್ಷ ಹಾಗೂ ಇನ್ನೆರಡೂ ದೇವಸ್ಥಾನಗಳಿಗೂ ಅನುದಾನ ನೀಡಿದ್ದಾರೆ. ನಿಮ್ಮ ಆಶಿರ್ವಾದ ಅವರ ಮೇಲಿರಲಿ ಎಂದರು. 

ಹಾಲಭಾವಿ ಆರೂಢ ಮಠದ ವೇ. ಮೂ.ದೇವಿಂದ್ರ ಸ್ವಾಮಿ ಸರೂರ, ಮಠದ ವೇ. ಮೂ. ಮೃತ್ಯುಂಜಯ್ ಗುರುವಿನ, ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು ಬಿಳೇಭಾವಿಯ ವೇ. ಮೂ. ಸಿದ್ದಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.  

ತಾ. ಪಂ. ಮಾಜಿ ಅಧ್ಯಕ್ಷ ರಾಜೂಗೌಡ ಕೋಳೂರ, ಜಿ. ಪಂ. ಮಾಜಿ ಸದದಸ್ಯ ಸಾಹೇಬಣ್ಣ ಆಲ್ಯಾಳ, ಸಮಾಜ ಸೇವಕ ಪ್ರಶಾಂತ ಹಾವರಗಿ, ಬೀಜಾನಲಿ ನೀರಲಗಿ, ಮಲ್ಲನಗೌಡ ಮಾಳಿ, ಮುತ್ತುಗೌಡ ಮಾಳಿ, ಅಮರಣ್ಣ ಹಿರೂರ, ಸಂಗಪ್ಪ ಶಳ್ಳಗಿ, ಕುಮಾರಗೌಡ ದೊಡಮನಿ, ನಿಂಗಣ್ಣ ಕೆಸರಟ್ಟಿ ಹುಲಗೆಪ್ಪ ಪೂಜಾರಿ, ದೇವಿಂದ್ರ​‍್ಪ ಮೇಟಿ, ತಿಪ್ಪಣ್ಣ ಕಡಕಲ್ಲ, ಸುಬಾಸಚಂದ್ರ ಬಿದರಕುಂದಿ, ಗೌಡಪ್ಪಗೌಡ ಮಾಳಿ, ಮಲ್ಲನಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಹಣಮಂತ್ರಾಯ ಬೈಲಾಪೂರ, ಭೀಮಣ್ಣ ಅಮ್ಮಾಪೂರ ಬಸವರಾಜ ಅರಸನಾಳ, ಬಾಗಪ್ಪ ಕೂಚಬಾಳ, ವಾಸಪ್ಪ ಕಾರಗನೂರ, ಭೈರಣ್ಣ ಅಂಬಿಗೇರ, ಶಿವಣ್ಣ ಕಡಕಲ್ಲ, ಶಾಂತು ಹೊಸಕೇರಿ ಇದ್ದರು. 


ಸುದ್ದಿ ಓದಿ