ಶರಣರ ವಚನಗಳು ಸಾರ್ವಕಾಲಿಕ ಸತ್ಯ: ಪೂಜಾರ.
ರಾಣಿಬೆನ್ನೂರ 21: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸರ್ವರ ಕಲ್ಯಾಣಕ್ಕಾಗಿ ಸರ್ವ ಸಮಾಜದ ಶರಣರನ್ನು ಒಗ್ಗೂಡಿಸಿ ಸಮಾನತೆಯ ಬದುಕಿಗೆ ನಾಂದಿ ಹಾಡಿದವರು. ಅಂತಹ ಶರಣರ ಸಮಕಾಲಿನವರಾದ ನಿಜ ಶರಣ ಅಂಬಿಗರ ಚೌಡಯ್ಯನವರು ಅಂದು ಅವರು ತಮ್ಮ ವಿಚಾರಧಾರೆಗಳನ್ನು ಜನಸಮುದಾಯದ ಸಮಾನತೆಯ ಜಾಗೃತಿಗಾಗಿ ವಚನಗಳ ಮೂಲಕ ಚಾಟಿ ಬೀಸಿದ ಮಹಾನ್ ಶರಣರು, ಶರಣರ ವಚನಗಳು ಇಂದಿಗೂ ಅವು ಪ್ರಸ್ತುತವೆಸುತ್ತವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಗುರುವಾರ ಇಲ್ಲಿನ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದರು.
ನಗರಕ್ಕಾಗಮಿಸಿದ ನೂತನ ತಹಶೀಲ್ದಾರ ಹಾಗೂ ತಾಲೂಕ ದಂಡಾಧಿಕಾರಿ, ಶಂಕರ ಭಾರ್ಕಿ, ಸಮಾಜದ ತಾಲೂಕಾಧ್ಯಕ್ಷ ರಾಮಣ್ಣ ಐರಣಿ, ಅವರು ಸಮಾಜ ನಡೆದು ಬಂದ ಹಾದಿ ಹಾಗೂ ಆಗಬೇಕಾದ ಅಭಿವೃದ್ಧಿ ಕುರಿತಂತೆ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಎಪಿಎಂಸಿ ಅಧ್ಯಕ್ಷ ಬಸವರಾಜಪ್ಪ ಸವಣೂರು, ನಗರಸಭಾ ಸದಸ್ಯ ರಾಜು ಅಡ್ಮನಿ, ದೈಹಿಕ ಶಿಕ್ಷಣ ನಿರ್ದೇಶಕ ಎ.ಬಿ.ಚಂದ್ರಶೇಖರ,ಪೌರಾಯುಕ್ತ ಡಾ.ಎನ್ ಮಹಾಂತೇಶ್, ಜಿಲ್ಲಾ ಪಂಚಾಯತ್ನ ನಿರಂಜನ ಸ್ವಾಮಿ, ಬಿಸಿಎಂ ಇಲಾಖೆಯ ಪ್ರಸಾದ, ಸಮಾಜದ ಮುಖಂಡರಾದ ಫಕ್ಕೀರಪ್ಪ ತುಮ್ಮಿನಕಟ್ಟಿ, ಮಾರುತಿ ಬಾಳಿಕಾಯಿ, ಮನೋಹರ ಸುಣಗಾರ, ಹೆಚ್.ಹೆಚ್.ತಿಮ್ಮೇನಹಳ್ಳಿ, ಎ.ಬಿ.ಚಂದ್ರಶೇಖರ, ರಾಜು ರಟ್ಟೀಹಳ್ಳಿ, ಲಕ್ಷ್ಮಣ ದಾಸರ, ರಾಜೇಂದ್ರ ಅಂಬಿಗೇರ,ರವಿ ಜಾಡಮಲಿ, ಹಾಲೇಶ ಜಾಡರ, ಧರ್ಮೇಂದ್ರ ಜಾಲಗಾರ, ಬಸವರಾಜ ಸೀತಿಮನಿ, ಬಸವರಾಜ ಹಳ್ಳೇರ, ಅಶೋಕ ನಾರಜ್ಜಿ ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.