ಬ್ಯಾಡ್ಗಿ

ಜ.14 ರಂದು ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ

ಜ.14 ರಂದು ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ

ಬ್ಯಾಡಗಿ 19: ನಿಜಶರಣ ಅಂಬಿಗ ಚೌಡಯ್ಯನವರ ಜನ್ಮ ಕ್ಷೇತ್ರ ನರಸೀಪುರದಲ್ಲಿ ಜ.14 ಮತ್ತು 15ರಂದು ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ, ಶರಣರ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಶ್ರೀ ಶಾಂತಮುನಿ ಮಹಾಸ್ವಾಮಿಗಳ 8ನೇ ಸ್ಮರಣೋತ್ಸವ ಆಯೋಜಿಸಲಾಗಿದೆ ಎಂದು ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಬೋವಿ ತಿಳಿಸಿದರು. 

ಪಟ್ಟಣದ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು. ಜನ್ಮ ಸ್ಥಳ ನರಸೀಪುರದಲ್ಲಿ ನಡೆಯುವ ಈ ಉತ್ಸವದಲ್ಲಿ ನಾಡಿನ ಮಠಾಧಿಧೀಶರು, ಮುಖ್ಯಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು ಎಂದರು.ರಾಜ್ಯದ ವಿವಿಧೆಡೆಯಿಂದ ಸುಮಾರು 5 ಲಕ್ಷ ಸಮಾಜ ಬಾಂಧವರು ಸೇರಲಿದ್ದಾರೆ, ಜ.14ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರುವುದು. ನಂತರ ವಿವಿಧ ಕಲಾ ತಂಡಗಳಿಂದ ರಾತ್ರಿ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ನಡೆಯಲಿದೆ. 15ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, 8.30ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ, ಬೆಳಗ್ಗೆ 9.30ಕ್ಕೆ ನಾಡಿದ ವಿವಿಧ ಮಠಾಧಿಧೀಶರ ಸಮ್ಮುಖದಲ್ಲಿ ಧರ್ಮ ಸಭೆ ಜರುಗುವುದು. ಸಂಜೆ 5.30ಕ್ಕೆ ಗ್ರಂಥ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ತಾಲೂಕು ಗಂಗಾಮತ ಅಧ್ಯಕ್ಷ ಯಲ್ಲಪ್ಪ ಓಲೇಕಾರ, ಹೊನ್ನಪ್ಪ ಸಣ್ಣಬಾರ್ಕಿ, ಚಂದ್ರು ಮುಳಗುಂದ, ಜಿತೇಂದ್ರ ಸುಣಗಾರ, ನಿಂಗಪ್ಪ ಹೆಗ್ಗಣ್ಣನರ, ಮಂಜಣ್ಣ ಸುಣಗಾರ, ಜಯಪ್ಪ ಬೋವಿ, ಗುತ್ತೇಪ್ಪ ಕೊಪ್ಪದ, ಸುರೇಶ ಬಾರ್ಕಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ