ಅಂಬೇಡ್ಕರ ಅವಮಾನ ಖಂಡನೆ
ತಾಳಿಕೋಟೆ 21: ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರನ್ನು ಅವಮಾನಿಸಿ ಅಶ್ಲೀಲವಾಗಿ ಅವರ ಭಾವಚಿತ್ರವನ್ನು ತಿರುಚಿ ಮತ್ತು ಕೆಟ್ಟ ಹಾಡುಗಳನ್ನು ಎಡಿಟ್ ಮಾಡಿ ತನ್ನ ವಾಟ್ಸಾಪ್ ಹಾಗೂ ಫೇಸ್ಬುಕ್ನಲ್ಲಿ ಹರಿಬಿಟ್ಟಿರುವ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದ ಮಲ್ಲು ಬಂದಳ್ಳಿ ಅವರನ್ನು ಕೂಡಲೇ ಬಂಧಿಸಿ ಜೀವಾವಧಿ ಶಿಕ್ಷೆಗೆ ಗುರುಪಡಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣದ) ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕ ದೇವಿಂದ್ರ ಹಾದಿಮನಿ ಸಕಾರಕ್ಕೆ ಆಗ್ರಹಿಸಿದ್ದಾರೆ,
ಭಾರತ ದೇಶದಲ್ಲಿನಾಗರೀಕರೆಲ್ಲರೂ ಬದುಕುತ್ತಿರುವದು ಬಾರತದ ಸಂವಿಧಾನದಡಿಯಲ್ಲಿ. ಅಂತಹ ಮಹತ್ತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿಗೆ ಅವಮಾನಿಸುವದು ಘೋರ ಅಪರಾಧವಾಗಿದೆ. ಸಂವಿಧನ ಶಿಲ್ಪಿಯನ್ನು ಅವಮಾನಿಸುವ ಘಟನೆಗಳು ಮರುಕಳಿಸುತ್ತಿರುವದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಮಲ್ಲು ಬಂದಳ್ಳಿಯಂತ ಅವಿವೇಕಿಗಳನ್ನು ಕಠಿಣ ಶಿಕ್ಷೆಗೆ ಗುರುಪಡಿಸಿದರೆ ಮುಂದೆ ಇಂತಹ ಅವಿವೇಕಿಗಳು ಭಾವಚಿತ್ರ ತಿರುಚುವುದು, ಅವಹೇಳನಕಾರಿಯಾಗಿ ಮಾತನಾಡುವದನ್ನು ನಿಲ್ಲಿಸುತ್ತಾರೆ. ಕಠಿಣ ಶಿಕ್ಷೆ ನೀಡುವದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದಾಗಿದೆ. ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿ ಮಲ್ಲು ಬಂದಳ್ಳಿಯನ್ನು ಪತ್ತೆ ಮಾಡಿ ಅವನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಹಿಸಿದರು.