ಸಿಂಧಗಿ

ಅಂಬೇಡ್ಕರ್ ಅವರ ಆಲೋಚನೆ ಲಕ್ಷಾಂತರ ಜನರಿಗೆ ಶಕ್ತಿ ನೀಡಿದೆ: ಭೂಸನೂರ

ಅಂಬೇಡ್ಕರ್ ಅವರ ಆಲೋಚನೆ ಲಕ್ಷಾಂತರ ಜನರಿಗೆ ಶಕ್ತಿ ನೀಡಿದೆ: ಭೂಸನೂರ
ಸಿಂದಗಿ: ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದ ನಿಮಿತ್ತ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿಗೆ ಶ

ಸಿಂದಗಿ 07: ಆಸ್ಪೃಶ್ಯತೆ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯೋಣ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. 

ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮಂಡಳ ವತಿಯಿಂದ ಹಮ್ಮಿಕೊಂಡ ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ಅವರ ಕನಸನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು. 

ಎಸ್‌.ಸಿ. ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ಸುದರ್ಶನ ಜಂಗಾಣಿ, ಶಿವು ಬಿರಾದಾರ, ರಾಜು ಭಾಸಗಿ, ಶ್ರೀಕಾಂತ ಬಿಜಾಪುರ, ಕಾಜು ಬಂಕಲಗಿ, ಪೀರು ಯರಗಲ್ಲ್‌, ಪರಶುರಾಮ ಕಾಶಿ, ಗೋಪಾಲ ಜವಳಗಿ, ಸಂಗು ರತ್ನಾಕರ್, ಪ್ರಕಾಶ ಶೇರಖಾನೆ, ಅರವಿಂದ ಹಡಗಲಿ, ಶ್ರೀ ಶೈಲ್ ಸೋಂಪುರ, ಶಂಕರಗುರು ಗೌಂಡಿ, 

ಸೇರಿದಂತೆ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಸುದ್ದಿ ಓದಿ