ಗೋಕಾಕ್

ಅಂಬೇಡ್ಕರರ ತತ್ವ ಸಿದ್ಧಾಂತಗಳೇ ನಮಗೆ ಆದರ್ಶ: ಪ್ರಾ.ಜಯಾನಂದ ಮಾದರ

ಅಂಬೇಡ್ಕರರ ತತ್ವ ಸಿದ್ಧಾಂತಗಳೇ ನಮಗೆ ಆದರ್ಶ: ಪ್ರಾ.ಜಯಾನಂದ ಮಾದರ

ಲೋಕದರ್ಶನ ವರದಿ

       ಗೋಕಾಕ 15: ಮಹಾ ಮಾನವತಾವಾದಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಜ್ಞಾನ ವಿಶ್ವಮಾನ್ಯವಾದುದು, ಅದು ಇಂದಿನ ಜನಾಂಗಕ್ಕೆ ಅಗತ್ಯ ಮತ್ತು ಅವರ ತತ್ವ ಸಿದ್ಧಾಂತಗಳೇ ನಮಗೆ ಆದರ್ಶವಾಗಿವೆ  ಎಂದು ಸಾಹಿತಿ ಹಾಗೂ ಕಲಾವಿದ ಪ್ರಾ.ಜಯಾನಂದ ಮಾದರ ಹೇಳಿದರು.

       ಅವರು ಸ್ಥಳೀಯ ಶ್ರೀ ವಿವೇಕಾನಂದ ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132 ನೇ ಜನ್ಮ ದಿನಾಚರಣೆ ಆಚರಿಸಿ ಮಾತನಾಡಿದರು.

      ಕವಿ ಹಾಗೂ ಶಿಕ್ಷಕ ಈಶ್ವರ ಮಮದಾಪೂರ ಅತಿಥಿಯಾಗಿ ಮಾತನಾಡಿ ಕಡು ಬಡತನದಲ್ಲಿ ಜನಿಸಿದ ಅಂಬೇಡ್ಕರ್ ಅವರು ದೇಶದ ಕಟ್ಟಕಡೆಯ ಜನಾಗದ ಮತ್ತು ತುಳಿತಕ್ಕೆ ಒಳಗಾದವರ ಕುರಿತು ಸದಾ ಚಿಂತಿಸುತ್ತಿದ್ದರು ಎಂದು ಹೇಳಿದರು.

    ಸಂಗೀತ ಕಲಾವಿದ ನಾರಾಯಣ ಜಾಧವ ಹಾಗೂ ಶಿಕ್ಷಕರಾದ ಅಭಿಷೇಕ ಯೋಗಿಕೊಳ್ಳಮಠ ಭಾರ್ಗವಿ ಚೌಗಲಾ ಉಪಸ್ಥಿತರಿದ್ದರು.ಯೋಗ ಶಿಕ್ಷಕ ಆನಂದ ಸೋರಗಾವಿ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ