ಕಾರ್ಮಿಕ ಅಧಿಕಾರಿ ರಾಜೇಶ ಅಸ್ನೋಟಿಕರ ವರ್ಗಾವಣೆಗೆ ಅಂಬೇಡ್ಕರ ಯುವ ಸೇನೆ ಆಗ್ರಹ
ಬೈಲಹೊಂಗಲ 19: ಪಟ್ಟಣದಲ್ಲಿರುವ ಕಟ್ಟಡ ಕಾರ್ಮಿಕ ಇಲಾಖೆಯ ನೀರೀಕ್ಷಕ ಅಧಿಕಾರಿ ರಾಜೇಶ ಅಸ್ನೋಟಿಕರನ್ನು ವರ್ಗಾವಣೆಗೊಳಿಸಿ, ಬೇರೆ ಅಧಿಕಾರಿಯನ್ನು ನಿಯೋಜಿಸುವಂತೆ ಆಗ್ರಹಿಸಿ ಕರ್ನಾಟಕ ಅಂಬೇಡ್ಕರ ಯುವ ಸೇನೆಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಿಸಲಾಯಿತು.
ಸೇನೆಯ ತಾಲೂಕಾಧ್ಯಕ್ಷ ಸಂಜು ಶ್ರೀಕಾಂತ ಭರಮನ್ನವರ ಮಾತನಾಡಿ, ಕಟ್ಟಡ ಕಾರ್ಮಿಕ ನೀರೀಕ್ಷಕರ ಕಚೇರಿಯ ತಾಲೂಕಾ ಅಧಿಕಾರಿ ರಾಜೇಶ ಅಸ್ನೋಟಿಕರ ಬೈಲಹೊಂಗಲ ಕಾರ್ಮಿಕ ಕಚೇರಿಯಲ್ಲಿ ಪ್ರತಿದಿನ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಯು ಮನಬಂದಂತೆ ವರ್ತಿಸುತ್ತಿದ್ದು, ಕಟ್ಟಡ ಕಾರ್ಮಿಕ ನೀರೀಕ್ಷಕ ಅಧಿಕಾರಿ ಕಚೇರಿಯಲ್ಲಿ ಇಲ್ಲದಿರುವುದನ್ನು ನೋಡಿ ಕಾರ್ಮಿಕರು ಬೇಸತ್ತು ಹೋಗಿರುತ್ತಾರೆ. ಸದರಿ ಅಧಿಕಾರಿಯು ಮೂರು ತಾಲೂಕುಗಳು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ಬೈಲಹೊಂಗಲ ತಾಲೂಕು ಕಟ್ಟಡ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ಪ್ರತಿನಿತ್ಯ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ಆಲಿಸಲು ಹೊಸ ಅಧಿಕಾರಿಯನ್ನು ನೇಮಿಸಬೇಕು. ಈಗೀರುವ ಮೂರು ತಾಲೂಕಿನ ಅಧಿಕಾರಿಯನ್ನು ಇಲ್ಲಿಂದ ಕೂಡಲೇ ಬೇರೆ ಕಡೆಗೆ ವರ್ಗಾಯಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಮೋಹನಗೌಡ ಪಾಟೀಲ, ಪರಶುರಾಮ ರಾಯಭಾಗ, ಮಾರುತಿ ಕೊಂಡೂರ, ರಾಮು ಕಲಮಕರ, ಗಂಗಪ್ಪ ಹಿಪ್ಪರಗಿ, ಗೂಪಿ ಪವಾರ, ರಮೇಶ ಕಾವಳೆ, ಗೋಸಂಗಿ ಸಮಾಜದ ಅಧ್ಯಕ್ಷ ಪ್ರಹ್ಲಾದ ಪವಾರ, ಸಂತರಾಮ ಕಾವಳೆ, ಅಜೀತ ಕಾವಳೆ, ರಾಘವೇಂದ್ರ ಕ್ವಾಟೆ, ಈಶ್ವರ ಕೂಟಿಯವರ, ಗಣೇಶ ಕೂಟಿಯವರ, ಮಹ್ಮದ ದೊಡವಾಡ, ರಾಜು ಹುಲಿಕೇರಿ, ವಿನಾಯಕ ಬಡಿಗೇರ, ಸುನೀಲ ಪೂಜೇರಿ, ಮಂಜುನಾಥ ಕಡೇಮನಿ, ರಾಘು ದಾನನ್ನವರ, ವಿಕ್ರಮ ಭರಮನ್ನವರ, ಫಾರುಕ ಅಂಕಲಗಿ ಉಪಸ್ಥಿತರಿದ್ದರು.
ಬೈಲಹೊಂಗಲ ಕಟ್ಟಡ ಕಾರ್ಮಿಕ ನೀರೀಕ್ಷಕ ಅಧಿಕಾರಿ ರಾಜೇಶ ಅಸ್ನೋಟಿಕರ ಅಸಭ್ಯ ವರ್ತನೆ ಮಾಡಿದ್ದು, ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆಂದು ಮಾಧ್ಯಮದವರಿಗೆ ತಿಳಿಸಿದರು. ಮೂರು ತಾಲೂಕುಗಳು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ಬೈಲಹೊಂಗಲದ ಕಾರ್ಮಿಕ ಇಲಾಖೆಗೆ ತೊಂದರೆಯಾಗುತ್ತಿದ್ದು, ಕೂಡಲೇ ಇಂತಹ ಅಧಿಕಾರಿಯನ್ನು ವರ್ಗಾವಣೆಗೊಳಿಸಿ, ಬೇರೆ ಅಧಿಕಾರಿಯನ್ನು ನಿಯೋಜಿಸಬೇಕು.
ಮಂಜು ಚಿಕ್ಕಣ್ಣವರ
ರಾಜ್ಯಾಧ್ಯಕ್ಷರು, ಕರ್ನಾಟಕ ಅಂಬೇಡ್ಕರ ಯುವ ಸೇನೆ.