ಸಿಂಧಗಿ

ಅಂಬೇಡ್ಕರ್ ಅವರ ಆಲೋಚನೆ,ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ: ಭೂಸನೂರ

ಅಂಬೇಡ್ಕರ್ ಅವರ ಆಲೋಚನೆ,ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ: ಭೂಸನೂರ


ಸಿಂದಗಿ 06:ಆಸ್ಪೃಶ್ಯತೆ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯೋಣ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. 

ಸೋಮವಾರ ಪಟ್ಟನದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ  ಮಾತನಾಡಿದರು. 

ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ಅವರ ಕನಸನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು. 

ಎಸ್‌.ಸಿ. ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ಸುದರ್ಶನ ಜಂಗಾಣಿ, ಶಿವು ಬಿರಾದಾರ, ರಾಜು ಭಾಸಗಿ, ಶ್ರೀಕಾಂತ ಬಿಜಾಪುರ, ಕಾಜು ಬಂಕಲಗಿ, ಪೀರು ಯರಗಲ್ಲ್‌, ಪರಶುರಾಮ ಕಾಶಿ, ಗೋಪಾಲ ಜವಳಗಿ, ಸಂಗು ರತ್ನಾಕರ್, ಪ್ರಕಾಶ ಶೇರಖಾನೆ, ಅರವಿಂದ ಹಡಗಲಿ, ಶ್ರೀ ಶೈಲ್ ಸೋಂಪುರ, ಶಂಕರಗುರು ಗೌಂಡಿ, 

ಸೇರಿದಂತೆ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ನಂತರ ಶಾಸಕ ರಮೇಶ ಭೂಸನೂರ ಅವರು ಅಂಬೇಡ್ಕರ್ ವೃತ್ತಕ್ಕೆ ಹೋಗಿ ಅಂಬೇಡ್ಕರ್ ಮೂರ್ತಿಗೆ ಹಾರಹಾಕಿ ನಮನ ಸಲ್ಲಿಸಿ ಮಾತನಾಡಿದರು. 


ಸುದ್ದಿ ಓದಿ