ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ
ಮಾಂಜರಿ 19: ಬಡತನ ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಅಲಂಕರಿಸಿದ, ಸಮಾಜದಲ್ಲಿ ಗುರುತಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಕೆ.ಎನ್. ಕಮತೆ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಶಿವಾಲಯ ಭವನದಲ್ಲಿ ಇಂದು ಜರುಗಿದ ಶಾರದಾದೇವಿ ಕೋರೆ ಶಾಲೆಯ 1974-75ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, “ವಿದ್ಯೆಯು ಒಂದು ಶಕ್ತಿಯಾಗಿದ್ದು, ಇದಕ್ಕೆ ಸಮನಾದ ಸಂಪತ್ತು ಮತ್ತೊಂದಿಲ್ಲ'', ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಹೂವುಗಳನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಸನ್ಮಾನಿಸಿದರು. ನಾನಾ ಹುದ್ದೆಗಳನ್ನುಅಲಂಕರಿಸಿದ ಗೌರವಿಸಲಾಯಿತು. ವಿದ್ಯಾರ್ಥಿಗಳನ್ನೂಶಿಕ್ಷಕರಾದ ಬಿ.ಬಿ. ತೋಡಕರ, ಕೆ.ಎನ್. ಮಲ್ಲಣ್ಣವರ, ಎಲ್.ಜಿ. ಚೌಗಲಾ, ಆರ್.ಬಿ. ಸವಾಡೆ, ವಿ.ಎಸ್. ಸಮಾಜೆ, ಕೆ.ಆರ್.ಪಾಟೀಲ, ಎಸ್.ಜೆ. ಪಾಟೀಲ, ಎಸ್.ಆರ್. ಹರಕಟೆ, ಎಸ್.ಎನ್. ಕುಲಕರ್ಣಿ, ಬಂಡೂ ಪರೀಟ, ವಿದ್ಯಾರ್ಥಿಗಳಾದ ಜಗದೀಶ ಕೋರೆ, ವಿವೇಕಾನಂದ ಕುಂಬಾರ, ಶಂಕರ ತೋರಸೆ, ಎಂ.ಎಸ್. ಮಗದುಮ್, ಡಾ. ಕೆ.ಆರ್.ಗುಂಡಕಲ್ಲೆ, ವಿವೇಕ ದುಮಾಳೆ, ದತ್ತಾ ಕುಂಬಾರ, ಬಾಳಸಾಹೇಬ್ ಪಾಟೀಲ, ಆಧಿರಾಜ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತು ಕಾರಾಮ ಪಾಟೀಲ ಸ್ವಾಗತಿಸಿ, ವಂದಿಸಿದರು. ಎಸ್.ಡಿ. ಹಣಗಂಡಿ ನಿರೂಪಿಸಿದರು.