ಹೂವಿನ ಹಡಗಲಿ

ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಸಾಬೀತು ಆದರೆ ರಾಜಕೀಯ ನಿವೃತ್ತಿ: ಶಾಸಕ ಪರಮೇಶ್ವರನಾಯ್ಕ

ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಸಾಬೀತು ಆದರೆ ರಾಜಕೀಯ ನಿವೃತ್ತಿ: ಶಾಸಕ ಪರಮೇಶ್ವರನಾಯ್ಕ

ಲೋಕದರ್ಶನ ವರದಿ 

ಹೂವಿನ ಹಡಗಲಿ 28: ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಮಾಡುತ್ತಿರುವ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರು ಸಾಬೀತು ಮಾಡಲಿ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಇಲ್ಲದಿದ್ದರೇ ಹಾಲಪ್ಪನವರು ರಾಜಕೀಯ ನಿವೃತ್ತಿ ಘೋಷಣೆ ಮಾಡಲಿ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸವಾಲು ಹಾಕಿದರು.

ಪಟ್ಟಣದ ಸೊಪ್ಪಿನಕಾಳಮ್ಮ ಬಡವಾಣೆಯ ವೃತ್ತಕ್ಕೆ ದಿ. ಸೊಪ್ಪಿನ ಗುರುಲಿಂಗಪ್ಪನವರ ನಾಮಕರಣ  ಫಲಕವನ್ನು ಅನಾವರಣ ಗೊಳಿಸಿ ಮಾತನಾಡಿ ಶೇ.60ರಷ್ಟು ಕಮೀಷನ್ ತೆಗೆದುಕೊಂಡಿದ್ದರೇ ಅಭಿವೃದ್ದಿ ಅಸಾಧ್ಯ, ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಿದೆ. ಕಮೀಷನ ಸಾಬೀತು ಮಾಡಲಿ ರಾಜಕೀಯ ನಿವೃತ್ತಿ ಘೋಷನೆ ಮಾಡುತ್ತೇನೆ.ಇಲ್ಲದಿದ್ದರೇ ಹಾಲಪ್ಪನವರು ರಾಜಕೀಯ ನಿವೃತ್ತಿ ಘೋಷನೆ ಮಾಡಲಿ ಎಂದರು. ಅಲೆಮಾರಿ ಕುಟುಂಬಗಳಿಗೆ ಯಾವುದೇ ತೊಂದರೆ ಮಾಡಿಲ್ಲ. ತಾತ್ಕಾಲಿಕ ಕಾಯಕನಗರದಲ್ಲಿ ವಾಸ ಮಾಡಲಿಕ್ಕೆ ಅವಕಾಶ ಮಾಡಿಕೊಡಲಾಗಿದೆ ಜತೆಗೆ 8ರಿಂದ 10ಕೋಟಿ ಅನುದಾನ ನೆಮ್ಮದಿ ಊರು ಯೋಜನೆ ಕುಂಟಿತಗೊಂಡಿದ್ದು ಹುಲಿಗುಡ್ಡದ ಎಂಜಿನಿಯರಿಂಗ ಕಾಲೇಜು ಬಳಿ ನಿವೇಶನಕ್ಕೆ ಜಮೀನು ಗುರುತಿ ಸಲಾಗಿದ್ದು, ಅರಣ್ಯ ಇಲಾಖೆ ಮಧ್ಯಪ್ರವೇಶ ಮಾಡಿದ್ದರಿಂದ ಜಿಲ್ಲಾಧಿಕಾರಿಗಳ ಸಭೆ ಮಾಡಿ ಇತ್ಯಾರ್ಥ ಮಾಡುತ್ತೇವೆ ಎಂದ ಅವರು ಹಾಲಪ್ಪನವರ ಅಧಿಕಾರದಲ್ಲಿ ಅಲೆಮಾರಿ ಕುಟುಂಬಗಳಿಗೆ ನಿವೇಶ ಏಕೆ? ಕೊಡಲಿಲ್ಲ ಎಂದು ಶಾಸಕ ಪಿಟಿ.ಪರಮೇಶ್ವರ ನಾಯ್ಕ ಪ್ರಶ್ನಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಮುಖಂಡರಾದ ಅಟವಾಳಗಿ ಕೊಟ್ರೇಶ, ಅರವಳ್ಳಿವೀರಣ್ಣ, ಬಿ.ಹನುಮಂತಪ್ಪ., ಬಸವನಗೌಡ ಪಾಟೀಲ,ಸೋಗಿ ಹಾಲೇಶ, ಚಂದ್ರನಾಯ್ಕ, ವಸಂತ,ಮಹಾಂತೇಶ ಇದ್ದರು 

ಸುದ್ದಿ ಓದಿ