ಅಲ್ಲಮಪ್ರಭು, ಅಕ್ಕಮಹಾದೇವಿಯದು ವಿಶಿಷ್ಟವಾದ ವ್ಯಕ್ತಿತ್ವ
ರುದ್ರೇಶ ಕಿತ್ತೂರ ಹೇಳಿಕೆ ಽ ಅಲ್ಲಮಪ್ರಭು, ಅಕ್ಕಮಹಾದೇವಿ ಜಯಂತಿ
ತಾಳಿಕೋಟೆ19: 12ನೆಯ ಶತಮಾನದ ಶರಣ ಪ್ರಮುಖರಲ್ಲಿ ಅಲ್ಲಮ ಪ್ರಭುಗಳು ಹಾಗೂ ಅಕ್ಕಮಹಾದೇವಿಯವರು ತಮ್ಮದೇ ಆದ ವ್ಯಕ್ತಿತ್ವದಿಂದ ವಿಶಿಷ್ಟವಾಗಿ ಎದ್ದು ಕಾಣುತ್ತಾರೆ. ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಇವರಿಬ್ಬರೂ ಅಪ್ರತಿಮರು ಎಂದು ಮುದ್ದೇಬಿಹಾಳದ ಅನುಭಾವಿ ರುದ್ರೇಶ ಕಿತ್ತೂರ ಹೇಳಿದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಕಾಳಿಕಾ ಮಂದಿರದಲ್ಲಿ ಆಯೋಜಿಸಿದ್ದ ಅಲ್ಲಮಪ್ರಭುಗಳು ಹಾಗೂ ಅಕ್ಕಮಹಾದೇವಿ ಯವರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಅಂತರಂಗದ ಚೇತನದಿಂದ ಬೆಳೆದ ತಮ್ಮ ಸೂಕ್ಷ-್ಮಶರೀರವು, ಅವಿನಾಶಿ, ಇದನ್ನು ಯೋಗಸಿದ್ಧಿಯಿಂದ ಸಾಧಿಸಬಹುದೆಂದು ತೋರಿದವರು ಅಲ್ಲಮರು, ಅನುಭವ ಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷತೆಯಲ್ಲಿ ಎಲ್ಲ ಬಗೆಯ ವೃತ್ತಿ, ಜಾತಿಯವರಿಗೆ ವಚನ ವಿವೇಚನೆಗೆ, ವಿಶ್ಲೇಷಣೆಗೆ ಅವಕಾಶ ನೀಡುವ ಮೂಲಕ ಬಸವಣ್ಣನವರ ಜಾತ್ಯತೀತ ಆಧ್ಯಾತ್ಮಿಕ ಚಳುವಳಿಗೆ ಬಲ ತುಂಬಿದರು. ವಿರಾಗಿಣಿ ಅಕ್ಕಮಹಾದೇವಿ ಬದುಕಿನ ಎಲ್ಲ ಜಂಜಡಗಳನ್ನು ಆತ್ಮಸ್ಥೈರ್ಯದಿಂದಲೇ ಹೇಗೆ ಗೆಲ್ಲಬಹುದು ಎಂದು ತೋರಿ, ಗಂಡು-ಹೆಣ್ಣಿನ ಬೇಧವಳಿದವರು ಎಂದರು.
ಸಾನ್ನಿಧ್ಯ ವಹಿಸಿದ್ದ ಕೈಲಾಸಪೇಟೆಯ ಬಸವಪ್ರಭುದೇವರು ಮಾತನಾಡಿ,ಬದುಕಿನ ಒಂದು ಕ್ಷಣವನ್ನಾದರೂ ದೇವರನ್ನೊಲಿಸುವುದಕ್ಕೆ ಮೀಸಲಿಟ್ಟರೆ ಸಾಕು, ನಾನು ಎಂಬುದು ಅಳಿಯಬೇಕು ಮೃದು ವಚನ, ಕಂಡ ಭಕ್ತರಿಗೆ ಕೈಮುಗಿವ ಸದುವಿನಯ ಸಿಟ್ಟಿಲ್ಲದ ಬದುಕು ಕಂಡ ಶರಣರ ಸಾಧನೆಯನ್ನು ಅಳವಡಿಸಿಕೊಂಡರೆ ಅದೇ ನಮ್ಮ ಜೀವನದ ತಪಸ್ಸು ಹಾಗೂ ಸಾರ್ಥಕತೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ಅಧ್ಯಕ್ಷ ಜಿ.ಎಸ್.ಜಮ್ಮಲದಿನ್ನಿ ಅಧ್ಯಕ್ಷತೆ ವಹಿಸಿದ್ದರು.
ಶರಣ ಸಾಹಿತ್ಯ ಪರಿಷತ್ತಿನ ಡಾ.ಜಿ.ಎಂ.ಘಿವಾರಿ, ಶಿವಲಿಂಗಪ್ಪ ಪಾಲ್ಕಿ,, ಈರಣ್ಣ ಕಲಬುರ್ಗಿ, ವಸಂತ ಜೋಶಿ, ರಮೇಶ ಸಾಲಂಕಿ, ಗಂಗಾಧರ .ಕಸ್ತೂರಿ, ಡಾ.ಆರ್.ಎನ್.ಪಾಟೀಲ, ಸುಭಾಸ ಸಾಲಂಕಿ, ಮಹಾದೇವಪ್ಪ ಕುಂಬಾರ ಬಿ.ವಿ.ಚೊಂಡಿ ಪಾಟೀಲ, ಚನ್ನಬಸಪ್ಪ ಬಳಗಾನೂರ, ಡಾ.ಟಿ.ಜಿ.ಲಿಂಗಪ್ಪ, ಉಮಾ ಘಿವಾರಿ, ಪ್ರಾಚಾರ್ಯೆ, ಡಿ.ಎನ್.ಕಟ್ಟಿಮನಿ, ಈರಯ್ಯ ಮಠ, ಸಿ.ಎಂ.ಮಠ, ಆರ್.ಬಿ.ಜೊಂಡಿ, ಅಕ್ಕಮಹಾದೇವಿ ವಿರಕ್ತಮಠ, ಜ್ಯೋತಿ ಹಿರೇಮಠ, ಸುರೇಖಾ ಸಾಲಂಕಿ ರಾಜೇಶ್ವರಿ ವಾಲಿ, ಮಹಾನಂದಾ ತಿಳಗೂಳ, ಶೋಭಾ ಸಾಲಂಕಿ, ಉಮಾ ಸಾಲಂಕಿ, ಸುಮಂಗಲಾ ಕಲಬುರ್ಗಿ, ಬೋರಮ್ಮ ಸಜ್ಜನ, ಗೀತಾ ಬಳಗಾನೂರ, ಜಯಶ್ರೀ ಸಜ್ಜನ, ಬಿ.ಎಂ.ನಾಟಿಕಾರ, ಇತರರಿದ್ದರು. ಮಹಾಂತೇಶ ಮುರಾಳ ನಿರ್ವಹಿಸಿದರು. ಆರ್.ಬಿ.ದಾನಿ ಸ್ವಾಗತಿಸಿದರು.