ತಾಳಿಕೋಟಿ

'ಕಾಯಕಯೋಗಿ ಪ್ರಶಸ್ತಿ'ಗೆ ಅಲ್ಲಾಭಕ್ಷ ಸಗರ ಆಯ್ಕೆ

'ಕಾಯಕಯೋಗಿ ಪ್ರಶಸ್ತಿ'ಗೆ ಅಲ್ಲಾಭಕ್ಷ ಸಗರ ಆಯ್ಕೆ


ತಾಳಿಕೋಟೆ: ಪಟ್ಟಣದ ಸಾರಿ8ಗೆ ಘಟಕದ ಚಾಲಕ ಅಲ್ಲಾಭಕ್ಷ ಸಗರ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪುರ ಬೆಂಗಳೂರು ಅವರ ವತಿಯಿಂದ  ರಾಜ್ಯಮಟ್ಟದ ಕಾಯಕಯೋಗಿ -2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

 ಇದೇ ಮೇ1 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಘಟಕದ ಸಿಬ್ಬಂದಿಗೆ ದೊರೆತ ಗೌರವಕ್ಕೆ ಘಟಕ ವ್ಯವಸ್ಥಾಪಕ ಅಶೋಕ ಭೋವಿ, ಸಂಚಾರ ಅಧೀಕ್ಷಕ ಎಸ್‌.ಬಿ.ದಶವಂತ, ನಿಂಗನಗೌಡ ಬಿರಾದಾರ, ಬಿ.ವಿ.ಚೊಕಾವಿ, ಗೌಡಪ್ಪಾಗೌಡ , ದಾವಲ್ ನದಾಫ, ಘಟಕ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ. 


ಸುದ್ದಿ ಓದಿ