ಹೂವಿನ ಹಡಗಲಿ

ಹೀಗೊಂದು ಗುರುವಂದನಾ ಕಾರ್ಯಕ್ರಮ:36 ವರ್ಷಗಳ ನಂತರ ಕಲಿತವರೆಲ್ಲರೂ ನೆನಪುಗಳ ಬುತ್ತಿಯೊಂದಿಗೆ ಸಂಭ್ರಮಿಸಿದರು...

ಹೀಗೊಂದು ಗುರುವಂದನಾ ಕಾರ್ಯಕ್ರಮ:36 ವರ್ಷಗಳ ನಂತರ   ಕಲಿತವರೆಲ್ಲರೂ ನೆನಪುಗಳ ಬುತ್ತಿಯೊಂದಿಗೆ ಸಂಭ್ರಮಿಸಿದರು...

ಮುದೇಗೌಡ್ರ ಅಶೋಕ 

ಹೂವಿನ ಹಡಗಲಿ 13: ಮಾತೃ ದೇವೋ ಭವ,ಪಿತೃ ದೇವೋ ಭವ,ಆಚಾರ್ಯ ದೇವೋ ಭವ..ಅತಿಥಿ ದೇವೋ ಭವಎನ್ನುತ್ತದೆ ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ನಮ್ಮದು. ಬದುಕಿನ ಪ್ರಮುಖ ಘಟಗಳಲ್ಲಂತೂ ಮಾರ್ಗದರ್ಶಕರಾಗಿ ಗುರುವಿನ ಸಹಾಯ ಬೇಕೇ ಬೇಕು.

ಗುರುವಿನ ಗುಲಾಮನಾಗದ ತನಕ ದೊರಕದ ಅಣ್ಣ ಮುಕ್ತಿ..ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ ಮತ್ತೆ ಪಾದಕ್ಕೆ ಕೆರವಾಗಿ ಗುರುವಿನ ಹತ್ತಿರಿದು.. ಅನ್ನುತ್ತವೆ.ಸದಾಶಯದ ವಚನಗಳು ನಾವು ಜೀವನದಲ್ಲಿ ಎಷ್ಟೇ ಮುಂದುವರಿದರೂ ಅದರ ಹಿಂದೆ ಗುರುವಿನ ಪಾತ್ರ ಇದೇ ಇರುತ್ತದೆ.

ಪ್ರತಿಯೊಬ್ಬರ ಜೀವನದಲ್ಲಿ ಬಲಿಷ್ಠವಾದುದು ಗುರುಬಲ,ಬಾಲ್ಯದಲ್ಲಿ ತುಂಟತನ,ಅಜ್ಞಾನ,ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನ.ಅವರ ತಾಳ್ಮೆ ಇರದೇ ಹೋಗಿದ್ದರೆ ನಮಗೆ ವಿದ್ಯೇಯ ಗಂಧವೇ ಇರುತ್ತಿರಲಿಲ್ಲ.ಅಸಭ್ಯ ಸಂಸ್ಕೃತಿ ಜೀವನದ ಭಾಗವಾಗುತ್ತಿರಿಲ್ಲ.ಅಲ್ಲವೆ.ಆದರೆ ಪ್ರಸ್ತುತ ಕಾಲ ಬದಲಾಗಿದೆ.ಜನರ ಮನೋಭಾವವೂ ಬದಲಾಗಿದೆ.ವಿದ್ಯೆ ಕಲಿಸುವ ಗುರು ಒಂದೇಟು ಹೊಡೆದರೆ ದೊಡ್ಡ ಕೋಲಾಹಲವೇ ನಡೆಯುತ್ತದೆ.ಆದರೆ ಒಂದು ಸುಂದರ ಶಿಲ್ಪಿಯ ಉಳಿ-ಸುತ್ತಿಗೆಯ ಹಲವು ಪೆಟ್ಟುಗಳು ಬೀಳಲೇ ಬೇಕು.

36ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸಿದ ಹಳೆ ವಿದ್ಯಾರ್ಥಿ ಗಳುತಮ್ಮ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಹೀಗೊಂದು ಹೃದಯ ಸ್ಪಶರ್ಿ ಕಾರ್ಯಕ್ರಮವೊಂದಕ್ಕೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಜಿಪಿಜಿ ಸಕರ್ಾರಿ ಪ್ರೌಢಶಾಲೆಯ 1987ರ ಎಸ್ಎಸ್ಎಲ್ಸಿ ಬ್ಯಾಚ್ನ ಹಳೆ ವಿದ್ಯಾರ್ಥಿ ಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ಗುರು-ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾಥರ್ಿಗಳು ತೋರಿಸಿಕೊಟ್ಟರು.ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ ಪಾಠ ಕಲಿಸಿದ ಪ್ರೌಢಶಾಲಾ ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಹಳೆ ವಿದ್ಯಾರ್ಥಿ ಗಳ ಸಮಾಗಮಕ್ಕೂ ಸಾಕ್ಷಿಯಾಗಿತ್ತು. 

ಕಾರ್ಯಕ್ರಮದಲ್ಲಿ ಹಿರಿಯ ಗುರುಗಳಾದ ಗಣಿತ ಶಿಕ್ಷಕ ಹೆಚ್.ಎಂ.ಬೆಟ್ಟಯ್ಯ,ಉಮಾಪತಿ,ವಿಜ್ಞಾನ ಶಿಕ್ಷಕ ಡಿ.ಸಿ.ಜೋಷಿ,ವಿಶ್ವನಾಥ ಆಚಾರ್ಯ,ಕಲಾ ಶಿಕ್ಷಕ ವೇದಮೂರ್ತಿ , ದೈಹಿಕ ಶಿಕ್ಷಕ ನಾಗೇಂದ್ರನಾಯ್ಕ,ಕನ್ನಡ ಶಿಕ್ಷಕಿ ಯು.ಶಾಂತಮ್ಮ ಹಳೆಯ ವಿದ್ಯಾಥರ್ಿಗಳು ತಮ್ಮ ಗುರುಗಳ ಪಾಠ ಪ್ರವಚನವನ್ನು ನೆನೆದು ಭಾವುಕರಾದರು.ವಿದ್ಯಾರ್ಥಿ ನಿಯರನ್ನು ಸಂಘಟಿಸಿ ಒಂದೆಡೆ ಸೇರಿ ಗುರುವಂದನಾ ಕಾರ್ಯಕ್ರಮ ಮಾಡುವುದು ಅವಿಸ್ಮರಣೀಯ. ಒಂದೆಡೆ ಸೇರಿ ಪಾಠ ಹೇಳಿದ ಗುರುಗಳನ್ನು ವೇದಿಕೆ ಕರೆ ತಂದು ಸನ್ಮಾನಿಸಿ ಗೌರವಿಸುವುದು ಜತೆಗೆ ವಿದ್ಯೆ ಕಲಿಸಿದ ಗುರು ನಮಸ್ಕರಿಸಿದರೆ ಕೋಟಿ ಕೊಟ್ಟರೂ ಸಾಲದು. 

ಫೆ.12ರಂದು ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದ ಜಿಪಿಜಿ ಹೈಸ್ಕೂಲ್ ಆವರಣದಲ್ಲಿ ಮಾಜಿ ವಿದ್ಯಾರ್ಥಿ ಗಳೆಲ್ಲರೂ ಇಳಿ ಹೊತ್ತಿನವರೆಗೂ ಇದ್ದು ಎಂಜಾಯ್ ಮಾಡಿದ್ರು, ಬೆಳಗಿನ ಉಪಹಾರ,ಮಧ್ಯಾಹ್ನದ ಊಟದ ಜೊತೆಗೆ ಮನೆರಂಜನೆಯ ರಸದೂಟ ಒಂದೆಡೆಯಾದರೆ ಮರೆಯಲಾರದ ನೆನಪಿನ ಬುತ್ತಿ ಹೊರಸಿತ್ತು. ಸುಮಾರು 50 ಜನ ಮಾಜಿ ವಿದ್ಯಾಥರ್ಿಗಳು ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾದ್ರು. ಬರೋಬ್ಬರಿ36ವರ್ಷಗಳ ನಂತರ ಒಂದೆಡೆ ಸೇರಿದ ಈ ಸ್ನೇಹಿತರ ಸಮ್ಮಿಲನ ಹಲವು ಮರೆಯಲಾರದ ಘಟನೆಗಳಿಗೆ ಸಾಕ್ಷಿಯೂ ಆಯ್ತು.

ಇನ್ನು ಒಂದೆಡೆ ಸೇರಿದ ಸ್ನೇಹಿತರೆಲ್ಲರೂ ಸಖತ್ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ರು, ತಾವೇನು ಕಡಿಮೆ ಇಲ್ಲ ಅನ್ನೋದನ್ನ ಸಾರಿದ ಕುಚುಕುಗಳು ಇಡೀ ದಿನ ಸಮಯ ಕಳೆದದ್ದೇ ಗೊತ್ತಾಗ್ತಿಲ್ಲಾ ಅಂತಾ ಗೊನಾಗುತ್ತ ಸಮಾರಂಭದ ನಂತರ ಒಲ್ಲದ ಮನಸ್ಸಿನಿಂದ ಕಾಲ್ಕಿತ್ತಿದ್ದಂತು ಸುಳ್ಳಲ್ಲ. ಬಹುತೇಕರು ಉಪಸ್ಥಿತರುದ್ದು ಸಮಾರಂಭದ ಯಶಸ್ಸಿಗೆ ಕಾರಣರಾದ್ರು..ವಿದ್ಯಾರ್ಥಿ ಗಳು ಗುರುನಮನ ಕೋಟಿ ಕೊಟ್ಟರೂ ಸಿಗುವುದಿಲ್ಲ ಎಂದು ಹಳೆ ವಿದ್ಯಾಥರ್ಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಯಿತು.

ಶಿಕ್ಷಕಿ ರೇಣುಕಾ ಸರಾಫ್ ಪ್ರಾರ್ಥಿ ಸಿದರು ನಂತರ ಶಿಕ್ಷಕ ಖಾದರಬಾಷಾ ಸ್ವಾಗತಿಸಿದರು.ಶಿಕ್ಷಕ ನಿರಂಜನಾ ಮೂರ್ತಿ  ಪ್ರಾಸ್ತಾವಿಕ ಮಾತನಾಡಿದರು.ಮು.ಗು.ಸುರೇಶ ಅಂಗಡಿ ಮತ್ತು ಪ್ರಾಚಾರ್ಯ ಕೊಟ್ರೇಶ ನಿರೂಪಿಸಿದರು.ಜಿಪಿಜಿ ಎಕ್ಸಲೆಂಟ್ 1987ನೇ ಅಧ್ಯಕ್ಷ ಪ್ರಶಾಂತ ಸೇರಿದಂತೆ ಮಾಜಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೀತರ್ಿವಿಜಯ ಜೈನ್, ಬಸೆಟ್ಟಿ ನಾಗರಾಜ, ಗೋಪಿನಾಯ್ಕ, ಟಿ.ಎಸ್.ಜಗದೀಶ, ದಿನೇಶ ರೆಡ್ಡಿ, ರಫಿ ಹಂಪಸಾಗರ, ಶಶಿಕಾಂತ ಶಿಕ್ಷಕರ ಪರಿಚಯವನ್ನು ಮಾಡಿದರು .


ಸುದ್ದಿ ಓದಿ