ತಾಳಿಕೋಟಿ

ಶಾಂತಿ-ಸೌಹಾರ್ದತೆಗೆ ಎಲ್ಲರೂ ಮುಂದಾಗಿ

ಶಾಂತಿ-ಸೌಹಾರ್ದತೆಗೆ ಎಲ್ಲರೂ ಮುಂದಾಗಿ

ತಾಳಿಕೋಟಿ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಲ್ಲಿನ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲೀಂ ಭಾಂದವರು ಈದ್‌ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಈದ್ ಸಂದೇಶ ನೀಡಿದಡಾ.ಮೀನ್‌ಹಾಜುದ್ದೀನಖಾಜಿ, ರಮಜಾನ್ ಮಾಸದಲ್ಲಿ ಮುಸ್ಲೀಂರು ಉಪವಾಸ ವೃತಗಳನ್ನು ಆಚರಿಸುವದರ ಮೂಲಕಗಳಸಿಕೊಂಡ ಶಾಂತಿ ಮತ್ತು ಸಹನೆಯಗುಣವನ್ನು ಸಮಾಜದಲ್ಲಿ ಹರಡಲು ಪ್ರಯತ್ನಿಸಬೇಕುಎಂದರು. 

ಇಂದು ಧರ್ಮದ ಹೆಸರಿನಲ್ಲಿ ಅಶಾಂತಿಯನ್ನು ಸೃಷ್ಠಿಸುಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜಗತ್ತಿನ ಯಾವಧರ್ಮವೂ ಹಿಂಸೆಯನ್ನು ಭೋದಿಸುವದಿಲ್ಲ. ಎಲ್ಲ ಧರ್ಮಗಳ ಮೂಲಮಂತ್ರ ಶಾಂತಿಯಾಗಿದೆ ಸಮಾಜದಲ್ಲಿ ಶಾಂತೆ ಹಾಗೂ ಸಾಮರಸ್ಯವನ್ನು ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ, ಭಾರತ ಬಹು ಸಂಸ್ಕ್ರತಿಯ ದೇಶವಾಗಿದೆ, ಶತ-ಶತಮಾನಗಳಿಂದ ಸರ್ವಧರ್ಮೀಯರೂ ಇಲ್ಲಿಕೂಡಿಕೊಂಡು ಬಾಳುತ್ತಿದ್ದಾರೆ ಇದನ್ನು ವುಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು. 

ಮುಸ್ಲೀಂ ಧರ್ಮಗುರು ಸೈಯದ್ ಶಕೀಲ ಅಹ್ಮದ್‌ಖಾಜಿ, ಈದ್ಗಾ ಸಮಿತಿಅಧ್ಯಕ್ಷ ಮಾಸೂಮಸಾಬ ಕಂಭಾವಿ, ಮಾಜಿ ಅಧ್ಯಕ್ಷ ಖಾಜಾಹುಸೇನ ಡೋಣಿ, ಕಾರ್ಯದರ್ಶಿ ಎ.ಡಿ. ಎಕೀನ, ಉಪಾಧ್ಯಕ್ಷಅಬ್ದುಲ್‌ರಜಾಕ ಮನಗೂಳಿ, ಪುರಸಭೆ ಮಾಜಿಅಧ್ಯಕ್ಷ ಎಂ.ಕೆ.ಚೋರಗಸ್ತಿ, ಫಸಿಯುದ್ದೀನಸಾಬ, ಖಾಜಿ, ಡಾ. ಝೈನುಲ್ ಆಬದೀನ, ಗನಸಾಬ ಲಾಹೋರಿ, ಅಲ್ಲಾಬಕ್ಷ ನಮಾಜಕಟ್ಟಿ, ಅಬ್ದುಲ್‌ಸತ್ತಾರಅವಟಿ, ರೋಶನಡೋಣಿ, ಖಾಜಾಹುಸೇನ ಸಗರ, ಡಾ. ಎ.ಎ.ನಾಲಬಂದ, ಎಂ.ಎ.ಮೇತ್ರಿ, ಹಸನಸಾಬ ಮನಗೂಳಿ, ಎ.ಎಸ್‌.ನಮಾಜಕಟ್ಟಿ, ಡಾ. ಆರ್‌.ಎಂ.ಕೋಳ್ಯಾಳ, ನಿರಂಜನಶಾ ಮಕಾನದಾರ, ಯಾಸಿನ ಮಮದಾಪೂರ, ಮಂಜೂರಅಲಿ ಬೇಪಾರಿ, ಸಿಕಂದರ ಡೋಣಿ, ಮಹೆಬೂಬಶಾ ಮಕಾನದಾರ, ಎ.ಕೆ.ಬಾಗವಾನ, ಸನಾ ಕೆಂಭಾವಿ, ಮಹೆಬೂಬ ಲಾಹೋರಿ, ಉಸ್ಮಾನಗನಿ ಖಾಜಿ, ಮುಜಾಹೀದ ನಮಾಜಕಟ್ಟಿ ಉಪಸ್ಥಿತರಿದ್ದರು. 


ಸುದ್ದಿ ಓದಿ