ನಮ್ಮೆಲ್ಲರ ನಡಿಗೆ ಸಾಮರಸ್ಯ, ಸಹಬಾಳ್ವೆ ಏಕತೆಯ ಕಡೆಗೆ: ಹಿರೇಮಠ
ಶಿಗ್ಗಾವಿ 11: ದೇಶದ ಏಕತೆಗಾಗಿ ನಡಿಗೆ ಸವಣೂರಿನ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆ ಗುಂಡೂರ ಹೊಸ ನೀರಲಗಿ ಗ್ರಾಮದಿಂದ ಹನುಮನಹಳ್ಳಿ ಮಾರ್ಗವಾಗಿ ಶಿಗ್ಗಾವಿ ಚೆನ್ನಮ್ಮ ವೃತ್ತದವರೆಗೆ ತೆರಳುವ ಸಂದರ್ಭದಲ್ಲಿ ನಮ್ಮೆಲ್ಲರ ನಡಿಗೆ ಸಾಮರಸ್ಯ ಹಾಗೂ ಸಹಬಾಳ್ವೆ ಏಕತೆಯ ಕಡೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಗಟ್ಟಿಯಾದ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮುನ್ನಡಿಯಾಗಲಿ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂಎಂ ಹಿರೇಮಠ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಸವಣೂರ ತಾಲೂಕ ಬ್ಲಾಕ್ ಅಧ್ಯಕ್ಷ ಎಂ ಜೆ ಮುಲ್ಲಾ, ಯಾಸೀರಖಾನ್ ಪಠಾಣ್, ಸೋಮಣ್ಣ ಬೇವಿನಮರದ, ಸಂಜೀವ್ ಕುಮಾರ್ ನೀರಲಗಿ, ಪ್ರಕಾಶ್ ಹಾದಿಮನಿ, ರಾಜೇಶ್ವರಿ ಪಾಟೀಲ್, ಎಸ್ ಎಸ್ ಶಿವಳ್ಳಿ, ಹನುಮಂತಪ್ಪ ಬಂಡಿವಡ್ಡರ್, ಮಂಜುನಾಥ ಮಣ್ಣಣ್ಣವರ್, ಬಾಬರ್ ಬಾವಾಜಿ, ಮುಖಂಡರುಗಳಾದ ಮಂಜುನಾಥ್ ಕಂಕನವಾಡ, ಮುತ್ತುರಾಜ್, ಸುಭಾಷ್ ಮಜ್ಜಿಗಿ, ಕುಲಕರ್ಣಿ, ಯುವ ಕಾಂಗ್ರೆಸ್ಸಿನ ನಿಸಾರ್ ತೋಕಲ್ಲಿ, ಅನಿಲ್ ಬದ್ರಾಪುರ, ಗದಿಗೆಪ್ಪ ಬಳ್ಳಾರಿ, ಸಿ ಎಸ್ ಪಾಟೀಲ್, ಗುರುನಗೌಡ ಪಾಟೀಲ್, ಯೂಸಫ್ಸಾಬ್ ಬಾವಿಕಟ್ಟಿ, ವಿವಿ ಪಾಟಿಲ್, ಅಬ್ದುಲ್ ಕರೀಂ ಮೊಘಲಲ್ಲಿ. ಶಿವಾನಂದ ಬಾಗೂರ ಹಾಗೂ ಶಿಗ್ಗಾಂವ ಸವಣೂರ ವಿಧಾನಸಭಾ ಕ್ಷೇತ್ರದ ಇನ್ನೂ ಹಲವಾರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿರಿದ್ದರು.
ಪಾದಯಾತ್ರೆಯ ಕೊನೆಯಲ್ಲಿ ಶಿಗ್ಗಾವಿ ಪಟ್ಟಣದ ಖಾದ್ರಿ ದರ್ಗಾಕೆ ಪೂಜಿ ಸಲ್ಲಿಸಿ ವೀರಮಾತೆ ಚೆನ್ನಮ್ಮನ ಮೂರ್ತಿಗೆ ಮಾಲಾರೆ್ಣ ಮಾಡಿ ವಿವಿಧ ಮಹನೀಯರಿಗೆ ಸನ್ಮಾನ ಗೌರವ ಸಲ್ಲಿಸಲಾಯಿತು.