ಬೈಲಹೊಂಗಲ

ದೇವರ ನಾಮಸ್ಮರಣೆಯಿಂದ ಸಕಲ ಸಂಕಷ್ಟಗಳು ದೂರ: ಶಿವಪ್ಪ ಅಜ್ಜನವರು

ದೇವರ ನಾಮಸ್ಮರಣೆಯಿಂದ ಸಕಲ ಸಂಕಷ್ಟಗಳು ದೂರ: ಶಿವಪ್ಪ ಅಜ್ಜನವರು

ಬೈಲಹೊಂಗಲ 23: ದೇವರನ್ನು ಸ್ಮರಣೆ ಮಾಡಿದ್ದಲ್ಲಿ ಸಕಲ ಸಂಕಷ್ಟಗಳಗೂ ನಮ್ಮಿಂದ ದೂರವಾಗುತ್ತವೆ ಎಂದು ಯರಗೊಪ್ಪ ಲೀಲಾಮಠದ ಶ್ರೀ ಶಿವಪ್ಪ ಅಜ್ಜನವರು ಹೇಳಿದರು. 

ತಾಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ಶನಿವಾರ ಮಾರುತಿ ದೇವರ ಜಾತ್ರಾ ಮಹೋತ್ಸದ ಅಂಗವಾಗಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.  ಬದಲಾಗುತ್ತಿರುವ ಕಾಲದಿಂದ ದೇವರ ಸ್ಮರಣೆ, ಜಾತ್ರೆ ಸಂಪ್ರದಾಯಗಳು ಕಡಿಮೆಯಾಗುತ್ತಿದೆ. ಇದರಿಂದಾಗಿ ಯುವ ಪೀಳಿಗೆಗೆ ನಮ್ಮ ಸಂಪ್ರದಾಯಗಳನ್ನು ತಿಳಿಸಲು ಕಷ್ಟಸಾಧ್ಯ ಆಗುತ್ತಿದೆ. ಈ ಹಿಂದನ ಕಾಲದಲ್ಲಿ ಋಷಿಮುಣಿಗಳು ತಪಸ್ಸು, ಜ್ಞಾನದಿಂದ ಸಕಲ ವಿದ್ಯೆಯನ್ನು ತಮ್ಮದಾಗಿಸಿಕೊಂಡಿದ್ದರು. ಆ ಕಾಲದಲ್ಲಿ ಸಕಲ ಸೌಕರ್ಯಗಳು ಇಲ್ಲದಾಗಿತ್ತಾದರೂ ದೇವರ ಸ್ಮರಣೆಯಿಂದ ರೋಗ, ರುಜಿನಗಳಿಂದ ದೂರವಿದ್ದರೂ, ಉತ್ತಮ ಮಳೆ, ಬೆಳೆ ಎಲ್ಲವೂ ಇತ್ತು. ಜತೆಗೆ ಸಂತೃಪ್ತದಾಗಿದ್ದರು.  

ಈಗಿನ ಕಾಲಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ, ನಮ್ಮ ಋಷಿ ಮಣಿಗಳ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಯುವ ಸಮುದಾಯ ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಇದರಿಂದಾಗಿ ಮಾನವ ಸೇರಿದಂತೆ ಇನ್ನಿತರ ಜೀವ ಸಂಕುಲಗಳು ಮುಂದೊಂದು ದಿನ ಸಮಸ್ಯೆಗಳನ್ನು ಎದುರಿಸುವಂತಾದಿತು. ಆದ್ದರಿಂದ ನಮ್ಮ ಹಿಂದೂ ಸಂಸ್ಕೃತಿ ಮತ್ತು ನಮ್ಮ ಋಷಿಮಣಿಗಳ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.  

ಭಜರಂಗದಳ ಹಾಗೂ ಗ್ರಾಮದ ಯುವಕರು ಕೇಸರಿ ಎರಚಿ ಸಂಭ್ರಮಿಸಿದರು. ಬ್ಯಾಂಡ ಬಾರಿಸುವುದರ ಜೊತೆಗೆ ಶ್ರಿ ಹನುಮನ ಉದ್ಘೋಷವನ್ನೂ ಮೊಳಗಿಸದರು. ಅಲ್ಲದೆ ನಾವಲಗಟ್ಟಿ ಪುನರ್ ವಸತಿ ಕೇಂದ್ರ 1 ಮತ್ತು 2ರಿಂದ ಶ್ರೀ ಮಾರುತಿ  ದೇವರ ಫಲ್ಲಕ್ಕಿ ಉತ್ಸವ ಜರಗಿತು. ಈ ವೇಳೆ ಯುವಕರು ಕುಣಿದು ಕುಪ್ಪಳಿಸಿದರು.  

ಗ್ರಾಮದಲ್ಲಿ ಹಿರಿಯರಾದ ಬಾಬಣ್ಣ ಕಲ್ಲೂರ, ಗೌಡಪ್ಪ ನಾವಲಗಟ್ಟಿ, ಶಿವನಾಯ್ಕ ಭಾಂವಿ, ಬಸಪ್ಪ ಮರೆಣ್ಣವರ, ರಾಯಪ್ಪ ಮೂಡಗಲಿ, ರುದ್ರ​‍್ಪ ಕಲ್ಲೂರ, ಲಕ್ಷ್ಮಣ ಯರಗಣವಿ, ಸಿದ್ದಯ್ಯ ಹಿರೇಮಠ,  ಗ್ರಾಪಂ ಸದಸ್ಯರಾದ ಶಿವಾನಂದ ಕಲ್ಲೂರ, ರವಿ ಕಲ್ಲೂರ, ರೇಣುಕಾ ಯರಗಣವಿ, ಶಾಂತವ್ವ ಉಪ್ಪಾರಟ್ಟಿ, ದೀಪಾ ಮರೆಣ್ಣವರ, ರುದ್ರಗೌಡ ಪಾಟೀಲ, ಯಲ್ಲಪ್ಪ ಉಪ್ಪಾರಟ್ಟಿ, ಸಂತೋಷ ಕಲ್ಲೂರ, ಗ್ರಾಮದ ಸಮಸ್ತ ಗುರು ಹಿರಿಯರು ಹಾಗೂ ಭಜರಂಗ ದಳ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರು,  ಪುಲಾರಕೊಪ್ಪ, ಹೀರೆಮೇಳೆ, ತಿಗಡಿ, ಗಿರಿಯಾಲ, ಶಿಗಿಹಳ್ಳಿ.ಕೆ.ಎಸ್‌., ಮರಿಕಟ್ಟಿ ಹಾಗೂ ಗಣಿಕೊಪ್ಪ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು. 


ಸುದ್ದಿ ಓದಿ