ಸಂಘಟನೆ ಮುಖಾಂತರ ಎಲ್ಲ ಪಡೆಯಬಹುದು: ಶಂಕರನಾಗ ಆಟೋ ಮಾಲಕರು ಚಾಲಕರು ಸಂಘ
ಶಿಗ್ಗಾವಿ 07: ಜನರ ಸೇವೆಯನ್ನು ಹೀಗೆ ಮಾಡಬೇಕು ಎಂದು ಇಲ್ಲ ಅವರಿಗೆ ಮನಸ್ಸಿಗೆ ಬಂದ ಹಾಗೆ ಅವರಿಗೆ ಆತ್ಮ ತೃಪ್ತಿಗಾಗಿಯೇ ಮಾಡುವ ಸೇವೆಯೇ ಸಮಾಜಸೇವೆ ಅದಕ್ಕೆ ಪಟ್ಟಣದ ಶಂಕರನಾಗ ಆಟೋ ಮಾಲಕರು ಹಾಗೂ ಚಾಲಕರು ಸಾಕ್ಷಿ.
ಪಟ್ಟಣದಲ್ಲಿ ಸುಮಾರು 40 ವರ್ಷದಿಂದ ಮುನ್ನಾ ದಖನಿ ಹಾಗೂ ನಿಸ್ಸಾರ ವನಹಳ್ಳಿ ಆಟೋ ಸೇವೆಯನ್ನು ಮಾಡಿದವರಲ್ಲಿ ಮೊದಲಿಗರು, ಆರ್ಥಿಕ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಕುಟುಂಬ ನಿರ್ವಹಣೆ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲರಿಗೂ ಉದ್ಯೋಗದ ಅವಶ್ಯಕತೆ ಇರುತ್ತದೆ ಅದನ್ನು ಮನಗಂಡು ಪಟ್ಟಣದ ಸುಮಾರು 300 ಕುಟುಂಬಗಳ ಸದಸ್ಯರು ಆಟೋ ವೃತ್ತಿಯನ್ನು ಅವಲಂಬಿಸಿ ಯಾರಿಗೂ ಕಮ್ಮೀಲ್ಲದೇ ಹಾಗೂ ಯಾರ ಹಂಗೀಲ್ಲದೇ ಸ್ವಾವಲಂಬಿಯಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಸಂಘಟನೆ ವಿಷಯ ಬಂದಾಗ ವಿಧ್ಯಾವಂತರಲ್ಲಿ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಯ ಪದಾಧಿಕಾರಿಗಳಲ್ಲಿ ಸಂಘಟನೆಗೆ ಮೂಗು ತೋರಿಸುವ ಜನ ಹೆಚ್ಚು ಆದರೆ ಇದಕ್ಕೆ ಹೊರತಾಗಿ ಎಂಬಂತೆ ಶಿಗ್ಗಾವಿ ಪಟ್ಟಣದ ಶಂಕರನಾಗ ಆಟೋ ಮಾಲಕರ ಹಾಗೂ ಚಾಲಕರ ಸಂಘವೇ ಪ್ರಮುಖ ಕಾರಣ ಏಕೆಂದರೆ ಇಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತ ಎಲ್ಲ ಸಮಾಜದ ಸದಸ್ಯರು ಇದ್ದರು ಸಹಿತ ಅನ್ಯೋನ್ಯತೆಯಿಂದ ಸಂಘಟನೆ ಮುಖಾಂತರ ಸಂಘ ರಚನೆ ಮಾಡಿ ಪದಾಧಿಕಾರಿಗಳ ಆಯ್ಕೆಯಲ್ಲಿ ಎಲ್ಲರಿಗೂ ಪ್ರಾತಿನಿದ್ಯ ನಿಡಿ ಸಂಘವನ್ನು ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಮಾದರಿ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ.
ಸಂಘದ ಮುಖಾಂತರ ಅನೇಕ ಜಾಗೃತಿ ಕಾರ್ಯಕ್ರಮ, ವಕಾಲತ್ತು ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ಶಿಬಿರಗಳನ್ನು, ವಿಶೇಷ ಸೇವೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಹೀಗೆ ಹತ್ತಾರು ಕಾರ್ಯಕ್ರಮಗಳ ಮುಖಾಂತರ ಪಟ್ಟಣದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಆದರೆ ಅವರಿಗೆ ಸಮಾಜ ನೋಡುವ ದೃಷ್ಟಿ ಆಟೋ ಚಾಲಕ ಎಂದು ಹೊರತು ಅವರು ಯಾರ ಹಂಗೀಲ್ಲದೇ ಸ್ವಾವಲಂಬಿಯಾಗಿ ಜೀವನ ನಿರ್ವಹಿಸುವ ಸಮಾಜದ ಗೌರವ್ಹಾನಿತ ಸದಸ್ಯ ಎಂದು ನಾವು ನೀವು ತಿಳಿಯಬೇಕಾದದ್ದು ಅವಶ್ಯವಾಗಿದೆ ಏಕೆಂದರೆ ಕೊರೋನಾ ಸಂದರ್ಭದಲ್ಲಿ ಪ್ರಾಣದ ಹಂಗೀಲ್ಲದೇ ಮಳಿ, ಚಳಿ, ಬಿಸಿಲು ಲೆಕ್ಕಿಸದೇ ದಿನದ 24 ಗಂಟೆ ಸೇವೆ ಸಲ್ಲಿಸಿದ ಕೀರ್ತಿ ಶಂಕರನಾಗ ಆಟೋ ನಿಲ್ದಾಣದ ಮಾಲಕರು ಹಾಗೂ ಚಾಲಕರಿಗೆ ಸಿಗುತ್ತದೆ.
ಸಂಘ ಯಶಸ್ವಿಯಾಗಲು ಸ್ಪೂರ್ತಿಯೆಂದರೆ ಸಂಗನಬಸವ ಮಹಾಸ್ವಾಮಿಗಳು, ಚರಮೂರ್ತೇಶ್ವರ ಶಿವಾಚಾರ್ಯ ಶ್ರೀಗಳು, ಸಮಾಜ ಸೇವಕ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ, ಮೃತ್ಯುಂಜಯ ನರ್ಸಿಂಗ ಹೋಮನ ಡಾ. ರಾಣಿ ತಿರ್ಲಾಪೂರ, ಪೋಲಿಸ ಇಲಾಖೆಯ ಡಿ.ವಾಯ.ಎಸ್.ಪಿ ಓ.ಬಿ.ಕಲ್ಲೇಶಪ್ಪ, ಸಿ.ಪಿ.ಐ ಬಸವರಾಜ ಹಳಬಣ್ಣವರ, ಪಿ.ಎಸ್.ಐ ಸಂಪತ್ತ ಕುಮಾರ, ಪುರಸಭೆ ಸದಸ್ಯ ಹಾಗೂ ಲ್ಯಾಂಡಲಾರ್ಡ ಸಿದ್ದಾರ್ಥಗೌಡ ಪಾಟೀಲ, ಜಯಲಕ್ಷ್ಮೀ ಹೋಟೆಲ್ ಮಾಲಕರು ಜನಾರ್ಧನ ಬ್ರಹ್ಮಾವರ, ರೈತ ದ್ವನಿ ಸಂಪಾದಕ ಬಸವರಾಜ ಕುರಗೋಡಿ, ಜಯಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ದುರಗಪ್ಪ ವಡ್ಡರ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಎನ್ನುತ್ತಾರೆ.
ಬಾಕ್ಸ ಸುದ್ದಿ : ಪಟ್ಟಣದಲ್ಲಿ ಎಲ್.ಪಿ.ಜಿ ಪೆಟ್ರೋಲ ಬಂಕ ವ್ಯವಸ್ಥೆ, ನಿವೇಶನ ಹಂಚಿಕೆ, ಮಕ್ಕಳ ಶಿಕ್ಷಣಕ್ಕಾಗಿ ಸೌಲಭ್ಯಗಳು, ಆಟೋಚಾಲಕರ ಭದ್ರತೆಗಾಗಿ ಜೀವ ವಿಮೆ, ದೊಡ್ಡ ದೊಡ್ಡ ರೋಗಗಳಿಗೆ ತುತ್ತಾದಲ್ಲಿ ಆರೋಗ್ಯ ವಿಮೆ, ಪಟ್ಟಣದ ಆಟೋ ನಿಲ್ದಾಣದ ವ್ಯವಸ್ಥೆಗೆ ಮೇಲ್ಚಾವಣೆಯನ್ನು ಮಾಡಿಕೊಡಬೇಕಾಗಿ ಮುಖ್ಯಮಂತ್ರಿಗಳಿಗೆ ಮನವಿ
ಗೌಸಮೋದಿನ ದುಂಡಶಿ, ಅಧ್ಯಕ್ಷರು ಆಟೋ ಸಂಘ ಶಿಗ್ಗಾವಿ.
ಭಾಕ್ಸ ಸುದ್ದಿ : ಶಂಕರನಾಗ ಆಟೋ ನಿಲ್ದಾಣದ ಮಾಲಕರು ಹಾಗೂ ಚಾಲಕರು ಸಂಘಕ್ಕೆ ತಗಡಿನ ಕಾರ್ಯಲಯದ ಶೆಡ್ ವ್ಯವಸ್ಥೆ, ಕಾರ್ಯಾಲಯಕ್ಕೆ ಟೇಬಲ,ಕುರ್ಚಿ ವ್ಯವಸ್ಥೆಯನ್ನು ಶಶಿಧರ ಯಲಿಗಾರ, 40 ಸಿಮೆಂಟ ಇಟ್ಟಂಗಿ ವ್ಯವಸ್ಥೆಯನ್ನು ಪುರಸಭೆ ಸದಸ್ಯ ಹಾಗೂ ಲ್ಯಾಂಡಲಾರ್ಡ ಸಿದ್ದಾರ್ಥಗೌಡ ಪಾಟೀಲ ನೇರವೇರಿಸಿದ್ದಾರೆ.
ಗುರುನಗೌಡ್ರ ದುಂಡಿಗೌಡ್ರ ಉಪಾಧ್ಯಕ್ಷರು ಆಟೋ ಸಂಘ ಶಿಗ್ಗಾವಿ.
ಬಾಕ್ಸ ಸುದ್ದಿ : ಇದುವರೆಗೂ ಯಾವ ರಾಜಕಾರಣಿಗಳು ನಮಗೆ ಸ್ಪಂದನೆ ಮಾಡಿಲ್ಲ ನಮ್ಮ ಸಮಸ್ಯೆಯನ್ನು ಕೇಳುವವರಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಅಲ್ಲದೇ ತಾಲೂಕಿನ ಐತಿಹಾಸಿಕ ಯಾತ್ರಾ ಸ್ಥಳಗಳ ಮಾಹಿತಿಯ ವಾಲ ಪೇಂಟಿಂಗ ಮಾಡಬೇಕೆನ್ನುವ ಆಸೆ ಮತ್ತು ಚಾಲಕರಿಗೆ ಐ.ಡಿ.ಕಾರ್ಡ ವ್ಯವಸ್ಥೆ ಮಾಡಬೇಕೆನ್ನುವ ವಿಚಾರವಿದೆ.
ಹನುಮಂತ ಬಂಡಿವಡ್ಡರ ಕಾರ್ಯದರ್ಶಿ ಆಟೋ ಸಂಘ ಶಿಗ್ಗಾವಿ.
ದಿ: 8 ರಂದು ಶ್ರಾವಣ ಸೋಮವಾರ ಶಂಕರನಾಗ ಆಟೋ ಮಾಲಕರು ಹಾಗೂ ಚಾಲಕರ ನೂತನ ಸಂಘ, ಕಾರ್ಯಲಯದ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಹಾರ್ದಿಕ ಸ್ವಾಗತ ಕೋರಿದ್ದಾರೆ.