ಅಕ್ಕಮಹಾದೇವಿ ಮಹಿಳಾ ಅರ್ಬನ್ ಸೊಸಾಯಿಟಿ ವಾರ್ಷಿಕ ಸಭೆ
ಲೋಕದರ್ಶನ ವರದಿ
ಯರಗಟ್ಟಿ 14: ಸ್ಥಳಿಯ ಶ್ರೀ ಅಕ್ಕಮಹಾದೇವಿ ಮಹಿಳಾ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಪ್ರಥಮ ವಾರ್ಷಿಕ ಸಭೆ ಮಹಾಂತ ದುರದುಂಡೇಶ್ವರ ಮಠದಲ್ಲಿ ಜರುಗಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಚೇರ್ಮನ್ ಶಿಲ್ಪಾ ಹಾದಿಮನಿ ಬ್ಯಾಂಕಿನ ಆಯ-ವ್ಯಯ ಓದಿದರು. ಬ್ಯಾಂಕ್ 564 ಸದಸ್ಯರನ್ನು ಹೊಂದಿದ್ದು ಒಟ್ಟು ಬಂಡವಾಳ 68,17,978 ಲಕ್ಷ ರೂ ಎಂದರು.
ಈ ವೇಳೆ ಸುರೇಖಾ ಅ. ಅಂಗಡಿ, ಅನ್ನಪೂರ್ಣಾ ಮ. ಜಕಾತಿ, ಸವಿತಾ ಉ. ಬಾಳಿ, ನಿರ್ಮವಾ ಶಿ. ಮದ್ದಾನಿ, ನಿರ್ಮಲಾ ನಿಜಗುಲಿ, ಶೈಲಜಾ ಬ. ಪಟ್ಟಣಶೆಟ್ಟಿ, ನೀಲಾ ಈ. ಬೆಣ್ಣಿ, ನೀತಾ ಯ. ಪಾಟೀಲ, ನೇತ್ರಾವತಿ ತ. ಕಾಮಣ್ಣವರ, ವೇದಾ ದೇ. ಕಮ್ಮಾರ, ಸುನಿತಾ ದುಂ. ಸತ್ತಿಗೇರಿ, ರೇಖಾ ರ. ತಳವಾರ, ಉಮೇಶ ಬಾಳಿ, ಎ. ಎಂ. ಹಾದಿಮನಿ, ದೇವೇಂದ್ರ ಕಮ್ಮಾರ, ಮೋಹನ ಹಾದಿಮನಿ, ಟಿ. ಎಂ. ಕಾಮಣ್ಣವರ ಸೇರಿದಂತೆ ಗ್ರಾಹಕರು, ಸಭೆಯಲ್ಲಿ ಎಲ್ಲ ನಿರ್ದೇಶಕರು ಮತ್ತು ಸದಸ್ಯರು ಇದ್ದರು