ಕಾರವಾರ

ಅಕ್ಕ ಕೆಫೆ: ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಹೊಸ ದಾರಿ

ಅಕ್ಕ ಕೆಫೆ: ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಹೊಸ ದಾರಿ

ಲೋಕದರ್ಶನ ವರದಿ 

      ಕಾರವಾರ, ಅ.8 : ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ರೂಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ‘ಅಕ್ಕ ಕೆಫೆ’ ಯೋಜನೆಯು, ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹೋಟೆಲ್ ಉದ್ಯಮದ ಮೂಲಕ ಆದಾಯದ ಅವಕಾಶ ಕಲ್ಪಿಸುವ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ದಿಕ್ಕು ನೀಡುತ್ತಿದೆ. 

                ಅದೇ ರೀತಿ, ಮುರುಡೇಶ್ವರದಲ್ಲಿ ಮಹಾ ಮುರುಡೇಶ್ವರ ಸ್ವಸಹಾಯ ಗುಂಪಿನ ವತಿಯಿಂದ 2025ರ ಅಕ್ಟೋಬರ್‌ನಲ್ಲಿ ಅಕ್ಕ ಕೆಫೆ ಆರಂಭಿಸಲಾಗಿದ್ದು, ಇದುವರೆಗೆ ಸುಮಾರು ರೂ.18 ಲಕ್ಷದಷ್ಟ್ಟು ವ್ಯವಹಾರ ನಡೆಸಲಾಗಿದೆ. ಈ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳೊಂದಿಗೆ ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗುವ ‘ಸರಸ್ ಮೇಳ’ಗಳಲ್ಲಿಯೂ ಭಾಗವಹಿಸಿ ತಮ್ಮ ಉದ್ಯಮಕ್ಕೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸಿಕೊಂಡಿವೆ. 


ಸುದ್ದಿ ಓದಿ