ಅಖಂಡ ಹರಿನಾಮ ಸಪ್ತಾಹ ಸಮಾರೋಪ
ಘಟಪ್ರಭಾ 01: ಅ. 25ರಿಂದ ಪ್ರಾರಂಭಗೊಂಡ ಅಖಂಡ ಹರಿನಾಮ ಸಪ್ತಾಹವು 31ರಂದು ನಗರ ಪ್ರದಕ್ಷಿಣೆಯೊಂದಿಗೆ ಸಮಾರೋಪಗೊಂಡಿತು.
ಸಪ್ತಾಹದಲ್ಲಿ ಹರಿನಾಮ ಸ್ಮರಣೆ, ಗಾಥಾ ಭಜನೆ, ಜಾಗರಣೆ. ಫುಜೆ ಪ್ರಸಾದ ದಿನನಿತ್ಯ ಜರಗಿದವು. ಕೊನೆಯ ದಿನ 31 ರಂದು ಮುಂಜಾನೆ 11 ಗಂಟೆಗೆ ಪ್ರಾರಂಭವಾದ ದಿಂಡಿ ಸಮೇತ, ಪಲಕ್ಕಿ, ಸುಮಂಗಲೆಯ ತುಳಸಿಯೊಂದಿಗೆ ನಗರ ಪ್ರದಕ್ಷಣೆ ಮಲ್ಲಾಪೂರ ಪಿಜಿ ಗ್ರಾಮದ ಮೈದಾನದಲ್ಲಿ ಪಂಡರಪೂರ ವಿಠ್ಠಲ ದೇವರ ವಾರಕರಿಗಳಿಂದ ಹಾಗೂ ಬಾಲಕರಿಂದ ಭಜನೆ, ಕುಣಿತ, ವಾದ್ಯಮೇಳದೊಂದಿಗೆ ಜರಗಿದವು, ಸಂಜೆ ಅನ್ನದಾನೇಶ್ವರ ಪ್ರಭುಗಳಿಂದ ಕಿರ್ತನೆ ನಡೆಯಿತು.
ಮಾರುತಿ ಹುಕ್ಕೇರಿ, ಮಲ್ಲಪ್ಪ ಹುಕ್ಕೇರಿ, ಬಸವಣ್ಣಿ ನಿಡಸೋಸಿ, ಸುರೇಶ ಪಾಟೀಲ, ಕುಮಾರ ಹುಕ್ಕೇರಿ, ಕಲ್ಲಪ್ಪ ಕೊಂಕಣಿ, ಗಣಪತಿ ಕಮತ, ರಾಜು ಕತ್ತಿ, ಜಿ.ಎಸ್.ರಜಪೂತ, ಕೆಂಪಣ್ಣ ಕರೋಶಿ, ಸಿವಪ್ಪ ಕಡಹಟ್ಟಿ, ಶ್ರೀಕಾಂತ ಮಹಾಜನ ಸೇರಿದಂತೆ ಅನೇಕರು ಇದ್ದರು.
ನಂತರ ಬಂದಂತಹ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಡಲಾಗಿತ್ತು.