ವೀರಭದ್ರೇಶ್ವರ ಜಾತ್ರೆಯಲ್ಲಿ ಅಗ್ನಿ ಹಾಯ್ದು ಭಕ್ತಿಯ ಪರಾಕಾಷ್ಠೆ
ಯರಗಟ್ಟಿ 02: ಪಟ್ಟಣದಲ್ಲಿ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಜಾತ್ರಾ ನಿಮಿತ್ಯ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ವಿವಿಧ ಪುಷ್ಪಗಳಿಂದ ವೀರಭದ್ರೇಶ್ವರ ದೇವರಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ಭಕ್ತಾಧಿಗಳು ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕುಂಡವನ್ನು ಸಿದ್ಧಗೊಳಿಸಲಾಗಿತ್ತು.
ಉದ್ಯೋಗ, ಸಂತಾನ, ಆಸ್ತಿ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಹಲಾವಾರು ಇಚ್ಟಾರ್ಥಗಳನ್ನು ಈಡೇರಿಸುವಂತೆ ಕೆಂಡತುಂಬಿದ ಅಗ್ನಿ ಕುಂಡದಲ್ಲಿ ಭಕ್ತಿಯಿಂದ ಅಗ್ನಿ ಕುಂಡ ಹಾಯ್ದು ಭಕ್ತರು ಹರಕೆ ತೀರಿಸಿದರು. ಮಹಿಳೆಯರು ಹಾಗೂ ಮಕ್ಕಳು ಅಗ್ನಿಕೊಂಡ ಹಾಯ್ದರು. ಅಲ್ಲದೆ ಪುರವಂತರ ನೇತೃತ್ವದಲ್ಲಿ ವಿಧಿವಿಧಾನದ ಮೂಲಕ ನೂಲಿನ ಹಗ್ಗದಿಂದ, ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡರು. ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು. ಈರ್ಪ ಹಾದಿಮನಿ, ಎಂ. ಬಿ. ವಾಲಿ, ಶ್ರೀಶೈಲ ವಾಲಿ, ಶಿವಾನಂದ ಹಂಜಿ, ಶಿವಲಿಂಗಪ್ಪ ವಾಲಿ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ, ರಾಜು ಕತ್ತಿಶೆಟ್ಟಿ, ಈರಣ್ಣಾ ಪಠಪತಿ, ಕುಮಾರ ಹಿರೇಮಠ, ಶಿವಾನಂದ ಪಟ್ಟಣಶೆಟ್ಟಿ, ಈರಣ್ಣಾ ಹಿರೇಮಠ, ಶಿವಾನಂದ ಸಣ್ಣಕ್ಕಿ, ರಾಚಯ್ಯ ಕರ್ಜಗಿಮಠ, ಸುಮಿತ ಬಳಿಗಾರ, ಈರಣ್ಣಾ ಗಾಣಗಿ, ಸೋಮು ದುಗ್ಗಾಣಿ, ಸಂತೋಷ ಅಲ್ಲನ್ನವರ ಹಾಗೂ ಸುತ್ತಮುತ್ತಲಿನ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.