ಜನಸಾಮಾನ್ಯರಿಗೆ ಅನುಕೂಲಕರ, ದೂರದೃಷ್ಟಿಯುಳ್ಳ ಬಜೆಟ್
ಶಿಗ್ಗಾವಿ 14: ಕೇಂದ್ರ ಬಜೆಟ್ ಇದೊಂದು ಐತಿಹಾಸಿಕ ಬಜೆಟ್ ಆಗಿದೆ. ಕೃಷಿ ಉತ್ಪಾದÀನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯವೃದ್ಧಿಗೆ ಇದು ಪೂರಕವಾಗಿ ಜನಸಾಮಾನ್ಯರಿಗೆ ಅನುಕೂಲವಾಗುವ ದೂರದೃಷ್ಟಿಯುಳ್ಳ ಬಜೆಟ್ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮ ಪ್ರಕಟಣೆ ಮುಖಾಂತರ ಮಾಹಿತಿ ನೀಡಿರುವ ಗೃಹ ಸಚಿವರು ರೈತರ ಕಲ್ಯಾಣಕ್ಕೆ ಬದ್ಧವಾದ ಬಜೆಟ್ ನರೇಗಾ ಯೋಜನೆಗೆ 73,000 ಕೋಟಿ ರೂ. ಸೂಕ್ಷ್ಮ ನೀರಾವರಿ ಯೋಜನೆಗಳಿಗೆ 10,000 ಕೋಟಿ ರೂ., ಕೃಷಿ ಸಾಲ ವಿತರಣೆಯ ಗುರಿ: 16.5 ಲಕ್ಷ ಕೋಟಿ ರೂ., ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಧಿ 40,000 ಕೋಟಿ ರೂ ಗೆ ಏರಿಕೆ. , ಆರೋಗ್ಯ ಮತ್ತು ಯೋಗಕ್ಷೇಮಕ್ಕೆ 2,23,846 ಕೋಟಿ ರೂ. ಹಂಚಿಕೆ, ಕೋವಿಡ್ 19ರ ಲಸಿಕೆ ನೀಡುವಿಕೆ ಅಭಿಯಾನಕ್ಕೆ 35,000 ಕೋಟಿ ರೂ., ದೇಶದಾದ್ಯಂತ ಆಧುನಿಕ ಭಾರತದ ಮೂಲಸೌಕರ್ಯ ಹೆಚ್ಚಿಸಲು 5.54 ಲಕ್ಷ ಕೋಟಿ ರೂ, ಉಜ್ವಲ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಉಚಿತ ಅಡುಗೆ ಅನಿಲದ ಸಂಪರ್ಕ 4.78 ಲಕ್ಷ ಕೋಟಿ ರೂ ಮೀಸಲು. ಉನ್ನತ ಶಿಕ್ಷಣಕ್ಕೆ 38,350 ಕೋಟಿ ರೂ ಹಾಗೂ ಇತರೆ ಯೋಜನೆಗಳಿಗೆ ಮೀಸಲಾಗಿಡಲಾಗಿದೆ.
ಕರ್ನಾಟಕ ಪಾಲಿಗೆ ವರದಾನವಾಗಿದೆ. 2ನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಕೆ 14,788 ಕೋಟಿ ರೂ., 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು, 1,1197 ಕಿ.ಮೀ ಹಣ ಹೂಡಿಕೆ 10,904 ಕೋಟಿ, ಮುಂದಿನ ವರುಷ ಕರ್ನಾಟಕದಲ್ಲಿ 1,16,144 ಕೋಟಿ ರೂ.ನ ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣ, ತುಮಕೂರು ಮತ್ತು ಕೃಷ್ಣಪಟ್ರಂನಲ್ಲಿ 7725 ಕೋಟಿ ರೂ ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ಗಳ ನೋಡ್ಸ್ಗಳ ನಿರ್ಮಾಣ. ಕೈಗಾರಿಕರಣದ ಮೂಲಕ 2.8 ಲಕ್ಷ ಉದ್ಯೋಗಾವಕಾಶ, ತುಮಕೂರು ಯೋಜನೆಯಲ್ಲಿ 88,500 ಕೋಟಿ ಉದ್ಯೋಗ ನಿರ್ಮಾಣ., ಉತ್ತರ ಕರ್ನಾಟಕ ಭಾಗದಲ್ಲಿ 21,000 ಕೋಟಿ ರೂ ವೆಚ್ಚದಲ್ಲಿ 13 ಹೆದ್ದಾರಿ ನಿರ್ಮಾಣದ ಯೋಜನೆಗೆ ಅಸ್ತು., ಬಂದರು ನಗರಿ ಮಂಗಳೂರಿಗೆ ಸಂಪರ್ಕ ಕೋಮಡಿಯಾಗಿರುವ ಶಿರಾಡಿಯ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ, 148.141 ಉದ್ದದ ಬೆಂಗಳೂರು ಉಪನಗರ ಯೋಜನೆಗೆ ಅನುದಾನ ಒದಗಿಸಲು ಕೇಂದ್ರ ಸರ್ಕಾರದ ಸಮ್ಮತಿ 23,093 ಕೋಟಿ ರೂ. ಪ್ರಸ್ತಾವನೆಯ ಮೂಲಕ ನೆರವು ನೀಡಲಾಗಿದೆ ಎಂದರು.