ಕಲಬೆರಕೆ ಆರ್ಗ್ಯಾನಿಕ್ ಗೊಬ್ಬರ: ಮಾರಾಟಗಾರರ ಮೇಲೆ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ
ಶಿಗ್ಗಾವಿ : ಆರ್ಗ್ಯಾನಿಕ್ ಡಿಎಪಿ ರಸಾಯನಿಕ ಗೋಬ್ಬರವೆಂದು ರೈತರಿಗೆ ಮಾರಾಟಾ ಮಾಡಿದ್ದು ಅದನ್ನು ಹಾಕಿದ ರೈತರ ಗೋವಿನ ಜೋಳವು ಸರಿಯಾಗಿ ಬೇಳೆಯದೆ ಹಾಳು ಆಗುತ್ತಿವೆ ತಕ್ಷಣವಾಗಿ ಮಾರಿದವರ ಮೇಲೆ ಹಾಗೂ ಆರ್ಗ್ಯಾನಿಕ್ ಗೊಬ್ಬರವನ್ನು ಮಾರಾಟ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ತಾಲೂಕಿನ ಕುನ್ನೂರ ಗ್ರಾಮಸ್ಥರು ಶಿಗ್ಗಾವಿ ಕೃಷಿ ಸಹಾಯಕ ನಿರ್ದೇಶಕ ಸುರೇಶಬಾಬುರಾವ್ ದಿಕ್ಸೀತ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕಿನ ಕುನ್ನೂರ ಗ್ರಾಮದ ರೈತರು ಕುನಗಾ ಪಾರ್ಮರ್ ಪ್ರೋಡಿಜರ್ ಕಂಪನಿ ಲಿಂ ಅಂತಾ ಹುಟ್ಟು ಹಾಕಿ ಅಲ್ಲಿಯೇ ರಸಾಯನಿಕ ಗೊಬ್ಬರವನ್ನು ಮಾರಾಟವನ್ನು ಆಗ್ರ್ಯನಿಕ್ ಡಿಎಪಿ ಎಂದು ಮಾರಾಟವನ್ನು ಮಾಡಿ ಅದನ್ನು ಬಿತ್ತನಯ ವೇಳೆಯಲ್ಲಿ ಗೊಬ್ಬರವನ್ನು ಹಾಕಿದ್ದೇವೆ ಆದರೆ ಗೋವಿನ ಜೋಳವು ಮಾತ್ರ ಬೇಳವಣಗೆಯಾಗದೆ ದಿನದಿಂದ ದಿನಕ್ಕೆ ಕುದುರುತ್ತಾ ಹೋಗುತ್ತಿದೆ ಇದರಿಂದ ಗಾಬರಿಗೊಂಡ ರೈತರು ಸುಮಾರು ದಿನಗಳಿಂದ ಕಂಪನಿಯ ಅಧ್ಯಕ್ಷರಿಗೂ ಹಾಗೂ ಕಂಪನಿಯ ಸಿಇಓ ಅವರಿಗೂ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲಾ ಎಂದು ರೈತರು ಆರೋಪಿಸಿದ್ದಾರೆ.
ಕಳೆದ 7-8 ದಿನಗಳ ಹಿಂದೆ ಗೊಬ್ಬರವನ್ನು ರೈತರು ಹಾಗೂ ಕಂಪನಿಯ ಅಧ್ಯಕ್ಷರು ಸೇರಿ ಆರ್ಗ್ಯಾನಿಕ್ ಡಿಎಪಿ ಗೊಬ್ಬರವಾದರು ನಿಜವೋ ಸುಳ್ಳೋ ಅನ್ನುವದನ್ನು ಖಾತರಿ ಮಾಡಿಕೊಳ್ಳಲು ಮುಂದದಾಗ ಅದು ಆರ್ಗ್ಯಾನಿಕ್ ನ್ಯಾಚುರಲ್ ಆರ್ಗ್ಯಾನಿಕ್ ಪಾಸ್ಪರೆಟ್ ಗೊಬ್ಬರವಾಗಿದ್ದು ನಮಗೆ ತೊಂದರೆಯಾಗಿದೆ ಎಂದು ಬಿತ್ತಿದ ಬೆಳಗಳು ಉತ್ತಮವಾಗಿ ಬಾರದೇ ದಿನದಿಂದ ದಿನಕ್ಕೆ ಸಾಕಷ್ಟು ಕುಂದರುಬಿಳುತ್ತಿವೆ ಆದ್ದರಿಂದ ತಕ್ಷಣವಾಗಿಗೊಬ್ಬರವನ್ನು ಪರೀಸಿಲನೆಗೆ ಕಳಿಸಿದ್ದಾರೆ ಆದರೆ ಇನ್ನುವರೆಗೆಯೂ ಯಾವುದೆ ಕ್ರಮವನ್ನು ತೆಗೆದುಕೊಂಡಿಲ್ಲಾ ಆದ್ದರಿಂದ ತಕ್ಷಣವಾಗಿ ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳಿಂದ ಗೊಬ್ಬರವನ್ನು ಹಾಗೂ ಬೆಳೆಗಳನ್ನು ಪರೀಸಲನೆಯನ್ನು ಮಾಡುವದಾಗಿ ಹೇಳಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲಾ ಎಂದು ಆಗ್ರಹಿಸಿದ್ದಾರೆ.
ಸಂಬಂದಿಸಿದ ಗೋಬ್ಬರವನ್ನು ಮಾರಾಟ ಮಾಡಿದ ಕಂಪನಿಯವರ ಮೇಲೆ ಪರಿಸಿಲನೆಯನ್ನು ಮಾಡಿ ಕ್ರಮವನ್ನು ತೆಗೆದುಕೊಂಡು ನಾವು ಬಿತ್ತನೆಯನ್ನು ಮಾಡಿದ ಗೋವಿನ ಜೋಳಕ್ಕೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ ಈದರ್ಭದಲ್ಲಿ ಮಲ್ಲೇಶಪ್ಪ ದೋಡ್ಡಮನಿ, ಮಾಳೇಶ ಮಣಕಟ್ಟಿ, ಈರಪ್ಪ ಮಣಕಟ್ಟಿ, ಚನ್ನಪ್ಪ ಶ್ಯಾಡಂಬಿ, ಆನಂದ ಲಮಾಣಿ, ಮಾಬೂಸಾಬ ಕುಬ್ಯಾಳ. ಧನಪಾಲ ಕೋಳೂರ, ಧರ್ಮಣ್ಣಾ ಓಲೇಕಾ ಬಸವರಾಜ ಕರಡಿ,
ಲಾಲಸಾಬ ಅರಳಿಕಟ್ಟಿ, ಪ್ರಭು ಬೀರವಳ್ಳಿ,ಬಸಪ್ಪ ಬಿರವಳ್ಳಿ, ಹನುಮಂತಪ್ಪ ಮತ್ತಿಗಟ್ಟಿ, ವಿರುಪಾಕ್ಷ ಬಾಕರ್ಿ, ಅಜರ್ುನ ಇಂದೂರ, ಸೇರಿದಂತೆ ಹಲವಾರು ರೈತರು ಇದ್ದರು.
ಕುನಗಾ ಪಾರ್ಮರ್ ಪ್ರೋಡಿಜರ್ ಕಂಪನಿ ಲಿಂ ಸಿಇಓ ತಿಳಿಸಿದ ಪ್ರಕಾರ 165 ಚಿಲಗಳನ್ನು ತರಿಸಿದ್ದು 135ಕ್ಕೂ ಹೆಚ್ಚು ಗೋಬ್ಬರವನ್ನು ಮಾರಾಟ ಮಾಡಲಾಗಿದೆ ಉಳಿದ ಗೋಬ್ಬರ ಚಿಲಗಳು ಉಳಿದಿವೆ ಅಲ್ಲದೆ 1240 ರೂಗಳಿಂದ 1300 ವರೆಗೂ ಮರಾಟವನ್ನು ಮಾಡಲಾಗಿದೆ ಇದರ ಕುರಿತು ಕೃಷಿ ಇಲಾಖೆಗೆ ತಿಳಿಸಲಾಗಿದೆ.
ಭಾಕ್ಸ ಸುದ್ದಿ : ಕುನಗಾ ಪಾರ್ಮರ್ ಪ್ರೋಡಿಜರ್ ಕಂಪನಿ ಲಿಂ ಇವರಿಗೆ ನ್ಯಾಚುರಲ್ ಆರ್ಗ್ಯಾನಿಕ್ ಪಾಸ್ಪರೆಟ್ ಗೊಬ್ಬರವನ್ನು ಮಾರಾಟವನ್ನು ಮಾಡಲು ಅನುಮತಿಯನ್ನು ನೀಡಿರುವದಿಲ್ಲಾ ಆದ್ದರಿಂದ ಅದರ ಕುರಿತು ಗೊಬ್ಬರದ ಚೀಲದ ಪರಿಶೀಲನೆ ಹಾಗೂ ಗೋವಿನ ಜೋಳ ಬೆಳೆದ ರೈತರ ಹೋಲಗಳಿಗೆ ಹೋಗಿ ಪರಿಶೀಲನೆಯನ್ನು ಮಾಡುವದಲ್ಲಿದೆ ಕೃಷಿ ವಿಶ್ವವಿದ್ಯಾಲಯದ ತನಿಖಾ ತಂಡದಿಂದ ಪರಿಶೀಲಿಸುವದಾಗಿ ಹಾಗೂ ಈ ಕುರಿತು ಸಂಬಂದಿಸಿದ ಅಧಿಕಾರಿಗಳಿಗೆ ಮನವಿ ಕಳಿಸಲಾಗುವದು.
ಶಿಗ್ಗಾವಿ ಸಹಯಕ ನಿರ್ದೇಶಕ ಸುರೇಶ ಬಾಬುರಾವ್ ದಿಕ್ಸಿತ