ಯರಗಟ್ಟಿ

ಮಹಿಳೆಯರಿಗೆ ಅಸಭ್ಯವಾಗಿ ಮಾತನಾಡಿದ ನಿರ್ವಾಹಕ

ಮಹಿಳೆಯರಿಗೆ ಅಸಭ್ಯವಾಗಿ ಮಾತನಾಡಿದ ನಿರ್ವಾಹಕ

ಯರಗಟ್ಟಿ 18: ಶಕ್ತಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆ.ಎಸ್‌.ಆರ್‌.ಟಿ.ಸಿ ಚಾಲಕರು ಮತ್ತು ನಿರ್ವಾಹಕರು ಇಂದು ಯರಗಟ್ಟಿ ಬಸ್ ನಿಲ್ದಾಣದಲ್ಲಿ ಸಂಕೇಶ್ವರ ಧಾರವಾಡ ಬಸ್ ನಿರ್ವಾಹಕ ಮಹಿಳೆಯರಿಗೆ ಅಸಭ್ಯವಾಗಿ ಮಾತನಾಡಿದ ಘಟನೆ ನಡೆದಿದೆ.ನವರಾತ್ರಿ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬೆಳಗಿನಿಂದಲೇ ಜನದಟ್ಟಣೆ ಹೆಚ್ಚಿತ್ತು. ಬಸ್ ಹತ್ತುವಾಗ ಮಹಿಳೆಯರಿಗೆ ಅಸಭ್ಯವಾಗಿ ಮಾತನಾಡಿದ ಬಸ್ ನಿರ್ವಾಹಕ ಶಕ್ತಿಯೋಜನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಕೆ.ಎಸ್‌.ಆರ್‌.ಟಿ.ಸಿ ಸಿಬ್ಬಂದಿ. ಈ ಕುರಿತು ಸಾರ್ವಜನಿಕರಿಗೂ ಅಸಭ್ಯವಾಗಿ ಮಾತನಾಡಲು ತೊಡಗಿದಾಗ ವಾಹನ ನಿಲ್ಲಿಸಿದರೂ ನಿಲ್ಲಿಸದೆ ಹೋಗಿದ್ದಾರೆ. ಈ ಕುರಿತು ಯರಗಟ್ಟಿ ಸಾರಿಗೆ ನಿಯಂತ್ರಣಾಧಿಕಾರಿಗೆ ತಿಳಿಸಿದರೂ ಅವರು ಕೂಡ ಸರಿಯಾಗಿ ವರ್ತಿಸದೆ ಬೇಜವಾಬ್ದಾರಿ ಉತ್ತರ ಕೊಡುವ ಮೂಲಕ ಜಾರಿಕೊಂಡರು.ಬಸ್ ನಿಲ್ದಾಣದಲ್ಲಿ ಸಾವಿರಾರು ಜನ ಪ್ರಯಾಣಿಕರು ಕಾಯುತ್ತಿದ್ದರೂ ಯಾರೂ ಇರಲಿಲ್ಲ ಎಂದು ಯರಗಟ್ಟಿ ಬಸ್ ನಿಲ್ದಾಣದ ಸಾರಿಗೆ ಅಧಿಕಾರಿ ಹೇಳಿಕೆ ನೀಡುತ್ತಾರೆ. ಯರಗಟ್ಟಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಕೆ.ಎಸ್‌.ಆರ್‌.ಟಿ.ಸಿ. ಸಿಬ್ಬಂದಿ ಮಹಿಳೆಯರಿಗೆ ಗೌರವ ಕೊಡುವುದನ್ನು ಮರತು ಬಿಟ್ಟಿದ್ದಾರೆ. ಬರಿ ಏಕವಚನದಲ್ಲಿ ಮಾತನಾಡಲು ನಿಂತಿದ್ದಾರೆ. ಶಕ್ತಿ ಯೋಜನೆಯಲ್ಲಿ ಬಸ್ ಹತ್ತಲು ಬರುವ ಮಹಿಳೆಯರಿಗೆ ತೊಂದರೆ ಆಗುತ್ತದೆ.ರೇಣುಕಾ ಶಿಂಧೆ  

ಗೋಕಾಕ ಪ್ರಯಾಣಿಕರುಯರಗಟ್ಟಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ಮರೀಚಿಕೆಯಾಗಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ದುರ್ವಾಸನೆ ಇದ್ದರೂ ಅಲ್ಲಿಯೇ ಕೂಡ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಸಮೀರ ಜಮಾದಾರ  

ರೈತ ಮುಖಂಡ, ಯರಗಟ್ಟಿ 


ಸುದ್ದಿ ಓದಿ