ಕನಕದಾಸರ ತತ್ವಾದರ್ಶಗಳ ಅನುರಣೆ ಅಗತ್ಯ: ಪ್ರೊ. ಮರಿಗೌಡರ
ಯರಗಟ್ಟಿ 30: ವ್ಯಾಸರಾಯರ ನೆಚ್ಚಿನ ಶಿಷ್ಯರಾದ ಕನಕದಾಸರ ಬೋಧನೆಗಳು ಸಾರ್ವಕಾಲಿಕ ಮೌಲ್ಯಯುತವಾಗಿದ್ದು ಅವುಗಳ ಅನುಸರಣೆ ಅಗತ್ಯವಾಗಿದೆ ಎಂದು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಹೇಳಿದರು.
ಕನಕದಾಸ ಜಯಂತಿ ಪ್ರಯುಕ್ತ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಕನಕದಾಸರ ಜೀವನ ಮತ್ತು ಬೋಧನೆಗಳ ಕುರಿತು ಉಪನ್ಯಾಸ ನೀಡಿದರು. ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಮಾನತೆಯನ್ನು ಬೋಧಿಸಿದ ಕನಕದಾಸರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ. ಕನಕದಾಸರು ಸೇರಿದಂತೆ ಮಹಾತ್ಮರು, ಸಂತರು, ಶರಣರು ವಿಶ್ವಮಾನವರಾಗಿದ್ದು, ಅವರ ಜೀವನ ಹಾಗೂ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅನುಸರಿಬೇಕು ಎಂದು ಪ್ರತಿಪಾದಿಸಿದರು.
ಹಿರಿಯ ಪ್ರಾಧ್ಯಾಪಕಿ ಡಾ. ಸುನಂದಾ ಮಾದರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು, ಶಿದ್ಲಿಂಗಪ್ಪ ಗಾಳಿ ವಂದಿಸಿದರು. ಡಾ. ಗುರುಪ್ರಸಾದ ಗಣೇಶಕರ, ಕಲ್ಲಪ್ಪ ಹಂದಿಗುಂದ ಸೇರಿದಂತೆ ಮಹಾವಿದ್ಯಾಲಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.