ಕಂಪ್ಲಿ

ಅದ್ದಪ್ಪ ಭೀರಲಿಂಗೇಶ್ವರ ಗಂಗೆಸ್ಥಳ ಮೆರವಣಿಗೆ

ಅದ್ದಪ್ಪ ಭೀರಲಿಂಗೇಶ್ವರ ಗಂಗೆಸ್ಥಳ ಮೆರವಣಿಗೆ

ಲೋಕದರ್ಶನ ವರದಿ 

ಕಂಪ್ಲಿ 30:  ಪಟ್ಟಣದಲ್ಲಿ ಹಾಲುಮತ ಸಮಾಜದ ಕಂಪ್ಲಿ ನಗರ ಘಟಕದಿಂದ ಅದ್ದಪ್ಪ ಭೀರಲಿಂಗೇಶ್ವರ ಗಂಗೆಸ್ಥಳ ಮೆರವಣಿಗೆ ಭಾನುವಾರದಂದು ಶ್ರಾವಣ ಮಾಸದ ಪ್ರಯುಕ್ತ ವಿಜೃಂಭಣೆಯಿಂದ ಜರುಗಿತು.  ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಗಂಗೆಸ್ಥಳ ಮೆರವಣಿಗೆ ನಡುವಲ ಮಸೀದ, ಅಂಬೇಡ್ಕರ್ ವೃತ್ತ, ಅದ್ದಪ್ಪ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಸಣಾಪುರ ರಸ್ತೆ ಮೂಲಕ ಅದ್ದಪ್ಪ ಭೀರಲಿಂಗೇಶ್ವರ ದೇವಸ್ಥಾನ ಬಳಿ ಸಂಪನ್ನಗೊಂಡಿತು. ಈ ಮೆರವಣಿಗೆಯಲ್ಲಿ ಮಹಿಳೆಯರ ಕುಂಭ, ಕಳಸ, ಡೊಳ್ಳು ಕುಣಿತ ಸೇರಿದಂತೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಅದ್ದಪ್ಪ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹೂವಿನ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು. ಹಾಲುಮತ ಸಮಾಜದವರು ಸೇರಿದಂತೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಕಾಯಿ, ಕರ​‍್ೂರ ಅರ​‍್ಿಸಿ, ದೇವರ ಕೃಪೆಗೆ ಪಾತ್ರರಾದರು.  ಈ ಸಂದರ್ಭದಲ್ಲಿ ಹಾಲುಮತ ಸಮಾಜದ ನಗರ ಘಟಕ ಅಧ್ಯಕ್ಷ ಕೆ.ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಶೇಖರ​‍್ಪ ಬಳ್ಳಾರಿ, ಮುಖಂಡರಾದ ಕುರಿ ಹುಸೇನಪ್ಪ, ಕೆ.ಯಮನೂರ​‍್ಪ, ಮರಿ ಬಿಂಗಿ ವಿರುಪಣ್ಣ, ಬಿಂಗಿ ವೆಂಕಟೇಶ, ಕೇದರ್‌ನಾಥ, ವಿರುಪಣ್ಣ ಪಕ್ಕೀರ​‍್ಪ, ಬಿ.ದೇವೇಂದ್ರ, ಪೆದ್ದಣ್ಣ, ಬಳ್ಳಾರಿ ಲಕ್ಷ್ಮಣ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ