ಯರಗಟ್ಟಿ

ಅಹಿತಕರ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು : ಆಯ್. ಎಂ. ಮಠಪತಿ

ಅಹಿತಕರ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು : ಆಯ್. ಎಂ. ಮಠಪತಿ

ಯರಗಟ್ಟಿ 19 : ಪಟ್ಟಣದಲ್ಲಿ ಜುಲೈ 21 ರಂದು ನಡೆಯುವ ರೈತ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮುರಗೋಡ ಸಿಪಿಐ ಆಯ್. ಎಂ. ಮಠಪತಿ ಹೇಳಿದರು. 

ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಾಂತಿಸುವ್ಯವಸ್ಥೆ ಹದಗೆಡದಂತೆ ಎಲ್ಲರೂ ಸಹಕರಿಸಬೇಕು. ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಬೆರೆಡೆಯಿಂದ ಬರುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದರು.  

ರೈತ ಮುಖಂಡ ಸೋಮು ರೈನಾಪೂರ ಮಾತನಾಡಿ, ಬೆಳೆಹಾನಿ ಪರಿಹಾರದ, ಮಹದಾಯಿ ಮತ್ತು ಸತ್ತಿಗೇರಿ ಏತನೀರಾವರಿ ಹಾಗೂ ಯರಗಟ್ಟಿ ಎರಡನೇಯ ಹಂತದ ನೀರಾವರಿಗಾಗಿ ಶಾಂತಿ ರೀತಿಯಿಂದ ಬೃಹತ ರ್್ಯಾಲಿ ಹಾಗೂ ರೈತರ ಸಮಾವೇಶ  ಮಾಡುತ್ತೇವೆ. ಹೊರಗಿನ ಮಂದಿ ಬಂದು ಗಲಾಟೆ ಮಾಡಲಾರದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದರು. 

ಪಿಎಸ್ಐ ಆಯ್. ಎಂ. ಹಿರೇಗೌಡರ ರೈತ ಮುಖಂಡರಾ ಬಸವರಾಜ ಮೋಕಾಶಿ, ಚನ್ನಪ್ಪ ಗಣಾಚಾರಿ, ಸುರೇಶ ಕರವಿನಕೊಪ್ಪ,  ರಂಗಪ್ಪ ಗಂಗರಡ್ಡಿ, ಯಕ್ಕೇರೆಪ್ಪ ತಳವಾರ, ಯಮನಪ್ಪ ಮಾಳಗಿ, ಯಕ್ಕೇರೆಪ್ಪ ಮಾಳಗಿ, ಗೀರೀಶ ಗಂಗರಡ್ಡಿ, ಶೇಖರ ಕಿಲಾರಿ, ರಾಮಕೃಷ್ಣ ಏಳಮ್ಮಿ, ಮುತ್ತಪ್ಪ ವೀರಾಪೂರ ಸೇರಿದಂತೆ ಅನೇಕರು ಇದ್ದರು ಉಪಸ್ಥಿತರಿದ್ದರು. 


ಸುದ್ದಿ ಓದಿ