ಯರಗಟ್ಟಿ

ಕುಟುಂಬ ರಾಜಕಾರಣಕ್ಕೆ ಮನ್ನನೆ: ನವಲಗುಂದ ಆರೋಪ

ಕುಟುಂಬ ರಾಜಕಾರಣಕ್ಕೆ ಮನ್ನನೆ: ನವಲಗುಂದ ಆರೋಪ

ಲೋಕದರ್ಶನ ವರದಿ 

ಯರಗಟ್ಟಿ 12: ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ಇತ್ತು ಈಗ ಕುಟುಂಬ ರಾಜಕಾರಣಕ್ಕೆ ಟಿಕೆಟ್ ನೀಡುವ ಮೂಲಕ ಅನ್ಯಾಯ ಎಸಗಲಾಗಿದೆ ಎಂದು ಬಿಜೆಪಿ ಮುಖಂಡ ಸಂಜೀವಕುಮಾರ ನವಲಗುಂದ ಅಸಮಾಧಾನ ವ್ಯಕ್ತಪಡಿಸಿದರು. 


ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಮ್ಮ ಸಮಾಜ ಸೇವೆ ಹಾಗೂ ಹೋರಾಟ ಗುರ್ತಿಸಿ  ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ಇತ್ತು ಯುವಕರಿಗೆ, ಸಾಮಾನ್ಯ ಕಾರ್ಯಕ್ರತರಿಗೆ, ಹೊಸ ಮುಖಕ್ಕೆ ಟಿಕೆಟ್ ಭರವಸೆಯಿಂದ ವಿಧಾನಸಭಾ ಚುನಾವಣೆಗೆ  ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದೆ.  


ಆದರೆ ಈ ಭಾರಿ ದಿ. ಆನಂದ ಮಾಮನಿ ಪತ್ನಿಗೆ ಟಿಕೆಟ್ ನೀಡಿ ಕುಟುಂಬ ರಾಜಕಾರಣಕ್ಕೆ ಮಣ್ಣನೆ ನೀಡಿದ್ದಾರೆ ಎಂದು ದೂರಿದರು. 


ಹಾಗೂ ತಮ್ಮ ಮುಂದಿನ ನಡೆ ಏನು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ನನ್ನ ಎಲ್ಲಾ ಆತ್ಮೀಯ ತಾಲೂಕಿನ ಸಮಸ್ತ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಎರಡು ಮೂರು ದಿವಸದಲ್ಲಿ ತಿಳಿಸುವುದಾಗಿ ಹೇಳಿದರು. 


ಸುದ್ದಿ ಓದಿ