ಚಿಕ್ಕೋಡಿ

ಅಖಿಲ ಭಾರತ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಸಾಧನೆ

ಅಖಿಲ ಭಾರತ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಸಾಧನೆ

ಲೋಕದರ್ಶನ ವರದಿ 


ಚಿಕ್ಕೋಡಿ 13:  ಜೊಲ್ಲೆ ಶಿಕ್ಷಣ ಸಂಸ್ಥೆಯ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಮ್ ಪಬ್ಲಿಕ್ ಸ್ಕೂಲ್, ನಣದಿ ವಿದ್ಯಾರ್ಥಿನಿಯಾದ ಬಿ. ಹಾರಿಕಾ ಮೋಹನ ರೆಡ್ಡಿ ಅವಳು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಿ.ಬಿ.ಎಸ್‌.ಇ ವತಿಯಿಂದ ಅಖಿಲ ಭಾರತ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ (ವಿಷಯ-ದಿ ಸ್ಟೋರಿ ಆಫ್ ಇಂಡಿಯಾ)  ಭಾಗವಹಿಸಿ ಬೆಂಗಳೂರು ಪ್ರಾದೇಶಿಕ ವಿಭಾಗದಿಂದ ಆಯ್ಕೆಯಾಗಿದ್ದಾಳೆ. ಕರ್ನಾಟಕದಿಂದ ಆಯ್ಕೆಯಾದ ಕೇವಲ ಇಬ್ಬರು ವಿದ್ಯಾರ್ಥಿಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯು ಸಹ ವಿಜಯಶಾಲಿಯಾಗಿದ್ದಾಳೆ. 

ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ  ಅಣ್ಣಾಸಾಹೇಬ ಜೊಲ್ಲೆ, ಮುಜರಾಯಿ, ಹಜ್ ಮತ್ತು ವಕ್ಫ್‌ ಇಲಾಖೆ ಸಚಿವೆ ಮತ್ತು ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಸೌ. ಶಶಿಕಲಾ ಜೊಲ್ಲೆ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಪ್ರಿಯಾ ಜೊಲ್ಲೆ, ಮ್ಯಾಗ್ನಟಫ್ ಇಂಡಿಯಾ ಪ್ರೈ, ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು, ಜೊಲ್ಲೆ ಗ್ರೂಪ್ ಸಿ.ಇ.ಓ ಡಾ. ವಿವೇಕಾನಂದ ಬಂಕೋಳಿ, ಸಂಯೋಜನಾಧಿಕಾರಿಗಳಾದ ಲಕ್ಷ್ಮಣ ಮಾಳಿ, ಪ್ರಾಚಾರ್ಯೆರಾದ ಗೀತಾ ನಾಯ್ಡು, ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ. ಶಿಕ್ಷಕಿಯಾದ ಸಪನಾ ವಾಳಕೆ ಅವರು ಮಾರ್ಗದರ್ಶನ ನೀಡಿದ್ದಾರೆ. 


ಸುದ್ದಿ ಓದಿ