ರಾಣೆಬೆನ್ನೂರ

ಉಮಾಶಂಕರ ನಗರ ಒಕ್ಕೂಟಗಳ ಸಾಧನಾ ಸಮಾವೇಶ

ಉಮಾಶಂಕರ ನಗರ ಒಕ್ಕೂಟಗಳ ಸಾಧನಾ ಸಮಾವೇಶ
ರಾಣೀಬೆನ್ನೂರ ಕಾಕಿ ಜನಸೇವಾ ಸಂಸ್ಥೆಯ ಸಭಾಭವನದಲ್ಲಿ ನಡೆದ ಉಮಾಶಂಕರ ನಗರ ವಲಯ ಒಕ್ಕೂಟಗಳ ಸಾಧನಾ ಸಮಾವೇಶವು ರುಕ್ಮಿಣಿ ಸಾ

ಆರ್ಥಿಕ ಸುಧಾರಣೆಗೆ ಕ್ಷೇತ್ರ ಧರ್ಮಸ್ಥಳದ ಸೇವಾಕಾರ್ಯ ಶ್ಲಾಘನೀಯ -ಪ್ರಕಾಶಾನಂದಜಿ

ರಾಣೀಬೆನ್ನೂರ.ಮಾ.6: ಸಮಾಜದಲ್ಲಿ ಇತರರಂತೆ ಸಮಾನತೆಯಿಂದ ಬದುಕಿ ಬಾಳಿ ಸುಂದರ ಜೀವನ ಸಾಗಿಸಬೇಕಾದರೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ದುಡಿಯುವುದು ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದಶ್ರಾಮದ ಶ್ರೀ ಪ್ರಕಾಶಾನಂದಜಿ ಮಹಾರಾಜ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಮಾರುತಿ ನಗರದ ಕಾಕಿ ಜನಸೇವಾ ಸಂಸ್ಥೆಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಆಯೋಜಿಸಿದ್ದ ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಉಮಾಶಂಕರ ನಗರ ವಲಯದ ಒಕ್ಕೂಟಗಳ ಸಾಧನಾ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವಿರೇಂದ್ರ ಹೆಗಡೆಜಿ ಅವರು ಮಂಜುನಾಥ ಸ್ವಾಮಿಯ ಧಾರ್ಮಿಕ ಕಾರ್ಯಗಳ ಜೊತೆಜೊತೆಗೆ ಈ ನಾಡಿನ ಪ್ರತಿಯೊಬ್ಬ ಮಹಿಳೆಯರು ಆರ್ಥಿಕ ಚೇತರಿಕೆಯನ್ನು ಕಾಣಬೇಕು ಅದರ ಮೂಲಕ ಬದುಕನ್ನು ರೂಪಿಸಿಕೊಂಡು ಮತ್ತೊಬ್ಬರ ಬದುಕಿಗೆ ಆಸರೆಯಾಗಬೇಕು ಎನ್ನುವ ದೂರದೃಷ್ಠಿಯ ಹಿನ್ನೆಲೆಯಲ್ಲಿ ಮಾಡುತ್ತಿರುವ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಓಂ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ಸಾಹುಕಾರ ಅವರು ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಜೀವನ ಸಾಗಿಸುವಂತಾಗಿತ್ತು. ಕ್ಷೇತ್ರದ ಕೃಪಾಕಟಾಕ್ಷೆಯಿಂದ ಮಹಿಳಾ ಸಮುದಾಯವು ಆರ್ಥಿಕವಾಗಿ ಸಮೃದ್ಧಿ ಹೊಂದಿ ಇಂದು ಸಮಾಜಮುಖಿ ಕಾರ್ಯಗಳ ಮೂಲಕ ಈ ದೇಶದ ಸತ್ಪರಂಪರೆಯ ಭಾವೈಕ್ಯತೆಯ ಬದುಕು ಸಾಗಿಸುತ್ತಿದ್ದಾಳೆ. ಇದು ಈ ನಾಡಿನ ಹೆಮ್ಮೆಯ ಪ್ರತೀಕವಾಗಿದೆ ಎಂದ ಅವರು ಯಾವುದೇ ಸಂಘಟನೆ ಪ್ರಭಲವಾಗಿ ಬೆಳೆಯಬೇಕಾದರೆ ಮಹಿಳೆಯರು ಮೊದಲು ಮನಸು ಮಾಡಿದಾಗ ಮಾತ್ರ ಸಾದ್ಯವಾಗುವುದು ಎಂದರು.  

ಅಧ್ಯಕ್ಷತೆ ವಹಿಸಿದ್ದ ನಗರಸಭಾದ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಅವರು ತೊಟ್ಟಿಲ ತೂಗುವ ಕೈ ಇಂದು ತನ್ನ ಕುಟುಂಬದ ನಿರ್ವಹಣೆಯ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಧನೆ ಮೆರೆಯುತ್ತಿರುವುದು ಈ ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಸಂಘ-ಸಂಸ್ಥೆಗಳು ಅತ್ಯಂತ ಪ್ರಭಲವಾಗಿ ಸಮ-ಸಮಾಜದ ನಿರ್ಮಾಣಕ್ಕಾಗಿ ಆರ್ಥಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪರಿಣಾಮ ಇಂದು ಎಲ್ಲ ರಂಗಗಳಲ್ಲಿ ಪುರುಷರಿಗೆ ಸಮಾನವಾಗಿ ಸರ್ವ ಸ್ವತಂತ್ರತೆಯಿಂದ ಬದುಕನ್ನು ನಿರ್ವಹಿಸುತ್ತಿ ದ್ದಾಳೆ. ಇದು ಮಹಿಳಾ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ವೇದಿಕೆಯಲ್ಲಿ ಜೆಸಿಐ ಮಾಜಿ ಅಧ್ಯಕ್ಷೆ ಪುಷ್ಪಾ ಬಸವರಾಜ ಬದಾಮಿ, ಸ್ವಾಕರವೇ ರಾಜ್ಯಾದ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾದ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಚನ್ನಬಸಪ್ಪ ನಾಡರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರೇಣುಕಾ ಸಂಗಡಿಗರು ಪ್ರಾರ್ಥಿಸಿ, ತಿಮ್ಮಪ್ಪ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ನಂತರ ಒಕ್ಕೂಟದ ಮಹಿಳೆಯರಿಂದ ನಡೆದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.     

ಸುದ್ದಿ ಓದಿ