ಯರಗಟ್ಟಿ

ಮುಗಳಿಹಾಳ ಸರಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ದಂಡಿನ ಆಕಸ್ಮಿಕ ಭೇಟಿ

ಮುಗಳಿಹಾಳ ಸರಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ದಂಡಿನ ಆಕಸ್ಮಿಕ ಭೇಟಿ

ಯರಗಟ್ಟಿ 29: ಸಮೀಪದ ಮುಗಳಿಹಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಅವರು ಆಕಸ್ಮಿಕ ಭೇಟಿ ನೀಡಿದರು. 

ಶಾಲೆಯ ಸ್ವಚತೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಪರೀಶೀಲಿಸಿದರು. ನಂತರ ಶಾಲಾ ಆವರಣದಲ್ಲಿರುವ ಕರ್ನಾಟಕ ಕಸ್ತೂರ ಬಾ ಗಾಂಧಿ ವಸತಿ ನಿಲಯಕ್ಕೆ ಹೋಗಿ ಅಲ್ಲಿಯ ಅಡುಗೆ ಕೋಣೆಯನ್ನು ವೀಕ್ಷಿಸಿ ಅಗತ್ಯ ಸೂಚನೆಗಳನ್ನು ನೀಡಿದರು. 

ನಂತರ ಶಾಲೆಯ ಮಕ್ಕಳ ವ್ಯಾಸಂಗದ ಮಟ್ಟವನ್ನು ಪರೀಶೀಲಿಸಿ ಶಿಕ್ಷಕರು ಹೇಳಿದ ಅಭ್ಯಾಸವನ್ನು ಸರಿಯಾಗಿ ಮಾಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಶಿಕ್ಷಕರ ಕೊರತೆಯ ಬಗ್ಗೆ ಇಲ್ಲಿನ ಸ್ಥಳೀಯ ಜನರು ಶಿಕ್ಷಣಾಧಿಕಾರಿಗೆ ಗಮನಕ್ಕೆ ತಂದರು.ಶಿಕ್ಷಕರ ಕೊರತೆ ಬಾರದಂತೆ ನೋಡುತ್ತೇನೆ. ಹೆಚ್ಚುವರಿ ಶಿಕ್ಷಕರನ್ನು ಶಾಲೆಗೆ ತಂದು ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.ನಂತರ ವಸತಿ ನಿಲಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್‌ನ್ನು ವಿತರಿಸಿದರು. 

ಸಿಆರ​‍್ಿ ಬಾಳೇಶ ಸಿದ್ದಬಸಣ್ಣವರ, ಐ ಎಸ್ ಪವಾಡಿಗೌಡ್ರ, ಎಸ್ ಜಿ ಗಣಾಚಾರಿಮಠ, ಎಸ್‌ಡಿಎಮ್‌ಸಿ ಮಾಜಿ ಅಧ್ಯಕ್ಷ ಬಸಪ್ಪ ದಳವಾಯಿ, ಎಪಿಎಂಸಿ ಸದಸ್ಯ ಲಕ್ಷ್ಮಣ ದಳವಾಯಿ, ಗ್ರಾಮ ಪಂಚಾಯತ್ ಸದಸ್ಯ ರಮೇಶ ಧರ್ಮಟ್ಟಿ ಹಾಗೂ ಶಾಲೆಯ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ