ಬ್ಯಾಡ್ಗಿ

ಟಿಪ್ಪರ್-ಬೈಕ್‍ಗೆ ಡಿಕ್ಕಿ ಮಹಿಳೆಗೆ ಗಾಯ

ಟಿಪ್ಪರ್-ಬೈಕ್‍ಗೆ ಡಿಕ್ಕಿ ಮಹಿಳೆಗೆ ಗಾಯ

ಬ್ಯಾಡಗಿ 24 ಟಿಪ್ಪರವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕನಲ್ಲಿದ್ದ ಮಹಿಳೆಯ ಕೈ ಮುರಿದ ಘಟನೆ ತಾ.ನ ತಡಸ ಗ್ರಾಮದ ಬಿದರಕಟ್ಟಿ ಬಳಿ ನಡೆದಿದೆ. ಶಾಂತಮ್ಮ ಸೋಮಪ್ಪ ಬೆಳವಲಕೋಣಿ(58) ಅಪಘಾತದಲ್ಲಿ ಕೈ ಮುರಿದುಕೊಂಡ ಮಹಿಳೆ.

ಸ್ಥಳದಲ್ಲಿದ್ದ ಗ್ರಾಮಸ್ಥರು ಕೂಡಲೇ ಗಾಯಾಳುಗಳನ್ನ ಸಮು ದಾಯ ಆಸ್ಪತ್ರೆಗೆ ದಾಖಸಿದ್ದಾರೆ. ಅಪಘಾತ ನಡೆದ ನಂತರ ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿದ ಟಿಪ್ಪರ ಚಾಲಕ ವಾಹನವನ್ನ ಬಿಟ್ಟು ಪರಾರಿಯಾ ಗಿದ್ದಾನೆ. 

ಗ್ರಾಮಸ್ಥರ ಹಠಾತ್ ಪ್ರತಿಭಟನೆ: ಘಟನೆ ನಡೆದ ಸ್ಥಳದಲ್ಲಿದ್ದ ಗ್ರಾಮಸ್ಥರು ಟಿಪ್ಪರಗಳ ಹಾವಳಿಯಿಂದ ಬೇಸತ್ತು ಹಠಾತ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ವೇಗವಾಗಿ ಚಲಿಸುವ ಟಿಪ್ಪಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.

ಸುದ್ದಿ ಓದಿ