ದ್ವಿಚಕ್ರ ವಾಹನ ಅಪಘಾತ: ಓರ್ವನ ಸಾವು
ಬನವಾಸಿ 22: ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನ ಸ್ಕೀಡ್ ಆಗಿ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬನವಾಸಿ-ದಾಸನಕೊಪ್ಪ ರಸ್ತೆಯಲ್ಲಿ ಹಾಡಲಗಿ ಕೆರೆಯ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಘಟನೆಯ ವಿವರ: ಆಪಾದಿತನಾದ ಮರಗುಂಡಿ ಗ್ರಾಮದ ಗಣಪತಿ ಕನ್ನಪ್ಪ ನಾಯ್ಕ್ ಎಂಬಾತನು ಜೂ. 21 ರಂದು ರಾತ್ರಿ 12.45 ಗಂಟೆಗೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಅದೇ ಗ್ರಾಮದ ಪ್ರಭಾಕರ ಬಸವಣ್ಣೆ ನಾಯ್ಕನನ್ನು ಕುಳ್ಳಿರಿಸಿಕೊಂಡು ಬನವಾಸಿ-ದಾಸನಕೊಪ್ಪ ರಸ್ತೆಯ ಮಾರ್ಗವಾಗಿ ಮರಗುಂಡಿಗೆ ಹೋಗುತ್ತಿರುವಾಗ ವಾಹನವನ್ನು ಅತಿ ವೇಗವಾಗಿ ಚಲಾಯಿಸಿ ಹಾಡಲಗಿ ಕೆರೆಯ ಬಳಿ ಇರುವ ತಿರುವಿನ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ವಾಹನ ಸ್ಕೀಡ್ ಆಗಿ ಬಿದ್ದು, ಸಾಧಾರಣ ಗಾಯಗೊಂಡಿದ್ದಾನೆ. ಹಿಂಬದಿ ಕುಳಿತ ಪ್ರಭಾಕರ ಬಸವಣ್ಣೆ ನಾಯ್ಕ ಗಭೀರ ಗಾಯಗೊಂಡು ಉಪಚಾರಕ್ಕಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯ ಮೃತಪಟಿದ್ದಾರೆ ಎಂದು ಮೃತನ ಮಗನಾದ ವಿಲಾಸ ಪ್ರಭಾಕರ ನಾಯ್ಕ್ ಎಂಬುವವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾಸ್ಥಳಕ್ಕೆ ಪಿಎಸ್ಐ ಹನುಮಂತ ಬಿರಾದರ ಭೇಟಿ ನೀಡಿ ಪರಿಶೀಲನೆಗೈದು ಮುಂದಿನ ತನಿಖೆಕೈಗೊಂಡಿದ್ದಾರೆ.