ಇಂಡಿ

ನಿಂತ ಟಿಪ್ಪರಿಗೆ ಬೈಕ್ ಡಿಕ್ಕಿ : ಓರ್ವ ಸಾವು, ಇಬ್ಬರಿಗೆ ಗಾಯ

ನಿಂತ ಟಿಪ್ಪರಿಗೆ ಬೈಕ್ ಡಿಕ್ಕಿ : ಓರ್ವ ಸಾವು, ಇಬ್ಬರಿಗೆ ಗಾಯ

ಇಂಡಿ ಫೆ. 22 : ಕಚ್ಚಾ ಮತ್ತು ಡಾಂಬರ್ ರಸ್ತೆಯ ಮೇಲೆ ನಿಂತ ಟಿಪ್ಪರಗೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮದಿಂದ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಇಬ್ಬರಿಗೆ ಗಂಬೀರ ಗಾಯವಾಗಿರುವ ಘಟನೆ ತೆನ್ನೆಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. 

ಇಂಡಿ ತಾಲೂಕಿನ ಗೊರನಾಳ ಗ್ರಾಮದ ಬೈಕ್ ಸವಾರ ಭಾಗೇಶ ಸುಖದೇವ ಹೊಸಮನಿ(17) ಮೃತಪಟ್ಟಿರುತ್ತಾನೆ. ಬ|ಐಕ್ ಸವಾರನ ಹಿಂದಗಡೆ ಕುಳಿತ ಮೃತನ ಭಾವನ ಮಗನಾದ ಮುತ್ತಣ್ಣ ಸುಖದೇವ ಹೊಸಮನಿ ಹಾಗೂ ಗೊರನಾಳ ಗ್ರಾಮದ ನಿಂಗಪ್ಪ ರಾಮಣ್ಣ ಸಾಗನೂರ ಇವರಿಗೆ ಗಂಬೀರ ಗಾಯವಾಗಿರುತ್ತದೆ. ಮೋಟಾರ್ ಸೈಕಲ್ ಮೇಲೆ ಈ ಮೂವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ  ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಶೋಭಾ ಸುಖದೇವ ಹೊಸಮನಿ ಫಿರ್ಯಾದಿ ಕೊಟ್ಟ ಮೇರೆಗೆ ರವಿವಾರರಂದು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸುದ್ದಿ ಓದಿ