ಬ್ಯಾಡ್ಗಿ

ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯದುರ್ಬಳಕೆ: ಮನವಿ

ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯದುರ್ಬಳಕೆ: ಮನವಿ

ಬ್ಯಾಡಗಿ22:  ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ತಿಪ್ಪೆಸ್ವಾಮಿ ಹೊಯ್ಸರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಕೇಂದ್ರದಲ್ಲಿ ಬಿಜೆಪಿ ಸಕರ್ಾರವು ಕಾಂಗ್ರೇಸ್ ನಾಯಕರನ್ನು ಗುರಿಯಾಗಿಸಿಕೊಂಡು ಪಕ್ಷವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲಗಾಂಧಿ ಹಾಗೂ ಸೋನಿಯಾಗಾಂಧಿ ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ. ಮುಗಿದು ಹೋದ ಅಧ್ಯಾಯವನ್ನು ಕೆದಕುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ಸುಳ್ಳು ವಿಷಯಗಳನ್ನು ಸಂಗ್ರಹ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಇಡಿ ಹಾಗೂ ಸಿಬಿಐ ಸ್ವತಂತ್ರ ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಗಳಾಗಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸಕರ್ಾರ ಅವುಗಳ ಮೇಲೆ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ದೌರ್ಜನ್ಯವನ್ನು ಎಸಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆಯಲ್ಲದೇ, ಯುವಕರಲ್ಲಿ ಜಾತಿ ಎಂಬ ವಿಷ ಬೀಜದ ಮೂಲಕ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಪ್ರಧಾನ ಕಾರ್ಯದಶರ್ಿ ರಮೇಶ ಸುತ್ತಕೋಟಿ, ಮುಖಂಡರಾದ ಬೀರಪ್ಪ ಬಣಕಾರ, ಪ್ರಕಾಶ ಬನ್ನಿಹಟ್ಟಿ, ಮಹ್ಮದರಪೀಕ್ ಮುದಗಲ್, ಮಂಜುನಾಥ ಭೋವಿ, ದುಗರ್ೆಶ ಗೊಣೆಮ್ಮನವರ, ಮಾರುತಿ ಅಚ್ಚಿಗೇರಿ, ಡಿ.ಹೆಚ್.ಬುಡ್ಡನಗೌಡ್ರ, ಶಂಭು ಪಾಟೀಲ, ದಾನನಗೌಡ ತೋಟದ, ಖಾದರಸಾಬ ದೊಡ್ಡಮನಿ, ಶಂಕ್ರಗೌಡ್ರ ಪಾಟೀಲ, ರಮೇಶ ಮೋಟೆಬೆನ್ನೂರ, ಸರ್ಫರಾಜ್ ಹೇರಕಲ್, ಪರಶುರಾಮ ಗೆಜ್ಜೆಳ್ಳಿ, ಉದಯ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ