ತಾಳಿಕೋಟಿ

ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಿ

ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಿ

ತಾಳಿಕೋಟೆ20: ರಾಜ್ಯ ಹಾಗೂ ಕೇಂದ್ರ ಸರಕಾರ ಆಹಾರ ಪದಾರ್ಥಗಳ ಮೇಲೆ ಶೇ.5 ಜಿಎಸ್‌ಟಿ ಹೇರುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರೀಮಂತರ ಪರವಾಗಿ ಕಾರ್ಯನಿರ್ವಹಿಸುತ್ತಿವೆ. ಬೆಲೆ ಏರಿಕೆಯಿಂದಾಗಿ ಬಡವರು ಸದ್ಯದ ಸ್ಥಿತಿಯಲ್ಲಿ ಬದುಕುವದೇ ದುಸ್ಥರವಾಗಿದ್ದು ಆಹಾರ ಪದಾರ್ಥಗಳ ಮೇಲೆ ಹೇರಿರುವ ಶೇ.5 ಜಿಎಸ್‌ಟಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. 

ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2014 ರಿಂದ ಸತತವಾಗಿ ಬೆಲೆ ಏರಿಯಿಂದಾಗಿ ಬಡವರು ಕಂಗಾಲಾಗಿದ್ದಾರೆ. ಇಂತಹದರಲ್ಲಿ ಬಡವರ ಆಹಾರದ ಮೇಲೆ ಜಿಎಸ್‌ಟಿ ಹೇರುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳಿದಿದೆ.  ಪ್ರತಿನಿತ್ಯ ಬಳಸುವಂತಹ ಆಹಾರ ಪದಾರ್ಥಗಳ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಹಾಲು ಸೇರಿದಂತೆ ಇನ್ನಿತರ ಆಹಾರ ಧಾನ್ಯಗಳು ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ. ತಿನ್ನುವ ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಇನ್ನಿತರ ಆಹಾರ ಧಾನ್ಯಗಳ ಮೇಲೆ ಶೇ. 5 ರಷ್ಟು ತೆರಿಗೆ ವಿಧಿಸಿರುವುದು ಸಾಮಾನ್ಯ ವರ್ಗದ ಜನರಿಗೆ ಬಹಳ ತೊಂದರೆಯಾಗುತ್ತದೆ. ಕೇಂದ್ರ ಸರಕಾರ ವಿಧಿಸಿರುವ ಜಿಎಸ್‌ಟಿ ಮುಖ್ಯವಾಗಿ ರೈತರಿಗೆ, ಕೈಗಾರಿಕಾ ಉದ್ದಿಮೆದಾರರಿಗೆ ಹಾಗೂ ಅಕ್ಕಿ ಖರೀದಿ ಮಾಡುವ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಅಲ್ಲದೇ, ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಮೇಲಿನ ತೆರಿಗೆಯಿಂದ ಜನಸಾಮಾನ್ಯರ ಜೀವನ ಪರಿದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಇವುಗಳ ಮೇಲಿನ ತೆರಿಗೆಯಿಂದ ಜನಸಾಮಾನ್ಯರ ಜೀವನ ನಡೆಸುವುದಕ್ಕೆ ತುಂಬ ಕಷ್ಟವಾಗುತ್ತಿದೆ. ಕೂಡಲೇ ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ತೆರಿಗೆಯನ್ನು ರದ್ದು ಪಡಿಸಬೇಕು ಇಲ್ಲದೇ ಹೋದರೆ ಮತಕ್ಷೇತ್ರದಾಧ್ಯಂತ ಹೋರಾಟವನ್ನು ನಡೆಸಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಮಡುಸಾಹುಕಾರ ಬಿರಾದಾರ, ವಿರೇಶ ಕಂಗಳ, ನಿಂಗನಗೌಡ ಅಗ್ನಿ, ಸಂಗನಗೌಡ ಪಾಟೀಲ, ಸುರೇಶ ಕಂಗಳ, ಬಸನಗೌಡ ಹಳ್ಳಿಪಾಟೀಲ, ಬಿಜಾನಅಲಿ ನೀರಲಗಿ, ತಿಪ್ಪಣ್ಣ ಆದ್ವಾನಿ, ನಿಂಗು ಕಲಬುರ್ಗಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ