ಗೋಕಾಕ್

ಶಾಲಾ ಆವರಣದಲ್ಲಿ ಆಧಾರ ತಿದ್ದುಪಡಿ ವ್ಯವಸ್ಥೆ: ಬಿಇಒ ಮನ್ನಿಕೇರಿ

ಶಾಲಾ ಆವರಣದಲ್ಲಿ ಆಧಾರ ತಿದ್ದುಪಡಿ ವ್ಯವಸ್ಥೆ: ಬಿಇಒ ಮನ್ನಿಕೇರಿ

ಘಟಪ್ರಭಾ 22: ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಆಧಾರ ತಿದ್ದುಪಡಿ ಅಗತ್ಯವಾಗಿರುವ ಕಾರಣ ಮಕ್ಕಳ ಆಧಾರ ಕಾರ್ಡ ತಿದ್ದುಪಡಿಗೆ ಸೂಚಿಸಲಾಗಿದೆ, ಆದರೆ ಆಧಾರ ಕೇಂದ್ರಗಳ ಕೊರತೆಯಿಂದ ಮಕ್ಕಳ ಕಲಿಕೆಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಆದ್ದರಿಂದ ಶಾಲೆಗಳ ಆವರಣದಲ್ಲಿಯೇ ಆಧಾರ ತಿದ್ದುಪಡಿ ವ್ಯವಸ್ಥೆ ಮಾಡಲಾಗುವುದು ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ತಿಳಿಸಿದರು.

ಅವರು ಮಂಗಳವಾರ ಮಲ್ಲಾಪೂರ ಪಿ.ಜಿ ಸ.ಹಿ.ಪ್ರಾ ಪ್ರಾಥಮಿಕ ಶಾಲೆಗೆ ಭೆಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೆಟಿಯಾದ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಶಿಕ್ಷಣ ಇಲಾಖೆಯ ಹೊಸ ನಿಯಮದಿಂದ ಶಾಲಾ ಮಕ್ಕಳ ಆಧಾರ ಕಾರ್ಡಗಳ ತಿದ್ದುಪಡಿಗಾಗಿ ಅನುಭವಿಸುತ್ತಿರುವ ತೊಂದರೆಗಳ ಕುರಿತು ಚರ್ಚಿಸಿ, ಮಾತನಾಡಿ ಈ ಕುರಿತು ಈಗಾಗಲೇ ಮೂಡಲಗಿ ಹಾಗೂ ಗೋಕಾಕ ತಹಶೀಲ್ದಾರರೊಂದಿಗೆ ಚರ್ಚಿಸಿ ಲಿಖಿತರೂಪದಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಕೂಡಲೇ ಆಯಾ ಶಾಲೆಗಳ ಆವರಣದಲ್ಲಿಯೇ ಆಧಾರ ಕ್ಯಾಂಪಗಳನ್ನು ಮಾಡುವ ಮೂಲಕ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಕೋರಲಾಗಿದೆ. ಶಿಕ್ಷಕರು ಆಧಾರ ಕಾರ್ಡ ತಿದ್ದುಪಡಿಗಾಗಿ ಪಾಲಕರ ಮೇಲೆ ಹೆಚ್ಚಿನ ಒತ್ತಡ ಹಾಕಬಾರದೆಂದು ಸೂಚಿಸಲಾಗಿದ್ದು, ಪಾಲಕರು ಕೂಡಾ ತಮ್ಮ ಮಕ್ಕಳ ದಾಖಲೆಗಳನ್ನು ಸರಿ ಪಡಿಸಕೊಳ್ಳಲು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು.  

ಕೆಲವು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಫೀ ವಸೂಲಿ ಹಾಗೂ ಫೀ ತುಂಬಲು ವಿಳಂಬವಾದ ವಿದ್ಯಾರ್ಥಿಗಳನ್ನು ಬೆಂಚ ಮೇಲೆ ನಿಲ್ಲಿಸುವುದು. ಫೀ ತೇಗೆದುಕೊಂಡೆ ಶಾಲೆಗೆ ಬರಬೇಕು ಎಂದು ವಿದ್ಯಾರ್ಧಿಗಳನ್ನು ಮನೆಗೆ ಕಳುಹಿಸಿರುವ ಸಮಸ್ಯೆಗಳ ಕುರಿತು ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಬಿಇಓ ಅವರ ಗಮನಕ್ಕೆ ತಂದಾಗ ಅನುದಾನಿತ ಶಾಲೆಗಳಿಗೆ ಪ್ರಮುಖವಾಗಿ ಸರ್ಕಾರಿ ಅನುದಾನಿತ ಶಾಲೆ ಎಂದು ನಾಮಫಲಕ ಹಾಕುವುದು ಹಾಗೂ ಪಾಲಕರಿಂದ ಸರ್ಕಾರ ನಿಗದಿ ಪಡಿಸಿದ ಫೀ ಮಾತ್ರ ತೆಗೆದುಕೊಳ್ಳುವ ಕುರಿತು ಸುತ್ತೋಲೆ ಹೋರಡಿಸುವುದಾಗಿ ಅಜೀತ ಮನ್ನಿಕೇರಿ ಭರವಸೆ ನೀಡಿದರು.  

 ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆಂಪಣ್ಣ ಚೌಕಶಿ, ಈ  ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆಂಪಣ್ಣ ಚೌಕಶಿ, ಜಿ.ಎಸ್‌.ರಜಪೂತ,  ಕೆಂಪಯ್ಯ ಪುರಾಣಿಕ, ಅಪ್ಪಾಸಾಬ ಮುಲ್ಲಾ, ಪ್ರಶಾಂತ ಅರಳಿಕಟ್ಟಿ, ಸಿ.ಆರ್‌.ಸಿ ರಂಗನಾಥ ಗುಡೇರ ಮುಖ್ಯೋಪಾಧ್ಯಾಯ ಎಂ.ಎಂ.ಕಳಸನ್ನವರ ಉಪಸ್ಥಿತರಿದ್ದರು. 


ಸುದ್ದಿ ಓದಿ