ಕಲೆಯನ್ನು ಪ್ರೋತ್ಸಾಹಿಸಲು ಚರ್ಮವಾದ್ಯ ತರಬೇತಿ: ಅರ್ಕಸಾಲಿ
ಶಿಗ್ಗಾವಿ 20: ಆಯಾ ಪ್ರಾದೇಶಿಕ ಕ್ಷೇತ್ರಗಳಿಗೆ ಅನುಗುಣವಾಗಿ ಅಲ್ಲಿರುವ ಕಲೆಯನ್ನು ಕಲಿಯದೇ ಇರುವ ಕಲಾವಿದರನ್ನು ಕ್ಷೇತ್ರವಾರು ಗುರುತಿಸಿ ಅವರಿಗೆ ತರಬೇತಿಯನ್ನು ನೀಡಿ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚರ್ಮವಾದ್ಯ ತರಬೇತಿಯನ್ನು ಆಯೋಜಿಸುತ್ತಿದ್ದೇವೆ ಎಂದು ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರ ಇವರ ನೇತೃತ್ವದಲ್ಲಿ ಡೊಳ್ಳುಕುಣಿತ, ಸಮಾಳವಾದನ, ಜೋಗತಿನೃತ್ಯ, ನಂದಿದ್ವಜಕುಣಿತ, ಹಲಗೆವಾದನಗಳ ಚರ್ಮವಾದ್ಯ ತರಬೇತಿ ಶಿಬಿರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ 35 ವರ್ಷದೊಳಗಿನ ಯುವ ಕಲಾವಿದರನ್ನು ಗುರುತಿಸಿ ಅವರಿಗೆ 5 ದಿನದ ತರಬೇತಿ ಕಾರ್ಯಾಗಾರವನ್ನು ನಡೆಸಿ ಅವರಿಂದ ವೇದಿಕೆ ಪ್ರದರ್ಶನ ಮಾಡಿಸಿ ನಂತರ ಅವರಿಗೆ ಗಣ್ಯಮಾನ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಜಾನಪದ ಅಕಾಡೆಮಿ ಅಧ್ಯಕ್ಷ ಮಾತಾ.ಬಿ.ಮಂಜಮ್ಮ ಜೋಗತಿಯವರ ನೇತೃತ್ವದಲ್ಲಿ ಕರ್ನಾಟಕದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿದ್ದು ಆ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಗೆ ಇದು 3 ನೇ ಕಾರ್ಯಕ್ರಮ ಹಾಗೂ ಹಾವೇರಿಗೆ ಪ್ರಥಮಬಾರಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ ನಮಗೆ 6 ಕರ ಪ್ರಕಾರ 60 ಶಿಬಿರಾರ್ಥಿಗಳಿಗೆ ನಾವು ತರಬೇತಿಯನ್ನು ಕೊಡಬೇಕು ಅಂದರೆ 1 ಕರದಲ್ಲಿ 10 ಶಿಬಿರಾರ್ಥಿಗಳು, ಒಬ್ಬರು ಗುರು, ಒಬ್ಬರು ಸಹಾಯಕರು ಇದ್ದು ಅವರಿಗೆ ತರಬೇತಿಯನ್ನು ನೀಡುತ್ತಾರೆ ಶಿಬಿರಾರ್ಥಿಗಳಿಗೆ 500 ಸಂಭಾವನೆ, ಪ್ರಯಾಣ ಭತ್ಯೆ ಮತ್ತು ಊಟ ವಸತಿ ವ್ಯವಸ್ಥೆ ಇರುತ್ತದೆ ಎಂದರು.ನಮಗೆ ಮನ:ಶಾಂತಿ ನೀಡುವ ಇಲಾಖೆ ಆದ್ದರಿಂದ ನಾನು ನಿಮೆಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.
ಅರವಿಂದ ಲಿಂಬಾವಳಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಹಾರುದ್ರಪ್ಪ ಇಟಗಿ ಮಾತನಾಡಿ ಕಲಿಯುಗದಲ್ಲಿ ಪೈಬರ ವಾದ್ಯಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದು ಆದ್ದರಿಂದ ಚರ್ಮ ವಾದ್ಯಗಳಿಗೆ ಮೊದಲಿಗೆ ಸಿಗುವ ಗೌರವ ಇಗೂ ಸಹಿತ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ ಎಂದರು.ಇದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಅರಮನೆಯಲ್ಲಿ ದಿನಾಂಕ 22 ರಿಂದ 26 ರವರೆಗೆ ಇದ್ದು ಹಾವೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಆಗಮಿಸುತ್ತಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಶಿಗ್ಗಾವಿ ಸ್ವಾಗತಿಸಿದರು, ಪುಟ್ಟರಾಜ ಕವಿಗವಾಯಿಗಳ ಸಂಘಧ ಅಧ್ಯಕ್ಷ ಪಕ್ಕಿರೇಶ ಕೊಂಡಾಯಿ, ಜಾನಪದ ವಿಶ್ವವಿದ್ಯಾಲಯದ ಸಹ ಪ್ರಾದ್ಯಾಪಕ ಶರೀಫ ಮಾಕ್ಕಪ್ಪನವರ ವಂದಿಸಿದರು.