ಜಮಖಂಡಿ

ಎಸಿ ಸಂತೋಷ ಕಾಮಗೌಡ ವರ್ಗಾವಣೆ: ಬೀಳ್ಕೊಡುಗೆ

ಎಸಿ ಸಂತೋಷ ಕಾಮಗೌಡ ವರ್ಗಾವಣೆ: ಬೀಳ್ಕೊಡುಗೆ

ಜಮಖಂಡಿ 16: ರೈತರ ಪರ, ಸಾರ್ವಜನಿಕರ ಪರವಾಗಿ ಉತ್ತಮ ಸೇವೆಯನ್ನು ಸಲಿಸುವ ಮೂಲಕ ಜನತೆಯ ಮನಸನ್ನು ಗೆಲಲ್ಲು ಸಾಧ್ಯ ಎಂದು ನೂತನ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. 

ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಜಿಲ್ಲಾಧಿಕಾರಿಯಾಗಿ ಯುಕೆಪಿ ಬಾಗಲಕೋಟ ಜಿಲ್ಲೆಗೆ ಸಂತೋಷ ಶಂಕರ ಕಾಮಗೌಡ ವರ್ಗಾವಣೆಗೊಂಡ ಪ್ರಯುಕ್ತ ಬೀಳ್ಕೋಡುವ ಸಮಾರಂಭ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿಯಾಗಿ ಅಧಿಕಾರಿಗಳಾಗಿ ಆಗಮಿಸಿದ ಶ್ವೇತಾ ಮೋಹನ ಬೀಡಿಕರ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಎಸಿ,ಸಂತೋಷ ಕಾಮಗೌಡ ಅವರು ಒಬ್ಬ ಹಿರಿಯ ಅಧಿಕಾರಿಯಾಗಿ ಸೇವೆಯನ್ನು ಸಲಿಸಿದರು. ಅವರ ಮಾರ್ಗದರ್ಶನದಲ್ಲಿ ನಾನು ಕೂಡ ನಡೆದುಕೊಳ್ಳುತ್ತೇನೆ. ಅವರು ಸಾರ್ವಜನಿಕರ ಸೇವೆಯನ್ನು ಸಲಿಸಿ. ಈ ಭಾಗದ ಜನತೆಯ ಮನವನ್ನು ಗೆದ್ದಿದ್ದಾರೆ. ಅವರ ಹಾಗೆ ಸೇವೆಯನ್ನು ಸಲಿಸುತ್ತೇನೆ. ಹಿರಿಯ ಅಧಿಕಾರಿಗಳ ಮಾರ್ಗ ಅತೀ ಅವಶ್ಯಕತೆ ಇರುತ್ತದೆ. ನಾನು ಎಸಿ,ಯಾಗಿ ಬಾಗಲಕೋಟ, ವಿಜಯಪೂರ ಜಿಲ್ಲೆಗೆ ಸೇವೆ ಸಲಿಸಿ. ಇವಾಗ ಜಮಖಂಡಿ ಉಪವಿಭಾಗಗಕ್ಕೆ ಬಂದಿದೆನೆ. ಇಲ್ಲಿನ ಅಧಿಕಾರಿಗಳು ಸಹಕಾರವನ್ನು ನೀಡುತ್ತಾರೆಂದು ನಂಬಿಕೆ ಇದೆ. ಈ ಭಾಗದ ರೈತರ,  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು. 

ಎಸಿ, ಸಂತೋಷ ಕಾಮಗೌಡ ಮಾತನಾಡಿ, ನಾನೂಬ್ಬ ರೈತ ಕುಟುಂಬದಿಂದ ಬಂದಿದ್ದೇನೆ. ಹೀಗಾಗಿ ರೈತರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೆ, 9 ಕಡೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ, ಎಲ್ಲ ಇಲಾಖೆ ವರ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡು. ನ್ಯಾಯಕ್ಕಾಗಿ ಬಂದ ಸಂತ್ರಸ್ತರಿಗೆ ಸಮಾನವಾಗಿ ನ್ಯಾಯ ನೀಡಿದೆನೇ.  ಜನರ ಹತ್ತಿರ ಹೋಗಿ ಕೆಲಸ ಮಾಡಬೇಕು ಅಂದಾಗ ಮಾತ್ರ ಜನರು ನಮ್ಮನ್ನು ನೆನಪಿಡುತ್ತಾರೆ. ಮನಸಾರೆ ಕೆಲಸ ಮಾಡಿದರೆ ದೇವರು ಒಳ್ಳೆಯ ಕೆಲಸ ಕೊಟ್ಟೆ ಕೊಡುತ್ತಾನೆ. ಸನ್ನಿವೇಶಕ್ಕೆ ತಕ್ಕಂತೆ ಸರಿಯಾಗಿ ಸಮಯ ಪ್ರಜ್ಞೆ, ನಿಷ್ಠೆಯಿಂದ ಕೆಲಸ ಮಾಡಬೇಕು. ನಾವು ಜನರಿಗೆ ಹೆಚ್ಚಿನ ಸೇವೆ ಮಾಡಿದರೆ ಅವರಿಗೆ ಸಮೀಪವಾಗುತ್ತೇವೆ. ರನ್ನ ಸಹಕಾರಿ ಕಾರ್ಖಾನೆ ಹಣಕಾಸಿನ ವ್ಯವಹಾರದ ಸಮಸ್ಯೆಯನೇ ಬಗೆಹರಿಸಿದ್ದು ಒಳ್ಳೆಯ ಕಾರ್ಯವಾಗಿದೆ.ಇಲಾಖೆಗಳು ಜನರ ಪರವಾಗಿ ಸಹಕಾರಿಯಾಗಿದೆ.ಸೌಹಾರ್ದಯುತ ಸಹಕಾರಬೇಕು ಎಂದರು.  

ಡಿಎಸ್ ಪಿ ಶಾಂತವೀರ ಈ. ಮಾತನಾಡಿ, ಶ್ವೇತಾ ಬೀಡಿಕರ ಅವರು ಜಿಲ್ಲೆಯಲ್ಲಿ ಒಳ್ಳೆಯ ಸೇವೆಯನ್ನು ಸಲ್ಲಿಸದ್ದಾರೆ. ಎಲ್ಲ ಅಧಿಕಾರಿಗಳು ಸಹಕಾರ ಅವರಿಗೆ ನೀಡಬೇಕು. ಸಂತೋಷ ಕಾಮಗೌಡ ಅವರು 40-50 ವರ್ಷಗಳ ಕಾಲದ ಸಮಸ್ಯೆಗಳನ್ನು ಉಪವಿಭಾಗ ಮಟ್ಟದಲ್ಲಿ ಅವರು, ನಾನು ಕೂಡಿಕೊಂಡು ಪರಿಹರಿಸುವ ಕಾರ್ಯನಿರ್ವಹಿಸಿದ್ದರು. ಬನಹಟ್ಟಿಯಲ್ಲಿ ಒಂದು, ಜಮಖಂಡಿಯಲ್ಲಿ ಎರಡು ಸಮಸ್ಯೆಗಳನ್ನು ಪರಿಹರಿಸಿದರು. ರೈತರ ಪ್ರತಿಭಟನೆಗಳಲ್ಲಿ ಮುಂದಾದವರನ್ನು ಹಿಂಪಡೆಯುವಂತೆ ಮನವರಿಕೆ ಮಾಡಿ ರೈತರಿಗೆ ಅನುಕೂಲ ಮಾಡುತ್ತಿದ್ದರು. ಮುಧೋಳ ಕೆರೆ ನೀರು ತುಂಬುವ ಕೆಲಸ ಮಾಡಿದರು. ಅಧಿಕಾರಿಗಳ ಜೊತೆಯಲ್ಲಿ ಸಹೋದರ ಹಾಗೆ ನಡೆದುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಕೆಲಸದ ಸಮಯದಲ್ಲಿ ಕಟ್ಟು ನಿಟ್ಟಿನ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರಿಯಾಗಿ ತಮ್ಮ ಆಡಳಿತ ಅವಧಿಯಲ್ಲಿ ಹೇಗೆ ಸಮಸ್ಯೆಗಳನ್ನು ನಿಭಾಯಿಸಬೇಕೆಂದು ಬಹಳ ತಿಳಿದುಕೊಂಡಿದ್ದರು ಎಂದರು. 

ವಿಶೇಷ ಭೂ ಸ್ವಾಧೀನ ಜಿಲ್ಲಾಧಿಕಾರಿ ಸಾಜೀಧ ಮುಲ್ಲಾ, ಬನಹಟ್ಟಿ,ರಬಕವಿ ತಹಶೀಲ್ದಾರ ವಿಜಯ ಕಡಕೋಳ, ಬೀಳಗಿ ತಹಶೀಲ್ದಾರ ಸುಹಾಸ ಇಂಗಳೆ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಮಾತನಾಡಿದರು. ತಾ.ಪಂ.ಸಂಜು ಜುನ್ನೂರ ವೇದಿಕೆಯಲ್ಲಿ ಉಪಸ್ಥಿತರಿದರು. ಎನ್‌.ವಿ. ಅಸ್ಕಿ ನಿರೂಪಿಸಿದರು. ಜಮಖಂಡಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. 


ಸುದ್ದಿ ಓದಿ