ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ರಾಣೆಬೆನ್ನೂರು 12: ತಾಲೂಕಿನ ಪ್ರಮುಖ ಪಟ್ಟಣವಾದ ವಾಣಿಜ್ಯ ನಗರದಲ್ಲಿರುವ ವಿವಿಧ ಶಾಲಾ ಕಾಲೇಜುಗಳಿಗೆ ನಿತ್ಯವೂ ವಿವಿಧ ಗ್ರಾಮೀಣ ಪ್ರದೇಶಗಳಿಂದ, ತಮ್ಮ ಶಿಕ್ಷಣ ಅಧ್ಯಯನಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಧಾವಿಸುತ್ತಾರೆ. ಆದರೆ ಸರಿಯಾದ ವೇಳೆಗೆ ಸಮರ್ಕವಾದ ಬಸ್ಸು ಸೇವೆ ಇಲ್ಲದೇ, ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಕೂಡಲೇ ಎಲ್ಲಾ ಗ್ರಾಮಾಂತರ ಪ್ರದೇಶಗಳಿಂದ ಸಮರ್ಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಣೆಬೆನ್ನೂರು ಶಾಖೆಯು ಆಗ್ರಹಿಸಿದೆ. ಸೋಮವಾರ ಈ ಕುರಿತು ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ಸ್ಟ್ಯಾಂಡ್ ಬಳಿ ಭಾರಿ ಪ್ರತಿಭಟನೆ ನಡೆಸಿ, ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ಮುಂಚೂಣಿಯಲ್ಲಿ ಜಿಲ್ಲಾ ಸಹ ಸಂಚಾಲಕ ನಾಗರಾಜ್ ಮುದ್ದಪ್ಪಳವರ, ಪವನ್ ತೋಟದ್, ಯಶವಂತ್ ಓಲೆಕಾರ್, ಸಂತೋಷ್ ಬಜರೆಡ್ಡಿ,ಶಶಾಂಕ್, ಸೇರಿದಂತೆ ಎಬಿವಿಪಿ ಮುಖಂಡರು, ಕಾರ್ಯಕರ್ತರು, ಪಾಲ್ಗೊಂಡಿದ್ದರು