ಉಡುಪಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಘಟನೆ ಖಂಡಿಸಿದ ಎಬಿವಿಪಿ
ರಾಣೇಬೆನ್ನೂರು ಜು 27 ಉಡುಪಿ ಕಾಲೇಜಿನಲ್ಲಿ ನಡೆದಿರುವ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣದ ಘಟನೆಯನ್ನು ಬಲವಾಗಿ ಖಂಡಿಸಿರುವ ಎಬಿವಿಪಿ ಕಾರ್ಯಕರ್ತರು ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಗುರುವಾರ ಮುಂಜಾನೆ ತಾಲೂಕ ಆಡಳಿತದ ಎದುರುಗಡೆ ಜಮಾವಣೆಗೊಂಡ ವಿದ್ಯಾರ್ಥಿ ಪರಿಷತ್ ಘಟಕದ ವಿದ್ಯಾರ್ಥಿಗಳು ಮತ್ತು ಮುಖಂಡರು, ಘಟನೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಕಾರ್ಯದರ್ಶಿ ಸಚಿನ್ ಮಾಗನೂರ್ ಅವರು, ನಡೆದಿರುವ ಘಟನೆ ಹೇಯ ಕೃತ್ಯವಾಗಿದ್ದು, ನಾಗರಿಕ ಸಮುದಾಯ ತಲೆತಗ್ಗಿಸುವಂತಿದೆ. ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಸಂಬಂಧಿಸಿದ ಯಾರೇ ಆಗಿರಲಿ ಎಂತಹ ಪ್ರಭಾವಿಗಳೇ ಆಗಿರಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕು ಅವರನ್ನು ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಓಕ್ಕೊರಲ ಆಗ್ರಹಿಸಿದರು. ಕಾಲೇಜಿಗೆ ಬರುವುದು ಅಧ್ಯಯನ ಮಾಡಲು ಹೊರತು ಇಂತಹ ಅಮಾನವೀಯ ಘಟನೆಗಳನ್ನು ಮಾಡಲು ಅಲ್ಲ ಎನ್ನುವ ಸಾಮಾನ್ಯ ವಿಷಯವನ್ನು ಅರಿಯದ ಈ ಮುಸ್ಲಿಂ ಯುವತಿಯರು, ತಾವು ಸಹ ಹೆಣ್ಣು ಕುಲ ಎನ್ನುವುದನ್ನು ಮರೆತಿರುವುದು ಅತ್ಯಂತ ದುರದೃಷ್ಟಕರ ಇಂಥವರಿಗೆ ತಕ್ಕ ಶಾಸ್ತ್ರಿ ಆಗಬೇಕು ಎಂದು ಆಗ್ರಹಿಸಿದರು.
ನಡೆದಿರುವ ಘಟನೆಯ ಹಿಂದೆ ಲವ್ ಜಿಹಾದಿಗಳ ಕೈವಾಡವಿದ್ದು, ಲವ್ ಜಿಹಾದ್ ನಂತರ ಕರಾಳ ಕೂ ಪಕ್ಕೆ ತಳ್ಳುವ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡುವ ಕುಹಕಿಗಳು, ಇದರ ಹಿಂದೆ ಇರುವುದು ಸ್ಪಷ್ಟವಿದೆ ಕೂಡಲೇ ತನಿಖೆ ಮಾಡಿ ಕ್ರಮ ಕೈಗೊಂಡು, ಶಿಕ್ಷೆಗೆ ಒಳಪಡಿಸಬೇಕು ಎಂದು ಸಚಿನ್ ಆಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಆಕಾಶ್ ಹುಲ್ಲತ್ತಿ, ಅಜಯ್ ಬ್ಯಾಡಗಿ, ನಾಗರಾಜ.ಎಮ್ ಸೇರಿದಂತೆ ಅನೇಕ ಕಾರ್ಯಕರ್ತರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.