ಶಿಗ್ಗಾವ್

ಇಂದು ಶರಣು ಶರಣಾರ್ಥಿ ಅಭಿನಂಧನಾ ಸಮಾರಂಭ

ಇಂದು ಶರಣು ಶರಣಾರ್ಥಿ ಅಭಿನಂಧನಾ ಸಮಾರಂಭ

 ಶಿಗ್ಗಾವಿ28:  ಕೂಡಲ ಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕೂಡಲದಿಂದ ಬೆಂಗಳೂರವರೆಗೆ ಪಾದಯಾತ್ರೆ ನಡೆಸಿರುವ ಸಮಾವೇಶ ಯಶಸ್ವಿ ಹಿನ್ನೆಲೆ ಮಾ.29ರಂದು ಶರಣು ಶರಣಾರ್ಥಿ ಅಭಿನಂಧನಾ ಸಮಾರಂಭ ಹಮ್ಮಿಕೊಂಡಿದೆ ಎಂದು ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರ ಹೇಳಿದರು.ಪಟ್ಟಣದಲ್ಲಿ  ನಡೆದ ಶರಣು ಶರಣಾರ್ಥಿ ಅಭಿನಂಧನಾ ಸಮಾರಂಭ, ಮುಗಳಿ ಗ್ರಾಮದಲ್ಲಿ ಯುವ ಪಂಚಮಸಾಲಿ ಘಟಕ ಸ್ಥಾಪನೆ, ಕೆಎಲ್‍ಇ ಸಂಸ್ಥೆ ಸಂಸ್ಥಾಪಕ ಅರಟಾಳದ ರುದ್ರಗೌಡ್ರ ಹೆಸರಿನ ಮಹಾದ್ವಾರ ನಿರ್ಮಾಣಕ್ಕೆ  ಭೂಮಿ ಪೂಜೆ ಕಾರ್ಯಕ್ರಮದ  ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂಚಸಾಲಿ ಜನಾಂಗ ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದು, ಆದರೆ ಈವರೆಗೆ ಸರ್ಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ಸಮಾಜದ ಕುಡುಬಡವರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಪಂಚಮಸಾಲಿ ಪೀಠದ ಕೂಡಲ ಮತ್ತು ಹರಿಹರದ ಸ್ವಾಮೀಜಿಗಳು ಪಾದಯಾತ್ರೆ ನಡೆಸಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅದರಿಂದ ಸಮಾಜದ ಜನತೆಗೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದರು.ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಹಕಾರ ನೀಡಿರುವ ಸಮಾಜದ ಜನತೆಗೆ ಅಭಿನಂದನೆ ಸಲ್ಲಿಸುವುದು ಮುಖ್ಯವಾಗಿದ್ದು, ಅದರೊಂದಿಗೆ ಪಂಚಮಸಾಲಿ ಸಮಾಜದ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಗಂಗೆಭಾವಿಗೆ ಹೋಗುವ ವೃತ್ತದಲ್ಲಿ ಅರಟಾಳ ರುದ್ರಗೌಡ್ರ ಮಹಾದ್ವಾರ ನಿರ್ಮಾಣ ಮಾಡಲು ಮುಂದಾಗಿದೆ. ರುದ್ರಗೌಡ್ರ ಶಿಕ್ಷಣಕ್ಕೆ ಕೂಟ್ಟಿರುವ ಕುಡುಗೆ ಅಪಾರವಾಗಿದ್ದು, ಅವರ ಸ್ಮರಣೆ ಸಹ ಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ರುದ್ರಗೌಡ್ರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದ ಅವರು ಈ ಸಮಾರಂಭಕ್ಕೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಕಾರ್ಯದರ್ಶಿ ಎಚ್.ಎಸ್.ಶಿವಶಂಕರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ರಾಜ್ಯದ ಅನೇಕ ಮುಖಂಡರು ಅಗಮಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮುಖಂಡ ಶ್ರೀಕಾಂತ ಪೂಜಾರ, ನಂದೀಶ ಯಲಿಗಾರ, ಬಸಲಿಂಗಪ್ಪ ನರಗುಂದ, ಟಾಕನಗೌಡ್ರ ಪಾಟೀಲ, ಮಂಜುನಾಥ ವಳಗೇರಿ, ವಿಜಯ ಬುಳ್ಳಕ್ಕನವರ, ಬಸವರಾಜ ಗೊಬ್ಬಿ, ಗೊಳಪ್ಪ ಅರಳಿಕಟ್ಟಿ, ಶಂಭಣ್ಣ ಕತ್ತಿ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ