ನೀರಿನಲ್ಲಿ ಮುಳುಗುತ್ತಿದ್ದ ವ್ಯಾಪಾರಿಯನ್ನು ರಕ್ಷಿಸಿದ ಯುವಕ
ಘಟಪ್ರಭಾ: ಅರಿಷಿಣ ಖರೀದಿಸಲು ನಗರಕ್ಕೆ ಬಂದಿದ್ದ ವ್ಯಾಪಾರಿಗಳ ಕಾರೊಂದು ಇಕ್ಕಟ್ಟಾದ ರಸ್ತೆಯಲ್ಲಿ ಆಯತಪ್ಪಿ ಘಟಪ್ರಭಾ ಎಡದಂಡೆ ಕಾಲುವೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ವ್ಯಾಪಾರಿಯನ್ನು ಪಾಮಲದಿನ್ನಿ ಗ್ರಾಮದ ಯುವಕನೋರ್ವ ರಕ್ಷಿಸಿದ ಘಟನೆ ಬುಧವಾರ ಸಂಜೆ ಜರುಗಿದೆ.
ನಗರಕ್ಕೆ ಅರಿಷಿಣ ಖರೀದಿಸುವ ಉದ್ದೇಶದಿಂದ ಬಂದಿದ್ದ ಬನಹಟ್ಟಿಯ ರಾಮಪುರಿನ ವ್ಯಾಪಾರಿಗಳಾದ ಖಲೀಲ್ ರಾಜಣ್ಣವರ ಮತ್ತು ಮಲೀಕ ಮುಲ್ಲಾ ಅವರು ತಮ್ಮ ಟಾಟಾ ಕಂಪೆನಿಯ ನೆಕ್ಸಾನ್ ಕಾರಿನಲ್ಲಿ ಘಟಪ್ರಭಾ ಹಾಗೂ ಮಲ್ಲಾಪೂರದ ವಾಹನ ದಟ್ಟಣೆ ತಪ್ಪಿಸಲು ಘಟಪ್ರಭಾ ಎಡದಂಡೆ ಕಾಲುವೆ ಮೇಲೆ ಹೊಸದಾಗಿ ನಿರ್ಮಿಸಿರುವ ಬೈಪಾಸ್ರಸ್ತೆಯ ಮುಖಾಂತರ ಸಾಗುತ್ತಿರುವಾಗ ಮಲ್ಲಾಪುರ ಪಿ.ಜಿಸೇತುವೆ ಹತ್ತಿರ ದುರದುಂಡಿ-ಮಲ್ಲಾಪೂರದ ಹಾಗೂ ಬೈಪಾಸ್ ರಸ್ತೆ ಮೇಲೆ (ಕ್ರಾಸ್ ಆಗುವ) ಸ್ಥಳದಲ್ಲಿ ರಸ್ತೆ ತಗ್ಗಾಗಿದ್ದು, ಇಕ್ಕಟ್ಟಾದ ಬೈಪಾಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿದೆ.
ಆ ಸಮಯದಲ್ಲಿ ಧೈರ್ಯ ತೋರಿದ ವ್ಯಾಪಾರಿಗಳಿಬ್ಬರು ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ ಅದರಲ್ಲಿ ಈಜುಕಲಿತಿದ್ದ ಮಲೀಕ ಮುಲ್ಲಾ ಈಜಿ ದಡ ಸೇರಿದಾನೆ. ಮತ್ತೋರ್ವ ಕಾರಿನಿಂದ ಹೊರ ಬಂದರೂ ಈಜು ಬಾರದ ಖಲೀಲ್ ರಾಜಣ್ಣವರ ನೀರಿನಲ್ಲಿ ಮುಳುಗುತಿದ್ದಾಗ ಅದೆದಾರಿಯಲ್ಲಿ ಸಾಗುತ್ತಿದ್ದ ಪಾಮಲದಿನ್ನಿ ಗ್ರಾಮದ ಯುವಕ ಚೇತನ ವಿಠ್ಠಲ ಒಡೆಯರ ದೇವರಾಗಿ ಬಂದು ನೀರಿನಲ್ಲಿ ಮುಳುಗುತಿದ್ದ ಖಲೀಲ್ ರಾಜಣ್ಣವರ ಅವರನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ನೀರಿಗೆದು ಮುಕಿ ಖಲೀಲನನ್ನು ಕಾಪಾಡಿ ಸಾಹಸ ಮೆರೆದಿದ್ದಾನೆ.
ತಮ್ಮ ಪ್ರಾಣದ ಹಂಗು ತೊರೆದು ವ್ಯಾಪಾರಿಯ ಪ್ರಾಣ ರಕ್ಷಿಸಿದ ಯುವಕಚೇತನಒಡೆಯರ ಇವನ ಸಾಹಸಕ್ಕೆ ಸಾರ್ವಜನಿಕರ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.