ರೈತ ಸಮೂಹಕ್ಕೆ ಸಂದ ಜಯ: ವರುಣಗೌಡ ಪಾಟೀಲ
ಲೋಕದರ್ಶನ ವರದಿ
ಶಿಗ್ಗಾವಿ 20: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕ್ರಷಿ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿದ್ದು ಇದರಿಂದ ರೈತರಿಗೆ ತುಂಬಾ ತೊಂದರೆಯಾಗಲಿದ್ದು ಕಾರ್ೂರೇಟ್ ವಲಯಕ್ಕೆ ಈ ಕಾಯ್ದೆಗಳು ಅನೂಕೂಲ ಮಾಡಿಕೊಡುವಂತವುಗಳಾಗಿದ್ದು ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಉಗ್ರವಾದ ಪ್ರತಿಭಟನೆ ಮಾಡಿ ಚಳಿ ಮಳೆ ಗಾಳಿಯನ್ನು ಲೆಕ್ಕಿಸದೆ ನಿರಂತರ ಹೋರಾಟ ಮಾಡಿದ ಫಲವಾಗಿ ಇಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮೂರು ರೈತವಿರೋಧಿ ಕಾನೂನುಗಳನ್ನು ರದ್ದುಗೊಳಿಸಿದ್ದಾರೆ ಇದು ರೈತ ಸಮೂಹಕ್ಕೆ ಸಂದ ಜಯ ಎಂದು ರೈತಸೇನಾ ಕರ್ನಾಟಕ(ರಿ) ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಯ ಗಡಿಭಾಗದಲ್ಲಿ ದೇಶದ ರೈತಸಮೂಹ ಸುಮಾರು ಒಂದು ವರ್ಷದಿಂದ ಹೋರಾಟ ಮಾಡಿ ರೈತ ವಿರೋಧಿ ಕಾನೂನಗಳನ್ನು ರದ್ದುಗೊಳಿಸಿದ್ದಾರೆ ಈ ಹೋರಾಟದಲ್ಲಿ ಅನೇಕ ರೈತರು ವೀರ ಮರಣ ಹೊಂದಿದರು ಆ ಎಲ್ಲ ರೈತರಿಗೆ ರೈತಸೇನಾ ಕರ್ನಾಟಕ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಕೊರುತ್ತೇವೆ ಮತ್ತು ಆ ಹೋರಾಟದಲ್ಲಿ ಮರಣ ಹೊಂದಿದ ಎಲ್ಲ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕೆಂದು ಶ್ರೀ ವರುಣಗೌಡ ಪಾಟೀಲ ಅವರು ಸರ್ಕಾರಕ್ಕೆ ಒತ್ತಾಯಿಸಿದರು.