ಬೈಲಹೊಂಗಲ

ವೀರಕೇಸರಿ ಅಮಟೂರ ಬಾಳಪ್ಪ ಅವರ ಸ್ಮಾರಕಕ್ಕೆ ಗೌರವ

ವೀರಕೇಸರಿ ಅಮಟೂರ ಬಾಳಪ್ಪ ಅವರ ಸ್ಮಾರಕಕ್ಕೆ ಗೌರವ

ಬೈಲಹೊಂಗಲ 18: 74 ನೇಯ ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಅಮಟೂರ ಗ್ರಾಮದಲ್ಲಿ ಹಾಲಿ ಹಾಗೂ ಮಾಜಿ ಸೈನಿಕರು ಸ್ವಾತಂತ್ರ್ಯ ಹೋರಾಟಗಾರ ವೀರಕೇಸರಿ  ಅಮಟೂರ ಬಾಳಪ್ಪ ಅವರ ಸ್ಮಾರಕಕ್ಕೆ ಗೌರವ ಸಮರ​‍್ಿಸುವ ಮೂಲಕ ಆಚರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೀರಕೇಸರಿ ಬಾಳಪ್ಪ ಟ್ರಸ್ಟ ಕಮೀಟಿ ಅಧ್ಯಕ್ಷ ಸೋಮನಗೌಡ ಪಾಟೀಲ ಲೆಪ್ಟಿನಂಟ ಜನರಲ್ ಕರಿಯಪ್ಪ ಅವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಸೇನಾ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದ, ಸೈನಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು. ಕರಿಯಪ್ಪ ಅವರ ಜೀವನ ಸೈನಿಕರಿಗೆ ಮಾದರಿಯಾಗಿದೆ ಎಂದರು.  

ಶಿವಾನಂದ ಮುನೇಶ್ವರಮಠ ಅವರು ಲೇಪ್ಟಿನಂಟ ಜನರಲ್ ಕರಿಯಪ್ಪ ಅವರ ಬಗ್ಗೆ ಮತ್ತು ಭಾರತೀಯ ಸೈನಿಕರ ಮಾತನಾಡಿದರು.  ಬಸವರಾಜ ಸಂಗಪ್ಪನವರ,  ಶಂಕರಗೌಡ ಪಾಟೀಲ, ನಾಗರಾಜ ಗೆಜಪತಿ, ಈರಣ್ಣ ಬೆಳಗಾವಿ, ಶಿವಾಜಿ ಸೋಗಿಮನಿ, ಬೊಮ್ಮಣ್ಣ ಬಾಂವಿ, ಮಂಜು ಬಾಗೆವಾಡಿ, ಶಿವಶಂಕರ ಮುದಕಂವಿ, ಬಸವರಾಜ ಬೆಳಗಾವಿ ಇದ್ದರು. 


ಸುದ್ದಿ ಓದಿ