ಕೊಳೆತ ಹಾಗೂ ಹುಳುಗಳು ಇರುವ ಮಾವಿನ ಹಣ್ಣುಗಳನ್ನು ಮಾರುಕಟ್ಟೆಗೆ ತಂದು ಮಾರುವಾಗ ಪೊಲೀಸರ ಕೈಯಲ್ಲಿ ಸಿಗಿಬಿದ್ದ ವ್ಯಾಪಾರಿ
ಮುದ್ದೇಬಿಹಾಳ 26: ಬೇಸಿಗೆ ಹಂಗಾಮಿ ಮುಗಿದು ಇನ್ನೇನು ಮಳೆಗಾಲ ಆರಂಭವಿನಲ್ಲಿ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿರುವ ಬೆನ್ನಲ್ಲೇ ಕೆಲವು ವ್ಯಾಪಾರಿಗಳು ಕೊಳೆತ ಹಾಗೂ ಹುಳುಗಳು ಇರುವ ಗುಣಮಟ್ಟ ಕಳೆದುಕೊಂಡ ಮಾವಿನ ಹಣ್ಣುಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಗ್ರಾಹಕರ ಕೈಯಲ್ಲಿ ಸಿಗಿಬಿದ್ದು ವ್ಯಾಪಾರಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ ಬಸವೇಶ್ವರ ವೃತ್ತ, ಬಜಾರ ರಸ್ತೆ, ಬಸ್ ನಿಲ್ದಾಣ ಎದುರುಗಡೆ ಕೆಲವು ಕಡೆ ಮಾವಿನ ಹಣ್ಣು ಮಾರಾಟಗಾರರು ಮಾರುಕಟ್ಟೆಯಲ್ಲಿ ಹುಳುಬಿದ್ದ ಹಾಗೂ ಹಾಳಾಗಿರುವ ಮಾವಿನ ಹಣ್ಣುಗಳ ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸುವುದಲ್ಲದೇ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಅದರಂತೆ ಬಸವೇಶ್ವರ ವೃತ್ತದಲ್ಲಿ ಮಾರಾಟಗಾರರೊಬ್ಬರು 100 ರೂ ಗೆ ಎರಡು ಕೆಜಿ ಯಂತೆ ಮಾವಿನ ಹಣ್ಣು ಮಾರಿದ್ದರು.
ಮನೆಗೆ ಹೋಗಿ ಈ ಮಾವಿನ ಹಣ್ಣು ಕಟ್ ಮಾಡಿ ತಿನ್ನುವಾಗ ಎಲ್ಲಾ ಹಣ್ಣುಗಳಲ್ಲಿ ಹುಳುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದಲ್ಲದೇ ವ್ಯಾಪಾರಿ ಮಾರಾಟ ಮಾಡುತ್ತಿರುವ ಸುಮಾರು 40 ರಿಂದ 50 ಕೆಜಿಗಳಲ್ಲಿ ಹುಳು ಹಾಗೂ ಕೊಳೆತ ಸ್ಥಿತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡುಬಂದಿತು.*ವ್ಯಾಪಾರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಗ್ರಾಹಕರು*ಇನ್ನು ಎಲ್ಲಾ ಮಾವಿನ ಹಣ್ಣುಗಳಲ್ಲಿ ಹುಳು ಇರುವುದು ಕಂಡ ತಕ್ಷಣ ಸುತ್ತಮುತ್ತಲಿನ ಗ್ರಾಹಕರು ನೆರೆದು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು, ಗ್ರಾಹಕರಿಗೆ ನೀವು ಮೋಸ ಮಾಡಿದ್ರೆ ಹೇಗೆ ನಿಮ್ಮನ್ನು ಯಾರು ಪ್ರಶ್ನೆ ಮಾಡುವವರು ಇಲ್ಲವೆಂದು ಹೀಗೆ ಮಾಡ್ತಿದ್ದೀರಾ ಹೇಗೆ ಎಂದೇಳಿ ನಂತರ ಪೊಲೀಸ್ ಇಲಾಖೆಗೆ ಪೋನ್ ಮಾಡಿ ವ್ಯಾಪಾರಿಯನ್ನು ಪೊಲೀಸರ ಕೈಗೆ ಗ್ರಾಹಕರು ಒಪ್ಪಿಸಲಾಯಿತು. ಈ ವೇಳೆ ವ್ಯಾಪಾರಿ ನಾನು ಮಾವಿನ ಹಣ್ಣು ನಾಲತವಾಡ ಮೂಲದ ರಮೇಶ್ ಅವರ ಹತ್ತಿರ ಮಾವು ಕೊಂಡುಕೊಂಡಿದ್ದೇನೆ ನನ್ನದು ಯಾವುದೇ ತಪ್ಪಿಲ್ಲ ಎಂದು ಪೋಲೀಸರಿಗೆ ಉತ್ತರಿಸಿದರು.