4 ಆತ್ಮಹತ್ಯೆ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಕೋರಿ ಪ್ರತಿಭಟನಾ ಕಾರ್ಯಕ್ರಮ

4 ಆತ್ಮಹತ್ಯೆ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಕೋರಿ ಪ್ರತಿಭಟನಾ ಕಾರ್ಯಕ್ರಮ

ಬಳ್ಳಾರಿ 17:ಆತ್ಮಹತ್ಯೆ ಮಾಡಿಕೊಂಡ ದಲಿತ ಹಾಗೂ ಕೂಲಿಕಾರ ಮಹಿಳೆ ಹಾಲಮ್ಮನ ಕುಟುಂಬಕ್ಕೆ 10 ಲಕ್ಷ ಪರಿಹಾರ ಒದಗಿಸುವಂತೆ ಡಿ.ಹೆಚ್.ಎಸ್ ಒತ್ತಾಯ ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕಿನ ಚಿಕ್ಕ ಕೆರೆಯಸಗಿನ ಹಳ್ಳಿಯಲ್ಲಿ ಎರಡು ತುಂಬುವಷ್ಠರಲ್ಲಿ ಮೂರನೆ ಆತ್ಮಹತ್ಯೆಯ ಧಾರುಣ ಘಟನೆ ಸಂಭವಿಸಿದೆ. ಈ ಭಾರಿ ಆತ್ಮಹತ್ಯೆಗೆ ಶರಣಾದವರು ದಲಿತ ಹಾಗೂ ಕೂಲಿಕಾರ ಮಹಿಳೆ ಶ್ರೀಮತಿ ಹಾಲಮ್ಮ.( ವಯಸ್ಸು 45 ವರ್ಷ) ಇವರು ಸಾಲದಬಾಧೆ, ಕುಟುಂಬದ ಜೀವನ ನಿರ್ವಹಣೆಯ ತೊಂದರೆ ಹಾಗೂ ತಮ್ಮಹೃದಯ ಸಂಬಂಧಿ ಖಾಯಿಲೆಗೆ ಅಗತ್ಯ ಹಣ ದೊರೆಯದೇ ಜೀವನದಲ್ಲಿ ಜಿಗುಪ್ಸೆ ಹೊಂದಿ 11.12.2018 ರಂದು ಮದ್ಯಾಹ್ನ 1.00 ಗಂಟೆಗೆ ಸಮೀಪದ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರ ಗಂಡನಾದ ದಿ. ಕಲ್ಲಪ್ಪನು ಸುಮಾರು 06 ತಿಂಗಳ ಕೆಳಗೆ ಜ್ವರ ಪೀಡಿತನಾಗಿ ವೈದ್ಯರಿರುವೆಡೆ ತೆರಳಲು ಹಣವಿಲ್ಲದೆ ಮತ್ತು ಹೆಂಡತಿಯ ಅನಾರೋಗ್ಯಕ್ಕೆ ಹಣ ಜೋಡಿಸಲಾಗದೇ, ಹೊಟ್ಟೆಪಾಡು ಕಷ್ಠವಾಗಿ ಮರಣ ಹೊಂದಿದ್ದಾನೆ. ಇದೀಗ ಅಂತಹದ್ದೇ ಕಾರಣಕ್ಕೆ ಹೆಂಡತಿಯು ಬಲಿಯಾಗಿದ್ದಾಳೆ. ಮೂವ್ವರು ಚಿಕ್ಕಮಕ್ಕಳನ್ನು ಇವರು ಅಗಲಿದ್ದಾರೆ. ಇದುವರೆಗೆ ಯಾವುದೇ ಶಾಸಕರು ಮತ್ತಿತರೆ ರಾಜಕೀಯ ಪ್ರತಿ ನಿಧಿಗಳು ಈ ಕುಟುಂಬದ ಸಂತೈಸಲು ಬಂದಿಲ್ಲವೆಂದು ದಲಿತ ಬಂಧುಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ದಲಿತ ಹಕ್ಕುಗಳ ಸಮಿತಿ - ಕನರ್ಾಟಕ ರಾಜ್ಯ ಸಮಿತಿ ಉನ್ನತ ಮಟ್ಟದ ನಿಯೋಗ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬವನ್ನು ಮತ್ತು ದಲಿತ ಬಂದುಗಳನ್ನು ಸಂತೈಸಿ ಧೈರ್ಯ       ಹೇಳಿದ್ದಾರೆ. ಆ ಕುಟುಂಬದ ದುಸ್ಥಿತಿಯನ್ನು ಆಲಿಸಿ ನಿಯೋಗದಲ್ಲಿ ಯು.ಬಸವರಾಜ ರಾಜ್ಯ ಸಹ ಸಂಚಾಲಕರು, ಬಿ.ಮಾಳಮ್ಮ ರಾಜ್ಯ ಸಹಸಂಚಾಲಕರು ಯು.ತಿಪ್ಪೇಸ್ವಾಮಿ, ಸಂಚಾಲಕರು ಕನರ್ಾಟಕ ಪ್ರಾಂತ ರೈತ ಸಂಘ ದುರುಗಮ್ಮ ತಾಲೂಕು ಸಂಚಾಲಕರು ಕನರ್ಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಇವರು ಸಾತ್ವನ ಹೇಳಿದರು. 

ಹಾಲಮ್ಮಳು ಕಳೆದ ಮೂರು- ನಾಲ್ಕು ವರ್ಷದಿಂದ ಹೃದಯ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದು ಅವರ ಆರೋಗ್ಯ ಸರಿಪಡಿಸಲು ಕಡುಬಡತನದಲ್ಲಿ ಬಳಲುವ ಪರಿಶಿಷ್ಠ ಜಾತಿಯ ಮಾದಾರ ಸಮುದಾಯಕ್ಕೆ ಸೇರಿದ ಈ ಕುಟುಂಬ ಮಣಿಪಾಲ್ ಮತ್ತು ಬೆಂಗಳೂರನ್ನು ಸುತ್ತಿದೆ. ಇದಕ್ಕಾಗಿ ಎರಡು ಲಕ್ಷ ರೂಗಳ ಖಾಸಗೀ ಸಾಲ ಮತ್ತು ಸ್ರೀ ಶಕ್ತಿ ಸಂಘಗಳಲ್ಲಿ ಸಾಲ ಮಾಡಿದೆ. ಬಡ್ಡಿ, ಚಕ್ರಬಡ್ಡಿ ಸೇರಿ ಅದೀಗ 4 ಲಕ್ಷ ರೂಗಳಾಗಿದೆ. 

ವ್ಯವಸಾಯದ ಕೂಲಿ ಕೆಲಸವನ್ನೇ ಜೀವನಾಧಾರವಾಗಿ ಹೊಂದಿದ್ದ ಈ ಕುಟುಂಬ ನಿರಂತರವಾಗಿ ಬಾಧಿಸಿದ ಬರಗಾಲಗಳಿಂದ ಹೊಟ್ಟೆ ಪಾಡಿಗಾಗಿ ತೀವ್ರವಾಗಿ ಪರದಾಡಿದೆ. 8 ನೇ ತರಗತಿ ಓದುತ್ತಿದ್ದ ಮಗಳಾದ ಅಕ್ಕೀರಮ್ಮ (15 ವರ್ಷ) ಳನ್ನು ಶಾಲೆ ಬಿಡಿಸಿ ಕೂಲಿಗೆಲಸಕ್ಕೆ ಹಚ್ಚಲಾಗಿದೆ. ಇದೀಗ ತಂದೆ ತಾಯಿಯನ್ನು ಕಳೆದುಕೊಂಡ ಇವಳು ತನ್ನ ಅಣ್ಣ ದುರುಗಪ್ಪ 19 ವರುಷ ಮತ್ತು ತಮ್ಮ ನಾಗರಾಜ (10 ವರುಷ ) ರಿಗೆ ಅಡುಗೆ ಮಾಡುವ ಮತ್ತಿತರೆ ಮನೆಗೆಲಸ ಮಾಡಿಕೊಂಡಿರುವಂತಾಗಿದೆ. ಬರಗಾಲದಿಂದ ಕೇವಲ ಒಂದೆರಡು ತಿಂಗಳ ಇಟ್ಟಂಗಿ ಬಟ್ಟಿಯ ಕೂಲಿಕೆಲಸವೇ ಇವರಿಗೆ ಆಧಾರವಾಗಿತ್ತು ಅದು ಈ ಕುಟುಂಬಕ್ಕೆ ಬಹುತೇಕ ವರ್ಷಕ್ಕೆ ಎರಡು ಸಾವಿರ ರೂ ಆದಾಯವನ್ನು ಒದಗಿಸುತ್ತಿರಲಿಲ್ಲ ಐದು ಜನರಿರುವ ಈಕುಟುಂಬದ ಪ್ರತಿ ದಿನದ ಆದಾಯ. ಸರಾಸರಿ 65 ರೂಗಳು ಮಾತ್ರವೇ ಆಗಿತ್ತು. ಆಶ್ರಯ ಯೋಜನೆಯ ಮನೆಯನ್ನು ಪೂರ್ಣ ಗೋಳಿಸಲು ಹಾಲಮ್ಮ ಪರದಾಡಿ ಅದಕ್ಕೂ ಸಾಲ ಮಾಡಿದ್ದಾಳೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಳೆದ 70 ವರ್ಷಗಳ ದಲಿತರ ಅಭಿವೃದ್ದಿ ಮಾಡಿದ್ದೇವೆಂಬುದನ್ನು ಈ ಕುಟುಂಬದ ದುಸ್ಥಿತಿ ಅದನ್ನು ತೀವ್ರ ರೀತಿಯಲ್ಲಿ ಅಣಕಿಸಿದಂತಿದೆ. ಈ ಸರಕಾರಗಳ ದಲಿತ ಅಭಿವೃದ್ಧಿಯ ಟೊಳ್ಳುತನವನ್ನು ಬಯಲಿಗೆಳೆದಿದೆ. ತಕ್ಷಣವೇ ರಾಜ್ಯ ಸರಕಾರ ಬಾದಿತ ಕುಟುಂಬಕ್ಕೆ 10 ಲಕ್ಷ ರೂಗಳ ಪರಿಹಾರ ನೀಡಬೇಕು. ಆ ಕುಟುಂಬದ ಎಲ್ಲ ಸಾಲವನ್ನು  ಸರಕಾರ ವಹಿಸಿಕೊಳ್ಳ ಬೇಕು. ಮಕ್ಕಳಾದ ಅಕ್ಕೀರಮ್ಮ ಹಾಗೂ ನಾಗರಾಜ ಇವರು ವಿದ್ಯಭ್ಯಾಸ ಮುಂದುವರೆಸಲು ಅವರನ್ನು ರೆಡಸಿಡೆನ್ಷಿಯಲ್ ಶಾಲೆಗಳಿಗೆ ಸೇರಿಸಿ ಅವರ ವಿದ್ಯಭ್ಯಾಸಕ್ಕೆ ಅಗತ್ಯ ನೆರವು ನೀಡಬೇಕು. ದೊಡ್ಡ ಮಗನಿಗೆ ವ್ಯವಸಾಯದಲ್ಲಿ ತೊಡಗಲು ಐದು ಎಕರೆ ಜಮೀನ್ನು ಕೊಡಬೇಕು. ಕನಿಷ್ಠ ಒಂದು ವರ್ಷಕ್ಕೆ ಪೂರ್ಣ ಪ್ರಮಾಣದ ಆಹಾರದ ರೇಷನ್ ಒದಗಿಸ ಬೇಕು. ಎಂದು ದಲಿತ ಹಕ್ಕುಗಳ ರಾಜ್ಯ ಸಮಿತಿ ಒತ್ತಾಯಿಸಿದೆ.  ಇದಕ್ಕಾಗಿ 31.12.2018 ರಂದು ರಾಜ್ಯ ಸಕರ್ಾರವನ್ನು ಒತ್ತಾಯಿಸಲು ಸಂಡೂರು ತಾಲೂಕಾ ಕಛೇರಿ ಎದುರು ಪ್ರತಿ ಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆಯೆಂದು ಡಿ.ಹೆಚ್.ಎಸ್ ತಿಳಿಸಿದ್ದಾರೆ. ಯು. ಬಸವರಾಜ ರಾಜ್ಯ ಸಹ ಸಂಚಾಲಕರು. ಬಿ. ಮಾಳಮ್ಮ. ರಾಜ್ಯ ಸಹಸಂಚಾಲಕರು ಎಂ. ಜಂಬಯ್ಯ ನಾಯಕ ಜಿಲ್ಲಾ ಸಂಚಾಲಕರು. ಎಸ್ ಸತ್ಯ ಮೂತರ್ಿ 

ತಾಲೂಕಾ ಸಂಚಾಲಕರು. ಬಿ.ರಮೇಶ್ ಕುಮಾರ್ ತಾಲೂಕಾ ಮುಖಂಡರು ದುರುಗಮ್ಮ ಸಂಡೂರು ತಾಲೂಕಾ ಕಾರ್ಯದಶರ್ಿ  ಕನರ್ಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಇವರು ಉಪಸ್ಥಿತರಿರುವರು.

ಸುದ್ದಿ ಓದಿ