ಬಾಲಕಿಗೆ ದೇವಸ್ಥಾನ ಪ್ರವೇಶ ನಿಭಂರ್ಧಿಸಿ ಜಾತಿ ನಿಂದನೆ ಮಾಡಿದ್ದನ್ನು ಖಂಡಿಸಿ ಮನವಿ
ಶಿಗ್ಗಾವಿ 18: ರಾಮನಗರ ಜಿಲ್ಲೆಯ ಚನ್ನಮಾನಹಳ್ಳಿಯಲ್ಲಿ 13 ವರ್ಷದ ದಲಿತ ಬಾಲಕಿಗೆ ದೇವಸ್ಥಾನ ಪ್ರವೇಶ ನಿಭಂರ್ಧಿಸಿ ಜಾತಿ ನಿಂದನೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಶಿಗ್ಗಾವಿ ತಾಲೂಕ ಸಮಿತಿ ವತಿಯಿಂದ ಪ್ರತಿಭಟಿಸಿ ತಹಶೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಅರ್ಿಸಿ ಒತ್ತಾಯಿಸಲಾಯಿತು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಸರ್ವೆ ಸಾಮಾನ್ಯವಾಗಿದ್ದು ದುರಂತ, ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾವರಿಷ್ಠಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಯಾವದೇ ರೀತಿಯ ಕಾನೂನ ಅರಿವು ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ನೀಡದೆ ಕಣ್ಣು ಮುಚ್ಚಿ ಕುಂತಿರುವುದು ಇದಕ್ಕಿಂತ ದೊಡ್ಡ ದುರಂತದ ದಂಗತಿಯಾಗಿದೆ, ದಲಿತ ಬಾಲಕಿ ತನ್ನ ಮನೆಯ ಹತ್ತಿರದಲ್ಲಿ ಇದ್ದ ಮಾರಮ್ಮನ ದೇವಸ್ಥಾನದ ಬಳಿ ನಲ್ಲಿಯಲ್ಲಿ ನೀರು ತುಂಬಿಸಲು ಬಿಂದಗೆ ತೆಗೆದುಕೊಂಡು ಹೋದಾಗ ಪೂಜಾರಿ ಕುಮಾರ ಮತ್ತು ಆತನ ಸಹೋದರಿ ಯಶೋಧಾ ಇಬ್ಬರೂ ಸೇರಿ ಜಾತಿ ನಿಂದನೆ ಮಾಡಿ ಅಪಮಾನ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದ ಬಾಲಕಿಯ ಚಿಕ್ಕಪ್ಪ ಪ್ರಸನಕುಮಾರ ಮತ್ತು ಆತನ ಸ್ನೇಹಿತನ ಮೇಲೂ ಹಲ್ಲೆ ಮಾಡಿದ್ದಾರೆ.
ಘಟನೆ ಸಂಭಂಧ ಪ್ರಸನಕುಮಾರ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ ಪೂಜಾರಿ ಮತ್ತು ಆತನ ಸಹೋದರಿ ಕಲ್ಲಿನಿಂದ ಹಲ್ಲೆ ಮಾಡಿದ್ದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರನ್ನು ಪೊಲೀಸ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಈ ಸಾಮಾಜಿಕ ದೂರಣೆ ನಿಲ್ಲುವುದು ಯಾವಾಗ ಮತ್ತು ಇಂತಹ ಅನ್ಯಾಕ್ಕೆ ಕಾನೂನ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕ್ರಮ ಜರಗಿಸಬೇಕು ಮತ್ತು ಚನ್ನಮಾರನಹಳ್ಳಿ ದಲಿತ ಜನಾಂಗಕ್ಕೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಲೂಕಾದ್ಯಕ್ಷ ಮಂಜುನಾಥ ಬಾಲಪ್ಪನವರ, ಯಲ್ಲಪ್ಪ ಅಂದಲಗಿ, ಫಕ್ಕೀರೇಶ ದೊಡ್ಡಮನಿ, ದುರಗಪ್ಪ ಹಿಂದಿನಮನಿ, ಫಕ್ಕೀರೇಶ ದೊಡ್ಡಮನಿ, ಸಂತೋಷ ಮಾದರ, ಪಕ್ಕೀರೇಶ ಹರಿಜನ, ಸಂಜೀವ ಪಾಳೇದ ಪಕ್ಕೀರೇಶ ಮಾದರ, ನಾಗಪ್ಪ ಮಾದರ, ರಮೇಶ ಕೊದ್ದಡ್ಡಿ, ಶಾಂತಪ್ಪ ಕೆಂಚಣ್ಣವರ, ಅನೀಲ ದೊಡ್ಡಮನಿ, ಮಂಜುನಾಥ ಮಾದರ, ಮಹೇಶ ಕೆಳಗಿನಮನಿ, ಮಂಜುನಾಥ ಸೂಕಪ್ಪನವರ ಸೇರಿದಂತೆ ಪದಾಧಿಕಾರಿಗಳು ಇದ್ದರು.